SL vs AUS ODI: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವಿಶ್ವ ಚಾಂಪಿಯನ್ನರಿಗೆ ಆಘಾತ: ಲಂಕಾಗೆ ಸರಣಿ
ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಟೂರ್ನಿ ಆರಂಭಕ್ಕೂ ಮುನ್ನವೇ ಎಲ್ಲ ತಂಡಗಳು ಲಯದಲ್ಲಿರಬೇಕು ಎಂದು ಬಯಸುತ್ತಿವೆ. ಈ ನಿಟ್ಟಿನಲ್ಲಿ ಹಲವು ತಂಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಗಳನ್ನು ಆಡುತ್ತಿವೆ. ಈ ನಡುವೆ ಆಸ್ಟ್ರೇಲಿಯಾ ಸಹ ಶ್ರೀಲಂಕಾ ಪ್ರವಾಸವನ್ನು ಬೆಳೆಸಿತ್ತು. ಈ ಸರಣಿಯಲ್ಲಿ ಮೊದಲು ಟೆಸ್ಟ್ ಪಂದ್ಯವನ್ನು ಆಡಿಸಲಾಯಿತು. ಈ ಸರಣಿಯನ್ನು ಪ್ರವಾಸಿ ತಂಡ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಇನ್ನು ಏಕದಿನ ಸರಣಿಯಲ್ಲಿ ಆತಿಥೇಯ ತಂಡ ಭರ್ಜರಿ ಪ್ರದರ್ಶನ ನೀಡಿ ವೈಟ್ ವಾಶ್ ಸಾಧನೆ ಮಾಡಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆತ್ಮವಿಶ್ವಾಸದಿಂದ ಮೈದಾನಕ್ಕೆ ಇಳಿಯುವ ಕನಸಿಗೆ ಪೆಟ್ಟು ಬಿದ್ದಿದೆ. ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಆಸ್ಟ್ರೇಲಿಯಾ, ಲಂಕಾದಲ್ಲಿ ಮಕಾಡೆ ಮಲಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಆತಿಥೇಯ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 281 ರನ್ ಸೇರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿದ ಆಸ್ಟ್ರೇಲಿಯಾ 107 ರನ್‌ಗಳಿಗೆ ಆಲೌಟ್ ಆಯಿತು.

ಜವಾಬ್ದಾರಿ ಮರೆತ ಬ್ಯಾಟರ್ಸ್
ಶ್ರೀಲಂಕಾ ತಂಡದ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಇವರು ಯಾರು ನೆಲಕಚ್ಚಿ ಬ್ಯಾಟ್ ಮಾಡಲೇ ಇಲ್ಲ. ನಾಯಕ ಸ್ಟೀವನ್ ಸ್ಮಿತ್ ತಂಡದ ಪರ ಗರಿಷ್ಠ ರನ್ ಸಾಧನೆ ಮಾಡಿದರು. ಇವರು 34 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿ ಔಟ್ ಆದರು. ಭರವಸೆಯ ಮಧ್ಯಮ ಕ್ರಮಾಂಕದ ಬ್ಯಾಟರ್ ಜೋಶ್ ಇಂಗ್ಲಿಂಷ್ ಸಹ 4 ಬೌಂಡರಿ ಸೇರಿದಂತೆ 24 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಟ್ರಾವಿಸ್ ಹೆಡ್ 18 ರನ್‌ಗಳಿಗೆ ಆಟ ಮುಗಿಸಿದರು.
ಚಾಂಪಿಯನ್ಸ್ ಟ್ರೋಫಿಗೆ ಲಂಕಾ ಅರ್ಹತೆ ಪಡೆಯದೇ ಇದ್ದರೂ ಸಹ ಅಮೋಘ ಪ್ರದರ್ಶನ ನೀಡಿದೆ. ಶ್ರೀಲಂಕಾ ತಂಡದ ಪರ ದುನೀತಾ ವೆಲ್ಲಾಲಗೆ 4 ವಿಕೆಟ್ ಕಬಳಿಸಿದರೆ, ಅಸಿತಾ ಫೆರ್ನಾಂಡೋ ಹಾಗೂ ವನಿಂದೋ ಹಸರಂಗ ತಲಾ ಮೂರು ವಿಕೆಟ್ ಪಡೆದರು.

ಮೆಂಡೀಸ್ ಶತಕ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾದ ಆರಂಭ ಕಳಪೆಯಾಗಿತ್ತು. ಪತನು ನಿಸ್ಸಂಕಾ ಬೇಗನೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ನಿಶಾಂಕ್ ಮಧುಶಂಕಾ ಹಾಗೂ ಮಧ್ಯಮ ಕ್ರಮಾಂಕದ ಕುಸಾಲ್ ಮೆಂಡೀಸ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 115 ಎಸೆತಗಳಲ್ಲಿ 98 ರನ್ ಸೇರಿಸಿ ಅಬ್ಬರಿಸಿತು. ನಿಶಾಂಕ್ ಮಧುಶಂಕಾ 4 ಬೌಂಡರಿ, 1 ಸಿಕ್ಸರ್ 51 ರನ್ ಸಿಡಿಸಿದರು. ಕಮಿಂದು ಮೆಂಡೀಸ್ (4) ರನ್ ಕಲೆ ಹಾಕುವಲ್ಲಿ ಎಡವಿದರು.
ನಾಲ್ಕನೇ ವಿಕೆಟ್‌ಗೆ ಮೆಂಡೀಸ್ ಹಾಗೂ ಅಸಲಂಕಾ ಜೋಡಿ 104 ಎಸೆತಗಳಲ್ಲಿ 94 ರನ್ ಸಿಡಿಸಿತು. ಚರಿತ್ ಅಸಲಂಕಾ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 78 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕುಸಾಲ್ ಮೆಂಡೀಸ್ 11 ಬೌಂಡರಿ ನೆರವಿನಿಂದ 101 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications