T20 World Cup 2024: ಟಿ20 ವಿಶ್ವಕಪ್‌ಗೆ ಬಲಿಷ್ಠ ಶ್ರೀಲಂಕಾ ತಂಡ ಪ್ರಕಟ; ವನಿಂದು ಹಸರಂಗ ನಾಯಕ
ಇದೇ ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಪ್ರಾರಂಭವಾಗುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ 15 ಸದಸ್ಯರ ಬಲಿಷ್ಠ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, ಲೆಗ್-ಸ್ಪಿನ್ನರ್ ವನಿಂದು ಹಸರಂಗ ಸಿಂಹಳೀಯರನ್ನು ಮುನ್ನಡೆಸಲಿದ್ದಾರೆ.
ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ 2016ರ ನಂತರ ಮೊದಲ ಬಾರಿಗೆ ಟಿ20 ವಿಶ್ವಕಪ್ ತಂಡಕ್ಕೆ ಮರಳಲಿದ್ದಾರೆ. ಇದೇ ವೇಳೆ ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವಾಗ ಗಾಯಗೊಂಡ ಹೊರತಾಗಿಯೂ ಯುವ ವೇಗಿ ವೇಗಿ ಮಥೀಶ್ ಪತಿರಾನ ಕೂಡ ಸೇರ್ಪಡೆಗೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಶ್ರೀಲಂಕಾ ಟಿ20 ನಾಯಕರಾಗಿ ನೇಮಕಗೊಂಡಿದ್ದ ವನಿಂದು ಹಸರಂಗ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಚರಿತ್ ಅಸಲಂಕಾ ಅವರನ್ನು ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
2014ರಲ್ಲಿ ಶ್ರೀಲಂಕಾ ತಂಡದ ಗೆಲುವಿನ ಅಭಿಯಾನದ ಭಾಗವಾಗಿದ್ದ ಏಂಜೆಲೊ ಮ್ಯಾಥ್ಯೂಸ್ ಅವರು ಇದೀಗ ತಮ್ಮ ಆರನೇ ಟಿ20 ವಿಶ್ವಕಪ್ ಪ್ರದರ್ಶನದ ಭಾಗವಾಗಲಿದ್ದಾರೆ.
ಶ್ರೀಲಂಕಾ ತಂಡ ತಮ್ಮ ಮಾಜಿ ನಾಯಕ ದಸುನ್ ಶನಕ ಅವರನ್ನು ಕೂಡ ಏಕದಿನ ತಂಡದ ನಾಯಕ ಕುಸಾಲ್ ಮೆಂಡಿಸ್ ಮತ್ತು ಟೆಸ್ಟ್ ನಾಯಕ ಧನಂಜಯ ಡಿ ಸಿಲ್ವಾ ಅವರೊಂದಿಗೆ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದೆ.
ಹಲವು ರಾಷ್ಟ್ರಗಳು ತಮ್ಮ ವಿಶ್ವಕಪ್ ತಂಡಗಳನ್ನು ಘೋಷಿಸಲು ವಿಶಿಷ್ಟವಾದ ಮಾರ್ಗಗಳನ್ನು ಕಂಡುಕೊಳ್ಳುವ ಪ್ರವೃತ್ತಿಯನ್ನು ಹಿಂಬಾಲಿಸಿ, ಶ್ರೀಲಂಕಾ ತಮ್ಮ ಟಿ20 ವಿಶ್ವಕಪ್ ತಂಡದ ಆಟಗಾರರನ್ನು ಹೆಸರಿಸಲು ಅಭಿಮಾನಿಗಳನ್ನು ಆಕರ್ಷಿಸಿತು.
ಭಾನುಕಾ ರಾಜಪಕ್ಸೆ ಅವರು ಟಿ20 ವಿಶ್ವಕಪ್‌ಗಾಗಿ ನಾಲ್ಕು ಪ್ರಯಾಣ ಮೀಸಲು ಆಟಗಾರರಲ್ಲಿ ಸೇರಿದ್ದಾರೆ. ಮೇ 8ರಂದು ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಲೆಗ್-ಸ್ಪಿನ್ನರ್ ವಿಜಯಕಾಂತ್ ವ್ಯಾಸಕಾಂತ್ ಸಹ ಪ್ರಯಾಣದ ಮೀಸಲು ಆಟಗಾರರ ಭಾಗವಾಗಿದೆ.
ಶ್ರೀಲಂಕಾ ಎದುರಾಳಿ ಪಾಳಯದಲ್ಲಿ ತಲ್ಲಣ ಮೂಡಿಸಲು ತಮ್ಮ ಲಸಿತ್ ಮಾಲಿಂಗ ಶೈಲಿಯ ವೇಗಿಗಳಾದ ನುವಾನ್ ತುಷಾರ ಮತ್ತು ಮಥೀಶ ಪತಿರಾನ ಇಬ್ಬರನ್ನೂ ಆಯ್ಕೆ ಮಾಡಿದೆ. ಎಡಗೈ ವೇಗಿ ದಿಲ್ಶನ್ ಮಧುಶಂಕ ಮತ್ತು ಅನುಭವಿ ದುಷ್ಮಂತ ಚಮೀರಾ ಕೂಡ ಶ್ರೀಲಂಕಾ ವೇಗದ ದಾಳಿಯ ಭಾಗವಾಗಿದ್ದಾರೆ.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ದುನಿತ್ ವೆಲ್ಲಲಗೆ ಮತ್ತು ಮಹೀಶ್ ತೀಕ್ಷಣ ಅವರು ತಮ್ಮ ನಾಯಕ ವನಿಂದು ಹಸರಂಗ ಅವರೊಂದಿಗೆ ಪ್ರಬಲ ಸ್ಪಿನ್ ದಾಳಿಯಲ್ಲಿ ಸೇರಿಕೊಳ್ಳಲಿದ್ದಾರೆ.
6ನೇ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ ಮತ್ತು ಧನಂಜಯ ಡಿ ಸಿಲ್ವಾ ಅವರು ಬಲಿಷ್ಠ ತಂಡದಲ್ಲಿ ಆಲ್‌ರೌಂಡ್ ಆಯ್ಕೆಗಳಾಗಿ ಸೇರಿದ್ದಾರೆ.
ಜೂನ್ 3ರಂದು ನ್ಯೂಯಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಲೀಗ್ ಹಂತದ ಡಿ ಗುಂಪಿನಲ್ಲಿ ನೇಪಾಳ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳಿಗೆ ಮೊದಲು ಶ್ರೀಲಂಕಾ ಜೂನ್ 7ರಂದು ಬದ್ಧ ಎದುರಾಳಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
2024ರ ಐಸಿಸಿ ಟಿ20 ವಿಶ್ವಕಪ್‌ಗೆ ಶ್ರೀಲಂಕಾ ತಂಡ ಪ್ರಕಟ
ವನಿಂದು ಹಸರಂಗ (ನಾಯಕ), ಚರಿತ್ ಅಸಲಂಕಾ (ಉಪನಾಯಕ), ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಸದೀರ ಸಮರವಿಕ್ರಮ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ಧನಂಜಯ ಡಿ ಸಿಲ್ವ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ದುಷ್ಮಂತ ಚಮೀರ, ನುವಾನ್ ತುಷಾರ, ಮಥೀಶ ಪತಿರಾನ, ದಿಲ್ಶನ್ ಮಧುಶಂಕ.
ಮೀಸಲು ಆಟಗಾರರು: ಅಸಿತ ಫೆರ್ನಾಂಡೋ, ವಿಜಯಕಾಂತ್ ವ್ಯಾಸಕಾಂತ್, ಭಾನುಕಾ ರಾಜಪಕ್ಸೆ, ಜನಿತ್ ಲಿಯಾನಗೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications