For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ Vs ಆಸ್ಟ್ರೇಲಿಯಾ : ಸೋಲಿಗೆ ಕಾರಣ ತಿಳಿಸಿದ ನಾಯಕ ದಸುನ್ ಶನಕ

Sri Lanka Skipper Dasun Shanaka Disappointed With His Batters After Lost The Match Against Australia

ಟಿ20 ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಳು ವಿಕೆಟ್‌ಗಳ ಸೋಲಿನ ನಂತರ, ಶ್ರೀಲಂಕಾದ ನಾಯಕ ದಸುನ್ ಶನಕ ಅವರು ಮಧ್ಯಮ ಓವರ್‌ಗಳಲ್ಲಿ ತಮ್ಮ ತಂಡದ ಬ್ಯಾಟರ್ ಹೋರಾಡಿದರು ಮತ್ತು 15-20 ರನ್‌ ಕಡಿಮೆ ಗಳಿಸಿದರು ಎಂದು ಹೇಳಿದರು.

ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಆರನ್ ಫಿಂಚ್ 69 ರನ್‌ಗಳ ಜೊತೆಯಾಟದ ನೆರವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವು ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್‌ನ ಗ್ರೂಪ್ 1, ಸೂಪರ್ 12 ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮಂಗಳವಾರ ಪರ್ತ್‌ನಲ್ಲಿ ಏಳು ವಿಕೆಟ್‌ಗಳ ಜಯ ದಾಖಲಿಸಿತು.

"ನಾವು ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಆರಂಭಿಸಿದೆವು ಮತ್ತು ಉತ್ತಮವಾಗಿ ಮುಗಿಸಿದ್ದೇವೆ, ಆದರೆ ನಾವು ಮಧ್ಯಮ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸಲಿಲ್ಲ. ನಾವು ಇನ್ನೂ 15-20 ರನ್‌ಗಳನ್ನು ಗಳಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ. ವೇಗದ ಬೌಲರ್‌ಗಳು ಉತ್ತಮ ತಯಾರಿ ನಡೆಸಲಿಲ್ಲ, ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬೌನ್ಸ್‌ನಿಂದಾಗಿ ಹೊಸ ಚೆಂಡಿನೊಂದಿಗೆ ಇದು ಕಠಿಣವಾಗಿತ್ತು. ಫಿಂಚ್ ಕೂಡ ಹೊಸ ಚೆಂಡಿನಲ್ಲಿ ಆಡಲು ಪರದಾಡಿದರು. ನಂತರದ ಭಾಗದಲ್ಲಿ ಅವರು ನಿಜವಾಗಿಯೂ ಉತ್ತಮವಾಗಿ ಆಡಿದರು," ಎಂದು ಪಂದ್ಯದ ನಂತರ ದಸುನ್ ಶನಕ ಹೇಳಿದರು.

Sri Lanka Skipper Dasun Shanaka Disappointed With His Batters After Lost The Match Against Australia

ಸಾಧಾರಣ ಮೊತ್ತ ಕಲೆಹಾಕಿದ ಶ್ರೀಲಂಕಾ

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಓಪನರ್ ಪಾಥುಮ್ ನಿಸ್ಸಾಂಕ (40) ತಮ್ಮ ತಂಡದ ಪರ ಗರಿಷ್ಠ ಸ್ಕೋರ್ ಮಾಡಿದರು ಮತ್ತು ಅವರ ಜೊತೆಗಾರ ಧನಂಜಯ ಡಿ ಸಿಲ್ವಾ (26) ಅವರೊಂದಿಗೆ 69 ರನ್‌ಗಳ ಜೊತೆಯಾಟವನ್ನು ರಚಿಸಿದರು.

ಎರಡನೇ ವಿಕೆಟ್‌ ಪತನದ ನಂತರ ಆಸ್ಟ್ರೇಲಿಯಾವು ಕೆಲವು ತ್ವರಿತ ವಿಕೆಟ್‌ಗಳನ್ನು ಪಡೆಯಿತು, ಚರಿತ್ ಅಸಲಂಕಾ ಅಜೇಯ 38 ರನ್ ಗಳಿಸುವ ಮೂಲಕ ಶ್ರೀಲಂಕಾ 157 ರನ್ ಕಲೆಹಾಕಲು ಸಾಧ್ಯವಾಯಿತು. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಹ್ಯಾಜಲ್‌ವುಡ್, ಅಗರ್ ಮತ್ತು ಮ್ಯಾಕ್ಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು.

Sri Lanka Skipper Dasun Shanaka Disappointed With His Batters After Lost The Match Against Australia

ಸ್ಟೊಯಿನಿಸ್ ಸ್ಫೋಟಕ ಆಟ

158 ರನ್‌ಗಳನ್ನು ಬೆನ್ನಟ್ಟಿದ ಆಸ್ಟ್ರೇಲಿಯ ನಿಧಾನಗತಿಯ ಆರಂಭವನ್ನು ಪಡೆಯಿತು, ಪವರ್‌ಪ್ಲೇಯಲ್ಲಿ ಒಂದು ವಿಕೆಟ್ ಕಳೆದುಕೊಂಡು 33 ರನ್ ಗಳಿಸಿತು. ಆಸ್ಟ್ರೇಲಿಯಾ ತನ್ನ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಅನ್ನು ಸಹ ಗಳಿಸದೆ ಪವರ್‌ಪ್ಲೇ ಮುಗಿಸಿತು.

ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ 12 ಎಸೆತಗಳಲ್ಲಿ 23 ರನ್ ಗಳಿಸಿ ಆಸ್ಟ್ರೇಲಿಯಾ ತಂಡದ ರನ್ ಗಳಿಕೆಯ ವೇಗ ಹೆಚ್ಚಿಸಿದರು. ಮ್ಯಾಕ್ಸ್‌ವೆಲ್ ಔಟಾದ ನಂತರ ಬಂದ ಸ್ಟೊಯಿನಿಸ್ 18 ಎಸೆತಗಳಲ್ಲಿ 59 ರನ್ ಗಳಿಸಿ ಶ್ರೀಲಂಕಾದ ಬೌಲರ್ ಗಳನ್ನು ಕಾಡಿದರು. ನಾಯಕ ಆ್ಯರನ್ ಫಿಂಚ್ 42 ಎಸೆತಗಳಲ್ಲಿ 31 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 2 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ, ಎರಡು ಅಂಕ ಹೊಂದಿದ್ದರೂ ಉತ್ತಮ ರನ್ ರೇಟ್ ಹೊಂದಿರುವ ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ. ತಮ್ಮ ಸ್ಫೋಟಕ ಆಟಕ್ಕಾಗಿ ಮಾರ್ಕಸ್ ಸ್ಟೊಯಿನಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Tuesday, October 25, 2022, 23:06 [IST]
Other articles published on Oct 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+