For Quick Alerts
ALLOW NOTIFICATIONS  
For Daily Alerts
 

ಲಂಕಾ ಸರಣಿಗೂ ಮುನ್ನ ದ.ಆಫ್ರಿಕಾದ ಆಟಗಾರರಿಗೆ ಕೊರೊನಾ ನೆಗೆಟಿವ್

Sri Lanka vs South Africa: South Africa squad all test negative

ಜೊಹಾರ್ನ್ ಬರ್ಗ್: ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾದ ಎಲ್ಲಾ ಆಟಗಾರರು ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ (ಸಿಎಸ್‌ಎ) ಈ ವಿಚಾರವನ್ನು ಭಾನುವಾರ (ಡಿಸೆಂಬರ್ 21) ಘೋಷಿಸಿದೆ.

ಪ್ರೆಟೋರಿಯಾದಲ್ಲಿರುವ ಬಯೋಬಬಲ್‌ಗೆ ಶನಿವಾರ (ಡಿಸೆಂಬರ್ 20) ಪ್ರವೇಶಿಸುವ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪರೀಕ್ಷೆಗೆ ಒಳಗಾಗಿತ್ತು. ಈ ಪರೀಕ್ಷೆಯಲ್ಲಿ ಇಡೀ ತಂಡ ನೆಗೆಟಿವ್ ಬಂದಿದೆ ಎಂದು ಸಿಎಸ್‌ಎ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

'ಕೊರೊನಾವೈರಸ್ ಪರೀಕ್ಷೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಎಲ್ಲಾ ಆಟಗಾರ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ತಿಳಿಸಲು ಸಂತೋಷಪಡುತ್ತಿದ್ದೇವೆ,' ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಹೇಳಿದೆ. ಈ ಮೊದಲು ದಕ್ಷಿಣ ಆಫ್ರಿಕಾದ ಇಬ್ಬರಿಗೆ ಕೊರೊನಾ ತಗುಲಿತ್ತು. ಆ ಇಬ್ಬರು ತಂಡದಿಂದ ಹೊರಗಿದ್ದು ಕ್ವಾರಂಟೈನ್ ಪಾಲಿಸುತ್ತಿದ್ದಾರೆ.

ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಟೆಸ್ಟ್‌ ಸರಣಿಗೆ ಸಂಬಂಧಿಸಿ ದಕ್ಷಿಣ ಆಫ್ರಿಕಾ ತಂಡದ ಸಂಖ್ಯೆಯನ್ನು 17ಕ್ಕೆ ಕೆಳಗಿಳಿಸಲಾಗಿತ್ತು. ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ-ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಡಿಸೆಂಬರ್ 26ರಿಂದ ಆರಂಭಗೊಳ್ಳಲಿದೆ.

Story first published: Monday, December 21, 2020, 9:38 [IST]
Other articles published on Dec 21, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+