For Quick Alerts
ALLOW NOTIFICATIONS  
For Daily Alerts
 

Sri Lanka vs New Zealand: 3ನೇ ಏಕದಿನ ಪಂದ್ಯದ ಪ್ರಿವ್ಯೂ ಹಾಗೂ ಇತರ ಮಾಹಿತಿ

ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಶುಕ್ರವಾರ ನಡೆಯಲಿದ್ದು ಎರಡು ತಣಡಗಳು ಕೂಡ ಈ ಪಂದ್ಯಕ್ಕೆ ಸಜ್ಜಾಗಿದೆ. ಸರಣಿಯ ಎರಡನೇ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾದ ಕಾರಣ ಶ್ರೀಲಂಕಾ ತಂಡಕ್ಕೆ ಸರಣಿಯನ್ನು ಸಮಬಲಗೊಳಿಸಲು ಅಂತಿಮ ಅವಕಾಶ ಮಾತ್ರವೇ ಇದೆ. ಹೀಗಾಗಿ ಈ ಸರಣಿ ಈಗ ಕುತೂಹಕ ಮೂಡಿಸಿದೆ. ಸರಣಿಯ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ತಂಡ 198 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತ್ತು.

ಇನ್ನು ನ್ಯೂಜಿಲೆಂಡ್ ಪ್ರವಾಸದಲ್ಲಿ ಶ್ರೀಲಂಕಾ ತಂಡ ಈವರೆಗೆ ಕೇವಲ ಒಂದು ಬಾರಿ ಮಾತ್ರವೇ ಸರಣಿ ಗೆಲುವು ಸಾಧಿಸಿದೆ. 2001ರಲ್ಲಿ ಶ್ರೀಲಂಕಾ ಕಿವಿಸ್ ನಾಡಿಗೆ ಪ್ರವಾಸ ಕೈಗೊಂಡಿದ್ದಾಗ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 4-1 ಅಂತರದಿಂದ ಗೆದ್ದು ಬೀಗಿತ್ತು. ಈಗ ಮೂರನೇ ಏಕದಿನ ಪಂದ್ಯದಲ್ಲಿ ಗೆಲುವಿನ ಮೇಲೆ ಚಿತ್ತ ನೆಟ್ಟಿರುವ ಶ್ರೀಲಂಕಾ ಸರಣಿ ಸಮಬಲಗೊಳಿಸುವ ಪ್ರಯತ್ನ ನಡೆಸಲಿದೆ.

Sri Lanka vs New Zealand: 3rd ODI match preview and match details

ಇನ್ನು ಈ ಪ್ರವಾಸದಲ್ಲಿ ಶ್ರೀಲಂಕಾ ಈವರೆಗೆ ಗೆಲುವಿನ ರುಚಿ ಕಂಡಿಲ್ಲ. ಏಕದಿನ ಸರಣಿಗೂ ಮುನ್ನ ನಡೆಸ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ 0-2 ಅಂತರದಿಂದ ಸೋಲು ಅನುಭವಿಸಿತ್ತು. ಇದೀಗ ಮತ್ತೊಂದು ಸರಣಿ ಸೋಲಿ ಮುಖಭಂಗದಿಂದ ಲಂಕಾ ಪಡೆ ಪಾರಾಗಲಿದೆಯಾ ಎಂಬುದು ಕುತೂಹಲ ಮೂಡಿಸಿದೆ. '

ಪಂದ್ಯದ ಸಮಯ ಹಾಗೂ ಇತರ ಮಾಹಿತಿ: ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯ ಶುಕ್ರವಾರ ಮಾರ್ಚ್ 31ರಂದು ಆಯೋಜನೆಯಾಗಲಿದೆ. ಭಾರತೀಯ ಕಾಲಮಾನ ಮುಂಜಾನೆ 6:30ಕ್ಕೆ ಈ ಪಂದ್ಯ ಆರಂಬವಾಗಲಿದೆ. ಪ್ರೈಮ್ ವಿಡಿಯೋ ಚಂದಾದ್ಆರರು ಈ ಪಂದ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶವಿದ್ದು ಭಾರತದಲ್ಲಿ ಟಿವಿಯಲ್ಲಿ ನೇರಪ್ರಸಾರವಾಗುವುದಿಲ್ಲ.

ನ್ಯೂಜಿಲೆಂಡ್ ಸ್ಕ್ವಾಡ್ ಹೀಗಿದೆ: ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಹೆನ್ರಿ ನಿಕೋಲ್ಸ್, ಚಾಡ್ ಬೋವ್ಸ್, ವಿಲ್ ಯಂಗ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ರಚಿನ್ ರವೀಂದ್ರ, ಹೆನ್ರಿ ಶಿಪ್ಲಿ, ಮ್ಯಾಟ್ ಹೆನ್ರಿ, ಇಶ್ ಸೋಧಿ, ಬ್ಲೇರ್ ಟಿಕ್ನರ್, ಬೆನ್ ಲಿಸ್ಟರ್, ಟಾಮ್ ಬ್ಲಂಡೆಲ್

ಶ್ರೀಲಂಕಾ ಸ್ಕ್ವಾಡ್ ಹೀಗಿದೆ: ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ನುವಾನಿಡು ಫೆರ್ನಾಂಡೋ, ಏಂಜೆಲೊ ಮ್ಯಾಥ್ಯೂಸ್, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಚಾಮಿಕ ಕರುಣಾರತ್ನೆ, ವನಿಂದು ಹಸರಂಗ, ಕಸುನ್ ರಜಿತ, ಲಹಿರು ಕುಮಾರ, ಸದೀರ ಸಮರವಿಕ್ರಮ, ಪ್ರಮೋದ್ ಮದುಶನ್, ಸಹನ್ ಆರಚ್ಚಿಗೆ, ದುನಿತ್ ವೆಳ್ಳಾಲಗೆ, ದಿಲ್ಶನ್ ಮಧುಶಂಕ, ಮತೀಶ ಪತಿರಣ, ಮಹೇಶ್ ತೀಕ್ಷಣ

Story first published: Thursday, March 30, 2023, 23:15 [IST]
Other articles published on Mar 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+