ಕ್ರಿಕೆಟ್ : ಶ್ರೀಲಂಕಾದಿಂದ ಭಾರತ ಪ್ರವಾಸ, ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 03: ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಂಡವು ತನ್ನ ಪ್ರವಾಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಇದಕ್ಕೆ ಇನ್ನೂ ಅಧಿಕೃತ ಮುದ್ರೆ ಬಿದ್ದಿಲ್ಲ. ಹೀಗಾಗಿ ಈ ವೇಳಾಪಟ್ಟಿ ಬದಲಾವಣೆಗೆ ಒಳಪಟ್ಟಿದೆ.
ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿಯಂತೆ, ಶ್ರೀಲಂಕಾ ಹಾಗೂ ಭಾರತ ನಡುವೆ ಮೂರು ಟೆಸ್ಟ್ ಪಂದ್ಯ, ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ನಡೆಯಲಿವೆ.

ಮೊದಲ ಟೆಸ್ಟ್ ಪಂದ್ಯ ನವೆಂಬರ್ 16ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಮೂರು ಏಕದಿನ ಪಂದ್ಯಗಳು ಡಿಸೆಂಬರ್ 10ರಿಂದ ಧರ್ಮಶಾಲಾ, ಮೊಹಾಲಿ ಹಾಗೂ ವಿಶಾಖಪಟ್ಟಣಂನಲ್ಲಿ ನಡೆಯಲಿವೆ. ಮೂರು ಟಿ20 ಪಂದ್ಯಗಳ ಸರಣಿ ಡಿಸೆಂಬರ್ 20ರಂದು ಕಟಕ್ ನಲ್ಲಿ ಆರಂಭವಾಗಲಿದೆ.
ಶ್ರೀಲಂಕಾದಿಂದ ಭಾರತ ಪ್ರವಾಸದ ಪೂರ್ಣ ವೇಳಾಪಟ್ಟಿ
ಟೆಸ್ಟ್ :
ಮೊದಲ ಟೆಸ್ಟ್ ಪಂದ್ಯ: ನವೆಂಬರ್ 16-20 (ಕೋಲ್ಕತಾ)
ಎರಡನೇ ಟೆಸ್ಟ್ ಪಂದ್ಯ: ನವೆಂಬರ್ 24-28, (ನಾಗ್ಪುರ್)
ಮೂರನೇ ಟೆಸ್ಟ್ ಪಂದ್ಯ: ಡಿಸೆಂಬರ್ 2-6, (ದೆಹಲಿ)
ಏಕದಿನ ಪಂದ್ಯ
ಮೊದಲ ಏಕದಿನ ಪಂದ್ಯ: ಡಿಸೆಂಬರ್ 10 (ಧರ್ಮಶಾಲ) - ಭಾನುವಾರ
ಎರಡನೇ ಏಕದಿನ ಪಂದ್ಯ: ಡಿಸೆಂಬರ್ 13 (ಮೊಹಾಲಿ) - ಬುಧವಾರ
ಮೂರನೇ ಏಕದಿನ ಪಂದ್ಯ: ಡಿಸೆಂಬರ್ 17 (ವಿಶಾಖಪಟ್ಟಣಂ) - ಭಾನುವಾರ
ಟಿ20 ಅಂತಾರಾಷ್ಟ್ರೀಯ ಪಂದ್ಯ
ಮೊದಲ ಟಿ20ಐ: ಡಿಸೆಂಬರ್ 20 (ಕಟಕ್) - ಬುಧವಾರ
ಎರಡನೇ ಟಿ20ಐ: ಡಿಸೆಂಬರ್ 22 (ಇಂದೋರ್) - ಶುಕ್ರವಾರ
ಮೂರನೇ ಟಿ20ಐ: ಡಿಸೆಂಬರ್ 24 (ಮುಂಬೈ) - ಭಾನುವಾರ
ಎರಡು ತಿಂಗಳ ಹಿಂದೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಕೊಹ್ಲಿ ಪಡೆ, ಟೆಸ್ಟ್, ಏಕದಿನ ಹಾಗೂ ಏಕೈಕ ಟಿ-20 ಸರಣಿಯನ್ನು 9-0 ಅಂತರದಿಂದ ವೈಟ್‌ವಾಶ್ ಮಾಡಿ ಹೊಸ ದಾಖಲೆ ಬರೆದಿದ್ದು ನೆನಪಿರಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications