ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ದ.ಆಫ್ರಿಕಾದ ಇಬ್ಬರಿಗೆ ಕೊರೊನಾ

ಕೇಪ್‌ಟೌನ್: ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ತಂಡ ಸದ್ಯ ದಕ್ಷಿಣ ಆಫ್ರಿಕಾದಲ್ಲಿದೆ. ಸೋಂಕಿತ ಇಬ್ಬರು ಆಟಗಾರರು ಯಾರೆಂದು ತಿಳಿಸಲಾಗಿಲ್ಲ (ಸಾಂದರ್ಭಿಕ ಚಿತ್ರ).
ದಕ್ಷಿಣ ಆಫ್ರಿಕಾ ತಂಡದಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದನ್ನು ಶುಕ್ರವಾರ (ಡಿಸೆಂಬರ್ 18) ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾ ತಂಡ ಹೈವೆಲ್ಡ್‌ನಲ್ಲಿರುವ ಬಯೋ ಬಬಲ್‌ಗೆ ಪ್ರವೇಶಿಸುವ ಮುನ್ನವೇ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ.
'ಸೋಂಕಿತ ಆಟಗಾರರು ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದಲ್ಲಿ ಇನ್ನು ಕಾಣಿಸಿಕೊಳ್ಳುವುದಿಲ್ಲ. ಈ ಕೂಡಲೇ ನಾವು ಐಸೊಲೇಶನ್ ಸೇರಿದಂತೆ ಕೊರೊನಾವೈರಸ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿಗಾ ವಹಿಸಲಿದ್ದೇವೆ,' ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಹೇಳಿಕೆಯ ಮೂಲಕ ತಿಳಿಸಿದೆ.
ಪಾಸಿಟಿವ್ ಬಂದಿರುವ ಆಫ್ರಿಕಾದ ಇಬ್ಬರು ಆಟಗಾರರ ಜಾಗಕ್ಕೆ ಮೂವರು ಬದಲಿ ಆಟಗಾರರನ್ನು ಹೆಸರಿಸಲು ದಕ್ಷಿಣ ಆಫ್ರಿಕಾ ತಂಡ ಎದುರುನೋಡುತ್ತಿದೆ. ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ-ಶ್ರೀಲಂಕಾ ಮೊದಲನೇ ಟೆಸ್ಟ್ ಆರಂಭಗೊಳ್ಳಲಿದೆ. ಜನವರಿ 3ರಿಂದ ದ್ವಿತೀಯ ಟೆಸ್ಟ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications