ಏಕೈಕ ಟಿ20 ಗೆದ್ದು ಶ್ರೀಲಂಕಾ ವಿರುದ್ಧ 9-0 ಕ್ಲೀನ್ ಸ್ವೀಪ್ ಸಾಧಿಸಿದ ಭಾರತ
ಕೊಲಂಬೋ, ಸೆ. 06: ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಟೆಸ್ಟ್ (3), ಏಕದಿನ (5) ಹಾಗೂ ಟಿ20(1) ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಟೀಂ ಇಂಡಿಯಾ ಚೇಸ್: ರೋಹಿತ್ ಶರ್ಮ 9 ರನ್ ಗಳಿಸಿ ಔಟಾದ ಬಳಿಕ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ,
* ಕೆಎಲ್ ರಾಹುಲ್ 18 ಎಸೆತಗಳಲ್ಲಿ 24 ರನ್(3 ಬೌಂಡರಿ) ಗಳಿಸಿ ಔಟ್.
* ನಾಯಕ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 82 (7 ಬೌಂಡರಿ, 1 ಸಿಕ್ಸರ್), ಮನೀಶ್ ಪಾಂಡೆ 51 ರನ್ (36 ಎಸೆತಗಳು, ನಾಲ್ಕು ಬೌಂಡರಿ, ಒಂದು ಸಿಕ್ಸರ್)
ಶ್ರೀಲಂಕಾ : ದಿಲ್ಶನ್ ಮುನವೀರ 29 ಎಸೆತಗಳಲ್ಲಿ 53ran (5ಬೌಂಡರಿ, 4 ಸಿಕ್ಸರ್) ಹಾಗೂ ಪ್ರಿಯಂಜನ್ ೪೦ ಎಸೆತಗಳಲ್ಲಿ 40 ರನ್ ಗಳಿಸಿ ತಂಡದ ಮೊತ್ತವನ್ನು 170/7ಕ್ಕೇರಿಸಿದರು. ಭಾರತದ ಪರ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ 43/3 ಗಳಿಸಿದರು.
ಟಾಸ್ ವರದಿ: ಶ್ರೀಲಂಕಾ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಟಾಸ್ ಗೆದ್ದುಕೊಂಡಿದ್ದಾರೆ. ಟಾಸ್ ಗೆದ್ದ ಕೊಹ್ಲಿ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮಳೆಯಿಂದ ಪಂದ್ಯ ವಿಳಂಬವಾಗಿ ಆರಂಭಗೊಂಡಿದೆ.

ಟೆಸ್ಟ್ ಸರಣಿಯನ್ನು 3-0 ಹಾಗೂ ಏಕದಿನ ಸರಣಿಯನ್ನು 5-0ರಲ್ಲಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಈಗ ಟಿ20 ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಭಾರತ ತಂಡದಲ್ಲಿ ಕೆಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದರೆ, ಅಜಿಂಕ್ಯ ರಹಾನೆ ಅವರು ಆಡುವ XI ನಲ್ಲಿ ಸ್ಥಾನ ಪಡೆದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications