For Quick Alerts
ALLOW NOTIFICATIONS  
For Daily Alerts
 

ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ಗೆ 7 ವಿಕೆಟ್‌ ಗೆಲುವು

Sri Lanka vs England, 1st Test: England won by 7 wickets

ಗ್ಯಾಲೆ: ಜೋ ರೂಟ್ ನಾಯಕನ ಆಟದ ನೆರವಿನಿಂದ ಗ್ಯಾಲೆ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಪ್ರವಾಸಿ ಇಂಗ್ಲೆಂಡ್ ಮತ್ತು ಆತಿಥೇಯ ಶ್ರೀಲಂಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್ ಸುಲಭ ಗೆಲುವು ಕಂಡಿದೆ. ರೂಟ್ ದ್ವಿಶತಕ ನೆರವಿನಿಂದ ಇಂಗ್ಲೆಂಡ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ, ಮೊದಲ ಇನ್ನಿಂಗ್ಸ್‌ನಲ್ಲಿ ಕುಸಾಲ್ ಪೆರೆರಾ 20, ಏಂಜಲೋ ಮ್ಯಾಥ್ಯೂಸ್ 27, ನಾಯಕ ದಿನೇಶ್ ಚಾಂಡಿಮಾಲ್ 28, ದಾಸುನ್ ಶನಕಾ 23, ವನಿಂದು ಹಸಂಗ 19 ರನ್‌ ನೆರವಿನೊಂದಿಗೆ 135 ರನ್ ಗಳಿಸಿತು. ಇಂಗ್ಲೆಂಡ್‌ ತಂಡ, ಜೋ ರೂಟ್ 228, ಜಾನಿ ಬೇರ್ಸ್ಟೋವ್ 47, ಡೇನಿಯಲ್ ಲಾರೆನ್ಸ್ 73, ಜೋಸ್ ಬಟ್ಲರ್ 30 ರನ್‌ನೊಂದಿಗೆ 421 ರನ್ ಗಳಿಸಿತು.

ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕುಸಾಲ್ ಪರೆರಾ 62, ಲಹಿರು ತಿರಿಮನ್ನೆ 111, ಏಂಜಲೋ ಮ್ಯಾಥ್ಯೂಸ್ 71 ರನ್‌ನೊಂದಿಗೆ 359 ರನ್ ಗಳಿಸಿದರೆ, ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜಾನಿ ಬೇರ್ಸ್ಟೋವ್ ಅಜೇಯ 35, ಡೇನಿಯಲ್ ಲಾರೆನ್ಸ್ ಅಜೇಯ 21 ರನ್‌ನೊಂದಿಗೆ 24.2 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 76 ರನ್ ಗಳಿಸಿ ಪಂದ್ಯ ಗೆದ್ದಿತು.

ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ 3, ಡಾಮ್ ಬೆಸ್ 5+3, ಜ್ಯಾಕ್ ಲೀಚ್ 1+5, ಸ್ಯಾಮ್ ಕರನ್ 2 ವಿಕೆಟ್‌ನೊಂದಿಗೆ ಮಿಂಚಿದರೆ, ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ಲಸಿತ್ ಎಂಬುಲ್ಡೆನಿಯಾ 3+2, ಅಸಿತಾ ಫೆರ್ನಾಂಡೋ 2, ದಿಲ್ರುವಾನ್ ಪೆರೆರಾ 4 ವಿಕೆಟ್‌ನಿಂದ ಗಮನ ಸೆಳೆದರು.

Story first published: Monday, January 18, 2021, 18:59 [IST]
Other articles published on Jan 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+