For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ತಂಡದ ಗುರಿ ಈಗ ಗೆಲುವು ಮಾತ್ರ: ಯುಎಇ ವಿರುದ್ಧದ ಗೆಲುವಿನ ಬಳಿಕ ದಸುನ್ ಶನಕ ಹೇಳಿಕೆ

Sri Lanka skipper Dasun Shanaka statement after win against USE said team was only focused on winning

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಶ್ರೀಲಂಕಾ ಎರಡನೇ ಪಂದ್ಯದಲ್ಲಿ ಯುಎಇ ತಂಡಕ್ಕೆ ಸೋಲುಣಿಸಿ ಗೆಲುವಿನ ಖಾತೆ ತೆರೆದಿದೆ. ಈ ಮೂಲಕ ಸೂಪರ್ 12 ಹಂತಕ್ಕೇರುವ ಸ್ಪರ್ಧೆಯಲ್ಲಿ ದಸುನ್ ಶನಕ ಪಡೆ ಮುಂದುವರಿದಿದೆ. ಯುಎಇ ವಿರುದ್ಧದ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಶ್ರೀಲಂಕಾ ನಾಯಕ ದಸುನ್ ಶನಕ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು ತಮ್ಮ ಗುರಿ ಮುಂದಿನ ಪಂದ್ಯಗಳನ್ನು ಗೆಲ್ಲುತ್ತಾ ಮುಂದುವರಿಯುವುದಾಗಿದೆ ಎಂದಿದ್ದಾರೆ.

ಈ ಗೆಲುವಿಗಾಗಿಯೇ ಪ್ರೇಕ್ಷಕರು ಇಲ್ಲಿ ನೆರೆದಿದ್ದರು ಎಂದು ಭಾವಿಸುತ್ತೇನೆ. ಇಲ್ಲಿ ಗೆಲುವು ಸಾಧಿಸುವುದು ನಮಗೆ ಬಹಳ ಮುಖ್ಯವಾಗಿತ್ತು. ನಾವು ಕೇವಲ ಗೆಲುವಿನತ್ತ ಮಾತ್ರವೇ ದೃಷ್ಟಿ ನೆಟ್ಟಿದ್ದೇವೆ ಎಂದು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದು ಇನ್ನಷ್ಟು ಹೆಚ್ಚಿನ ಮೊತ್ತವನ್ನು ಗಳಿಸಬಹುದಾಗಿತ್ತು ಎಂದಿದ್ದಾರೆ.

"150 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿದ್ದಕ್ಕೆ ಬೇಸರವಾಗಿದೆ. ಆರಂಭಿಕರಿಂದ ಉತ್ತಮ ಅಡಿಪಾಯ ದೊರೆತ ಬಳಿಕ ನಾವು ಈ ಮೊತ್ತವನ್ನು 180-190ರ ವರೆಗೆ ತಲುಪಿಸಬಹುದಾಗಿತ್ತು. ಆದರೆ ಮಧ್ಯಮ ಓವರ್‌ಗಳಲ್ಲಿ ನಾನು ಹಾಗೂ ಭಾನುಕಾ ರಾಜಪಕ್ಷ ಅವರು ಕ್ರೀಸ್‌ನಲ್ಲಿ ನೆಲೆಯೂಡಲು ಸಾಧ್ಯವಾಗಲಿಲ್ಲ" ಎಂದು ದಸುನ್ ಶನಕ ಹೇಳಿಕೆ ನೀಡಿದ್ದಾರೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಅದರೆ ಮಧ್ಯಮ ಕ್ರಮಾಂಕದ ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ತಂಡಕ್ಕೆ ಆಘಾತ ಉಂಟು ಮಾಡಿದರು. ಆದರೆ ಫಾತುಮ್ ನಿಸ್ಸಾಂಕ ಏಕಾಂಗಿ ಹೋರಾಟ ನಡೆಸಿ ತಂಡದ ಮೊತ್ತ 152 ಆಗಲು ಕಾರಣವಾದರು. ನಿಸ್ಸಾಂಕ 74 ರನ್ ಬಾರಿಸಿ ಮಿಂಚಿದ್ದಾರೆ. ಯುಎಇ ಪರವಾಗಿ ಸ್ಪಿನ್ನರ್ ಕಾರ್ತಿಕ್ ಮೆಯ್ಯಪ್ಪನ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದಾರೆ.

ಇನ್ನು ಶ್ರೀಲಂಕಾ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡ ಆರಂಭದಿಂದಲೇ ಆಘಾತಕ್ಕೆ ಒಳಗಾಯಿತು. ಯಾವ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮವಾಗಿ ಕೇವಲ 17.1 ಓವರ್‌ನಲ್ಲಿ ಯುಎಇ 73 ರನ್‌ಗಳಿಸಿ ಆಲೌಟ್ ಆಯಿತು. ಬೌಲಿಂಗ್‌ನಲ್ಲಿ ಶ್ರೀಲಂಕಾ ಪರವಾಗಿ ದುಷ್ಮಂತ ಚಮೀರಾ ಹಾಗೂ ವನಿಂದು ಹಸರಂಗ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

ಇತ್ತಂಡಗಳ ಆಡುವ ಬಳಗ: ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ಪ್ರಮೋದ್ ಮದುಶನ್, ಮಹೇಶ್ ತೀಕ್ಷಣ
ಬೆಂಚ್: ದನುಷ್ಕ ಗುಣತಿಲಕ, ದಿಲ್ಶನ್ ಮಧುಶಂಕ, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ

ಯುಎಇ: ಚಿರಾಗ್ ಸೂರಿ, ಮುಹಮ್ಮದ್ ವಸೀಮ್, ಕಾಶಿಫ್ ದೌದ್, ವೃತ್ಯ ಅರವಿಂದ್ (ವಿಕೆಟ್ ಕೀಪರ್), ಆರ್ಯನ್ ಲಾಕ್ರಾ, ಬಾಸಿಲ್ ಹಮೀದ್, ಚುಂಡಂಗಪೊಯಿಲ್ ರಿಜ್ವಾನ್ (ಸಿ),
ಅಯಾನ್ ಅಫ್ಜಲ್ ಖಾನ್, ಕಾರ್ತಿಕ್ ಮೇಯಪ್ಪನ್, ಜುನೈದ್ ಸಿದ್ದಿಕ್, ಜಹೂರ್ ಖಾನ್
ಬೆಂಚ್: ಜವಾರ್ ಫರೀದ್, ಅಹ್ಮದ್ ರಜಾ, ಅಲಿಶನ್ ಶರಾಫು, ಸಬೀರ್ ಅಲಿ

Story first published: Tuesday, October 18, 2022, 20:13 [IST]
Other articles published on Oct 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+