ಶ್ರೀಲಂಕಾ vs ನ್ಯೂಜಿಲೆಂಡ್: ಭರ್ಜರಿ ಶತಕ ಸಿಡಿಸಿ ಮಿಂಚಿದ ಕಿವೀಸ್ ದಾಂಡಿಗ ಫಿಲಿಪ್ಸ್

ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು ಪೈಪೋಟಿಯ ಪ್ರದರ್ಶನ ನಡೆಯುತ್ತಿದೆ. ಸಿಡ್ನಿಯಲ್ಲಿ ಈ ಪಂದಗ್ಯ ನಡೆಯುತ್ತಿದ್ದು ಮೊದಲಿಗೆ ಬ್ಯಾಟಂಗ್ ಮಾಡಿದ ನ್ಯೂಜಿಲೆಂಡ್ ಶ್ರೀಲಂಕಾ ಪಡೆಗೆ ಸವಾಲಿನ ಗುರಿ ಪೇರಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಗ್ಲೆನ್ ಫಿಲಿಪ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಅದ್ಭುತ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲಿಯೇ ಶ್ರೀಲಂಕಾ ಬೌಲರ್‌ಗಳು ಆಘಾತ ನೀಡಿದ್ದರು. ತಂಡದ ಮೊತ್ತ 13 ರನ್‌ಗಳಾಗುವಷ್ಟರಲ್ಲಿ ನ್ಯೂಜಿಲೆಂಡ್ ತಂಡದ ಮೂರು ವಿಕೆಟ್‌ಗಳು ಉರುಳಿದ್ದವು. ಅಗ್ರ ಕ್ರಮಾಂಕದ ಆಟಗಾರರಾದ ಫಿನ್ ಅಲೆನ್, ಡೆವೋನ್ ಕಾನ್ವೆ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಒಂದಂಕಿಗೆ ವಿಕೆಟ್ ಕಳೆದುಕೊಂಡಿದ್ದರು. ಅದಾದ ಬಳಿಕ ಜೊತೆಯಾದ ಗ್ಲೆನ್ ಫಿಲಿಪ್ಸ್ ಹಾಗೂ ಡ್ಯಾರೆಲ್ ಮಿಚೆಲ್ ತಂಡವನ್ನು ಕುಸಿತದಿಂದ ಪಾರು ಮಾಡುವಲ್ಲಿ ಒಂದು ಹಂತಕ್ಕೆ ಯಶಸ್ವಿಯಾದರು.
ಗ್ಲೆನ್ ಫಿಲಿಪ್ಸ್ ಹಾಗೂ ಡ್ಯಾರೆಲ್ ಮಿಚೆಲ್ ತಂಡಕ್ಕೆ ಆಸರೆಯಾದರು. ಮಿಚೆಲ್ 22 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಬಳಿಕ ಫಿಲಿಪ್ಸ್ ತಮ್ಮ ಏಕಾಂಗಿ ಹೋರಾಟವನ್ನು ಮುಂದುವರಿಸಿದರು. ಮತ್ತೊಂದುಯ ತುದಿಯಲ್ಲಿ ಹೇಳಿಕೊಳ್ಳುವಂತಾ ಬೆಂಬಲ ದೊರೆಯದಿದ್ದರೂ ಭರ್ಜರಿಯಾಗಿ ಲಂಕಾ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡುತ್ತಾ ಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು.
64 ಎಸೆತಗಳನ್ನು ಎದುರಿಸಿದ ಫಿಲಿಪ್ಸ್ 104 ರನ್‌ಗಳನ್ನು ಗಳಿಸಿ ಅಂತಿಮ ಓವರ್‌ನ್ಲಲಿ ವಿಕೆಟ್ ಕಳೆದುಕೊಂಡರು. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿದೆ. ಫಿಲಿಪ್ಸ್ ಅವರ ಈ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್‌ಗಳನ್ನು ಗಳಿಸಿದೆ.
ನ್ಯೂಜಿಲೆಂಡ್ ಆಡುವ ಬಳಗ: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಬೆಂಚ್: ಮೈಕೆಲ್ ಬ್ರೇಸ್ವೆಲ್, ಆಡಮ್ ಮಿಲ್ನೆ, ಮಾರ್ಟಿನ್ ಗಪ್ಟಿಲ್, ಮಾರ್ಕ್ ಚಾಪ್ಮನ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣರತ್ನ, ಮಹೇಶ್ ತೀಕ್ಷಣ, ಲಹಿರು ಕುಮಾರ, ಕಸುನ್ ರಜಿತ
ಬೆಂಚ್: ಪ್ರಮೋದ್ ಮದುಶನ್, ಜೆಫ್ರಿ ವಾಂಡರ್ಸೆ, ಅಶೇನ್ ಬಂಡಾರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications