ಫೆರ್ನಾಂಡೋ, ರಾಜಪಕ್ಸ ಅರ್ಧ ಶತಕ, ಭಾರತ ವಿರುದ್ಧ ಶ್ರೀಲಂಕ್ಕಾಕ್ಕೆ ಜಯ

ಕೊಲಂಬೋ: ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ (ಜುಲೈ 23) ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ತೃತೀಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 3 ವಿಕೆಟ್ (ಡಕ್ವರ್ಥ್ ಲೂಯಿಸ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ. ಅವಿಷ್ಕ ಫೆರ್ನಾಂಡೋ ಮತ್ತು ಭಾನುಕ ರಾಜಪಕ್ಸೆ ಅರ್ಧ ಶತಕದ ನೆರವಿನೊಂದಿಗೆ ಶ್ರೀಲಂಕಾ ಪಂದ್ಯ ಗೆದ್ದಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿ 2-1ರಿಂದ ಭಾರತದ ವಶವಾಗಿದೆ.
ಶ್ರೀಲಂಕಾ ತಂಡ ಭಾರತದೆದುರು ವೈಟ್‌ವಾಷ್ ಮುಖಭಂಗ ಅನುಭವಿಸುವ ನಿರೀಕ್ಷೆಯಿತ್ತು. ಆದರೆ ಅಂತಿಮ ಪಂದ್ಯ ಗೆದ್ದು ಲಂಕಾ ವೈಟ್‌ವಾಷ್‌ನಿಂದ ತಪ್ಪಿಸಿಕೊಂಡಿದೆ. ವಿಶೇಷವೆಂದರೆ ಎರಡು ಬಾರಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ಸೋತಿತ್ತು. ಅಂತಿಮ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಪಂದ್ಯ ಸೋತಿದೆ.

ಭಾರತದ ಇನ್ನಿಂಗ್ಸ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಪೃಥ್ವಿ ಶಾ 49, ಶಿಖರ್ ಧವನ್ 13, ಸಂಜು ಸ್ಯಾಮ್ಸನ್ 46, ಸೂರ್ಯಕುಮಾರ್ ಯಾದವ್ 40, ಹಾರ್ದಿಕ್ ಪಾಂಡ್ಯ 19, ರಾಹುಲ್ ಚಾಹರ್ 13, ನವದೀಪ್ ಸೈನಿ 15 ರನ್ ನೊಂದಿಗೆ 43.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 225 ರನ್ ಗಳಿಸಿತ್ತು.

ಶ್ರೀಲಂಕಾ ಇನ್ನಿಂಗ್ಸ್
ಪಂದ್ಯಕ್ಕೆ ಮಳೆಯಡ್ಡಿಯಾಗಿದ್ದರಿಂದ ಎರಡೂ ಇನ್ನಿಂಗ್ಸ್‌ಗಳಲ್ಲಿ ಓವರ್ ಅನ್ನು 47ಕ್ಕೆ ಇಳಿಸಲಾಗಿತ್ತು. ಗುರಿ ಬೆನ್ನಟ್ಟಿದ ಶ್ರೀಲಂಕಾ, ಅವಿಷ್ಕ ಫೆರ್ನಾಂಡೋ 76 (98), ಭಾನುಕ ರಾಜಪಕ್ಸ 65 (56), ಚರಿತ್ ಅಸಲಂಕ 24, ರಮೇಶ್ ಮೆಂಡಿಸ್ 15 ರನ್‌ನೊಂದಿಗೆ 39 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 227 ರನ್ ಗಳಿಸಿತು.

ಸೂರ್ಯಕುಮಾರ್ ಸರಣಿಶ್ರೇಷ್ಠ
ಭಾರತದ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ದುಶ್ಮಂತ ಚಮೀರ 2, ಅಕಿಲ ದನಂಜಯ 3, ಚಮಿಕ ಕರುಣರತ್ನೆ 1, ಪ್ರವೀಣ್ ಜಯವಿಕ್ರಮ 3, ದಸುನ್ ಶನಕಾ 1 ವಿಕೆಟ್ ಪಡೆದರೆ, ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಭಾರತದ ಚೇತನ್ ಸಕಾರಿಯ 2, ರಾಹುಲ್ ಚಾಹರ್ 3, ಕೃಷ್ಣಪ್ಪ ಗೌತಮ್ 1, ಹಾರ್ದಿಕ್ ಪಾಂಡ್ಯ 1 ವಿಕೆಟ್‌ನಿಂದ ಗಮನ ಸೆಳೆದರು. ಅವಿಷ್ಕ ಫೆರ್ನಾಂಡೊ ಪಂದ್ಯಶ್ರೇಷ್ಠರೆನಿಸಿದರೆ ಸೂರ್ಯಕುಮಾರ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications