ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕ ಬಾಚಿಕೊಂಡ ಶ್ರೀಲಂಕಾ

ಗಾಲೆ, ಆಗಸ್ಟ್ 18: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ದಾಖಲಿಸಿದ ಆತಿಥೇಯ ಶ್ರೀಲಂಕಾ ತಂಡ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದೆ.
ಗಾಲೆ ಟೆಸ್ಟ್ ಪಂದ್ಯದಲ್ಲಿ 268 ರನ್‌ಗಳ ಗುರಿ ಬೆನ್ನತ್ತಿದ ಆತೀಥೇಯ ಲಂಕಾ ಪಡೆ, ನಾಯಕ ದಿಮುತ್ ಕರುಣಾರತ್ನೆ (122) ಅವರ ಅದ್ಭುತ ಶತಕದ ನೆರವಿನಿಂದ ಪಂದ್ಯದ ಐದನೇ ದಿನವಾದ ಭಾನುವಾರ ಮೊದಲ ಅವಧಿಯಲ್ಲೇ ಗೆಲುವಿನ ಸಂಭ್ರಮ ಆಚರಿಸಿತು. ಈ ಮೂಲಕ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕಗಳೊಂದಿಗೆ ಶ್ರೀಲಂಕಾ ಖಾತೆ ತೆರೆದಿದೆ.
ಐಸಿನೇ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೆ 133 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕರುಣಾರತ್ನೆ ಮತ್ತು ಲಾಹಿರು ತಿರಿಮನ್ನೆ ಮೊದಲ ವಿಕೆಟ್‌ಗೆ 161 ರನ್‌ಗಳನ್ನು ಜೋಡಿ ಜಯದ ಹಾದಿಯನ್ನು ಸುಗಮವನ್ನಾಗಿಸಿದರು. ಕರುಣಾರತ್ನೆ ಟೆಸ್ಟ್ ಕ್ರಿಕೆಟ್‌ನಲ್ಲಿ ವೃತ್ತಿ ಬದುಕಿನ 9ನೇ ಶತಕ ಬಾರಿಸಿ ಕಂಗೊಳಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 60 ಪಂದ್ಯಗಳನ್ನಾಡಿರುವ ಕರುಣಾರತ್ನೆ 4ನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿರುವುದು ಇದೇ ಮೊದಲ ಬಾರಿ ಆಗಿದೆ.
ದ್ವಿತೀಯ ಟೆಸ್ಟ್ ಪಂದ್ಯ ಆಗಸ್ಟ್ 22ರಂದು (ಗುರುವಾರ) ಕೊಲಂಬೊದಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: ಮೊದಲ ಇನಿಂಗ್ಸ್ 267/10 ಮತ್ತು ಎರಡನೇ ಇನಿಂಗ್ಸ್ 268/4 (ದಿಮುತ್ ಕರುಣಾರತ್ನೆ 122, ಲಾಹಿರು ತಿರಿಮನ್ನೆ 64; ಟಿಮ್ ಸೌಥೀ 33ಕ್ಕೆ 1).
ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 249/10 ಮತ್ತು ಎರಡನೇ ಇನಿಂಗ್ಸ್ 285/10 (ಬಿಜೆ ವ್ಯಾಟ್ಲಿಂಗ್ 77, ಟಾಮ್ ಲೇಥಮ್ 45; ಲಸಿತ್ ಎಂಬುಲ್ದೆನಿಯಾ 99ಕ್ಕೆ 4).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications