27 ವರ್ಷಗಳ ನಂತರ ಭಾರತದ ವಿರುದ್ಧ ದಾಖಲೆ ಬರೆಯಲು ಶ್ರೀಲಂಕಾ ಸಜ್ಜು!
ಆಗಸ್ಟ್ 5 ಸೋಮವಾರ, ಪ್ರಸ್ತುತ ಭಾರತ ತಂಡವು ಟಿ20 ಮತ್ತು ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿದೆ. ಈಗಾಗಲೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ 3 ಟಿ20 ಪಂದ್ಯಗಳ ಸರಣಿಯನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಇದೀಗ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಆಡಲಾಗುತ್ತಿದೆ.ಈ ಸರಣಿಯ ಮೊದಲ ಪಂದ್ಯ ಸಮವಾಗಿದ್ದ ಕಾರಣ ಸಮಬಲಗೊಂಡಿತ್ತು. ಆ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ 34 ರನ್‌ಗಳ ಜಯ ಸಾಧಿಸಿತ್ತು.

27 ವರ್ಷಗಳ ಗೆಲುವಿನ ಓಟಕ್ಕೆ ಬ್ರೇಕ್!
ಶ್ರೀಲಂಕಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರಸ್ತುತ 1-0 ಮುನ್ನಡೆ ಸಾಧಿಸಿದೆ. ಈ ಸರಣಿಯನ್ನು ಗೆಲ್ಲಲು ಕೇವಲ ಒಂದು ಪಂದ್ಯದ ಅಗತ್ಯವಿದೆ. ಆದರೆ, ಭಾರತವು ಕೊನೆಯ ಪಂದ್ಯವನ್ನು ಗೆದ್ದರೂ ಈ ಸರಣಿಯನ್ನು ಗೆಲ್ಲಲು ಸಾಧ್ಯವಿಲ್ಲ.
ಏಕೆಂದರೆ ಮೊದಲ ಪಂದ್ಯವು ಟೈ ಆಗಿತ್ತು. ಶ್ರೀಲಂಕಾ ತಂಡವು ಕೊನೆಯ ಪಂದ್ಯದಲ್ಲಿ ಗೆದ್ದರೆ, ಭಾರತದ 27 ವರ್ಷಗಳ ಗೆಲುವಿನ ಓಟ ಕೊನೆಗೊಳ್ಳುತ್ತದೆ. ಈ ಮೂಲಕ ಶ್ರೀಲಂಕಾ 27 ವರ್ಷಗಳ ಬಳಿಕ ಟೀಮ್ ಇಂಡಿಯಾ ಎದುರು ಸರಣಿ ಗೆದ್ದ ದಾಖಲೆ ಬರೆಯಲಿದೆ.
ಶ್ರೀಲಂಕಾ ಸರಣಿ ಗೆದ್ದಿದ್ದು ಯಾವಾಗ?
ಶ್ರೀಲಂಕಾ ಕೊನೆಯ ಬಾರಿಗೆ ಭಾರತದ ವಿರುದ್ಧ ಏಕದಿನ ಸರಣಿಯನ್ನುಸುಮಾರು 27 ವರ್ಷಗಳ ಹಿಂದೆ ಅಂದರೆ 1997 ರಲ್ಲಿ ಗೆದ್ದಿತ್ತು. ಅಂದಿನಿಂದ ಶ್ರೀಲಂಕಾ ತಂಡಕ್ಕೆ ಒಂದೇ ಒಂದು ಏಕದಿನ ಸರಣಿಯಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಿಲ್ಲ.
1997ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಿಸಲಾಗಿತ್ತು. ಈ ಸರಣಿಯಲ್ಲಿ ಭಾರತ ತಂಡವನ್ನು ಶ್ರೀಲಂಕಾ ಸೋಲಿಸಿತ್ತು.
ಈ ಸರಣಿಯ ನಂತರ ಭಾರತ ಮತ್ತು ಶ್ರೀಲಂಕಾ ನಡುವೆ ಒಟ್ಟು 10 ಏಕದಿನ ಸರಣಿಗಳು ನಡೆದಿವೆ. ಆದರೆ ಶ್ರೀಲಂಕಾ ತಂಡ ಒಂದೇ ಒಂದು ದ್ವಿಪಕ್ಷೀಯ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಸತತ 27 ವರ್ಷಗಳ ಕಾಲ ಟೀಮ್ ಇಂಡಿಯಾ ತನ್ನ ಪ್ರಾಬಲ್ಯದಿಂದ ಮೆರೆದಿದೆ.
ಗೆಲ್ಲುವ ಪಂದ್ಯ ಕೈ ಚೆಲ್ಲಿದ ಭಾರತ
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭಾರತ ಕೈ ಚೆಲ್ಲಿತ್ತು. ಭಾರತಕ್ಕೆ 15 ಎಸೆತಗಳಲ್ಲಿ 1 ರನ್ ಅಗತ್ಯವಿದ್ದಾಗ ಗೆಲುವಿನ ಸಮೀಪದಲ್ಲಿತ್ತು. ಜೊತೆಗೆ ಎರಡು ವಿಕೆಟ್‌ಗಳನ್ನು ಉಳಿಸಿಕೊಂಡಿತ್ತು.
ಇದಾದ ನಂತರ ಮುಂದಿನ ಎಸೆತದಲ್ಲಿ ಶಿವಂ ದುಬೆ ಔಟಾದರು. 9 ವಿಕೆಟ್ ಪತನದ ಬಳಿಕ ಬ್ಯಾಟಿಂಗ್‌ಗೆ ಬಂದ ಅರ್ಷದೀಪ್ ಸಿಂಗ್ ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ಈ ಕಾರಣದಿಂದಾಗಿ ಗೆಲ್ಲುವ ಪಂದ್ಯವನ್ನು ಟೈ ಮಾಡಿಕೊಳ್ಳಬೇಕಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications