ವಿರಾಟ್ ಟೆಸ್ಟ್ ಪಡೆಗೆ ಜುಲೈ 23ಕ್ಕೆ ಅಧಿಕೃತ ಮುದ್ರೆ
ಮುಂಬೈ, ಜು. 16: ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಜುಲೈ 23 ರಂದು ಭಾರತ ತಂಡದ ಆಯ್ಕೆ ಮಾಡಲಾಗುವುದು. ಜುಲೈ 23 ರಂದು ತಂಡದ ಆಯ್ಕೆ ಸಂಬಂಧ ಸಭೆ ನಡೆಯಲಿದ್ದು ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾವನ್ನು ಪ್ರಕಟ ಮಾಡಲಾಗುವುದು.
ವಿರಾಟ್ ಕೊಹ್ಲಿ ನಾಯಕರಾಗಿ ಮುಂದುವರಿಯಲಿದ್ದಾರೆ. ಭಾರತ ತಂಡ ಮೊದಲಿಗೆ ಶ್ರೀಲಂಕಾದ ಅಧ್ಯಕ್ಷರ ಇಲೆವೆಲ್ ತಂಡಂದೊಂದಿಗೆ (ಆಗಸ್ಟ್ 6-8) ಅಭ್ಯಾಸ ಪಂದ್ಯ ಆಡಲಿದೆ. 5 ವರ್ಷದ ನಂತರ ಭಾರತ ತಂಡ ಟೆಸ್ಟ್ ಆಡಲು ಶ್ರೀಲಂಕಾಕ್ಕೆ ತೆರಳುತ್ತಿದೆ. 2010 ರ ಸರಣಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದ್ದವು.[ಎಲ್ಲ ಬಗೆಯ ಕ್ರಿಕೆಟ್ ನಿಯಮದಲ್ಲಿ ಮಹತ್ತರ ಬದಲಾವಣೆ]

ಜಿಂಬಾಬ್ವೆ ವಿರುದ್ಧದ ಏಕದಿಬನ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು. ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಭಾರತವನ್ನು ಮುನ್ನಡೆಸಿದ್ದು ಶ್ರೀಲಂಕಾ ವಿರುದ್ಧ ಹೊಸ ಜವಾಬ್ದಾರಿ ನಿರ್ವಹಿಸುವ ಅವಕಾಶ ಮೊದಲ ಸಾರಿ ಅವರ ಪಾಲಾಗಿದೆ.[ಚಾಂಪಿಯನ್ಸ್ ಲೀಗ್ ಟಿ20 ರದ್ದು ಮಾಡಿದ ಬಿಸಿಸಿಐ]
ಟೆಸ್ಟ್ ಪಂದ್ಯಗಳ ವೇಳಾಪಟ್ಟಿ
* ಮೊದಲನೇ ಟೆಸ್ಟ್- ಆಗಸ್ಟ್ 12-16(ಗಾಲೆ)
* ಎರಡನೇ ಟೆಸ್ಟ್- ಆಗಸ್ಟ್ 20-24(ತಮಿಳ್ ಯುನಿಯನ್ ಒವೆಲ್)
* ಮೂರನೇ ಟೆಸ್ಟ್ - ಆಗಸ್ಟ್ 28 ರಿಂದ ಸೆಪ್ಟಂಬರ್ 1(ಕೊಲಂಬೋ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications