ಶ್ರೀಲಂಕಾ ವಿರುದ್ಧ 2 ಟೆಸ್ಟಿಗೆ ಭಾರತ ತಂಡ ಪ್ರಕಟ, ಕೆಎಲ್ ರಾಹುಲ್ ಇನ್

Posted By:

ಮುಂಬೈ, ಅಕ್ಟೋಬರ್ 23: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಆಯ್ಕೆ ಮಾಡಿದೆ.

ಕ್ರಿಕೆಟ್ : ಶ್ರೀಲಂಕಾದಿಂದ ಭಾರತ ಪ್ರವಾಸ, ವೇಳಾಪಟ್ಟಿ

ಮೂರು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಎರಡು ಪಂದ್ಯಗಳಿಗೆ ಎಂಎಸ್ ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ 15 ಆಟಗಾರರ ತಂಡವನ್ನು ಆಯ್ಕೆ ಮಾಡಿದೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ಅಜಿಂಕ್ಯಾ ರಹಾನೆ ಅವರಿಗೆ ತಂಡದ ಉಪನಾಯಕನ ಹೊಣೆ ನೀಡಲಾಗಿದೆ.

Sri Lanka series BCCI announces india squad for first two tests

ಮೊದಲ ಟೆಸ್ಟ್ ಪಂದ್ಯ ನವೆಂಬರ್ 16 ರಿಂದ 20 ಕೋಲ್ಕತಾದಲ್ಲಿ ನಡೆಯಲಿದ್ದು 2ನೇ ಟೆಸ್ಟ್ ಪಂದ್ಯ ನವೆಂಬರ್ 24-28 ನಾಗ್ಪುರ್ ದಲ್ಲಿ ನಡೆಲಿಯದೆ. ಇನ್ನು ಕೊನೆ ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 2-6, ದೆಹಲಿ ನಡೆಯಲಿದೆ.

ಅಭಿನವ್ ಮುಕ್ಕುಂದ್ ಅವರನ್ನು ಕೈಬಿಟ್ಟು ಗಾಯಾಳುವಾಗಿದ್ದ ಬ್ಯಾಟ್ಸ್ ಮನ್ ಮುರುಳಿ ವಿಜಯ್ ಅವರಿಗೆ ಅವಕಾಶ ನೀಡಲಾಗಿದೆ.

ಬೌಲಿಂಗ್ ವಿಭಾಗದಲ್ಲಿ ಮೂರು ಸ್ಪಿನ್ನರ್ ಹಾಗೂ ಮೂವರು ವೇಗದ ಬೌಲರ್ ಗಳನ್ನು ಆಯ್ಕೆ ಮಾಡಲಾಗಿದ್ದು. ಆರ್. ಅಶ್ವಿನ್. ಜಡೇಜಾ, ಕುಲದೀಪ್ ಯಾದವ್ ಸ್ಪಿನ್ ವಿಭಾಗವನ್ನು ನಿಭಾಯಿಸಲಿದ್ದಾರೆ.

ಇನ್ನು ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ ಬೌಲಿಂಗ್ ವಿಭಾಗದ ಪ್ರಮುಖ ಟ್ರಂಪ್ ಕಾರ್ಡ್. ಬ್ಯಾಟ್ಸ್ ಮನ್ ಗಳ ವಿಭಾಗವನ್ನು ನೋಡುವುದಾದರೇ ಮುರುಳಿ ವಿಜಯ್, ಕೆಎಲ್ ರಾಹುಲ್, ಶಿಖರ್ ದವನ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವ ದಾಂಡಿಗರಾಗಿದ್ದಾರೆ.

ಮಿಡಲ್ ಆರ್ಡರ್ ನಲ್ಲಿ ನಾಯಕ ವಿರಾಟ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ವೃದ್ದಿಮಾನ್ ಸಹಾ ಬ್ಯಾಟ್ ಬೀಸಲಿದ್ದಾರೆ. ಕೊನೆಗಳಿಗೆಯಲ್ಲಿ ತಂಡದ ರನ್ ವೇಗ ಹೆಚ್ಚಿಸಲು ಹಾರ್ದಿಕ್ ಪಾಂಡ್ಯ ಇದ್ದಾರೆ.

ತಂಡ ಇಂತಿದೆ: ಟೀಂ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ (ಉಪನಾಯಕ), ವೃದ್ದಿಮಾನ್ ಸಹಾ, ಆರ್ ಅಶ್ವಿನ್. ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ,

Story first published: Monday, October 23, 2017, 13:17 [IST]
Other articles published on Oct 23, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ