ಆರ್‌ಸಿಬಿ ಐಪಿಎಲ್‌ನ ಸ್ಟಾರ್ ತಂಡಗಳಲ್ಲಿ ಒಂದು. ಈ ತಂಡಕ್ಕೆ ದೇಶ ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ. ಈ ತಂಡ ಇನ್ನೂ ಒಮ್ಮೆಯೂ ಐಪಿಎಲ್ ಟ್ರೋಫಿ ಗೆಲ್ಲದೇ ಇದ್ದರೂ ಸಹ ಅಭಿಮಾನಿಗಳು, ತಂಡವನ್ನು ಬೆಂಬಲಿಸುವುದನ್ನು ಬಿಟ್ಟಿಲ್ಲ. ಈ ಬಾರಿ ಕಪ್ ನಮ್ದೇ ಎಂಬ ಧೇಯ ವಾಕ್ಯದೊಂದಿಗೆ ಸಪೋರ್ಟ್ ಮಾಡುತ್ತಲ್ಲೇ ಬಂದಿದ್ದಾರೆ.
ಇತ್ತೀಚಿಗಷ್ಟೇ ದುಬೈನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಿತು. ತಂಡಗಳು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿವೆ. ಅದ್ರಲ್ಲೂ ಸ್ಟಾರ್ ಆಟಗಾರರು ಭಾರೀ ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಇನ್ನು ಹಲವು ಆಟಗಾರರು ಮೂಲ ಬೆಲೆಗೆ ತೃಪ್ತಿ ಪಡಬೇಕಾಯಿತು. ಮೂಲ ಬೆಲೆಗೆ ಎಸ್‌ಆರ್‌ಎಚ್ ತಂಡ ಸೇರಿದ ಸ್ಟಾರ್ ಪ್ಲೇಯರ್ ಈಗ ಆರ್ಭಟಿಸುತ್ತಿದ್ದಾರೆ. ಈ ಮೂಲಕ ತಮ್ಮನ್ನು ಬಿಟ್ಟು ಆರ್‌ಸಿಬಿ ತಂಡ ಕೈ ಕೈ ಹಿಚಿಕೊಳ್ಳುವಂತೆ ಮಾಡಿದ್ದಾರೆ.

ಆರ್‌ಸಿಬಿ ತಂಡ ಕೈ ಬಿಟ್ಟ ಆಟಗಾರನೇ ವನಿಂದು ಹಸರಂಗ. ಸ್ಟಾರ್ ಆಲ್ ರೌಂಡರ್‌ನನ್ನು ತಂಡದಲ್ಲಿ ಇಟ್ಟುಕೊಳ್ಳದೆ ಆರ್‌ಸಿಬಿ ಹರಾಜಿಗೆ ಬಿಟ್ಟಿತ್ತು. ಅಲ್ಲದೆ ಇವರ ಹೆಸರು ಬಂದಾಗ ಹರಾಜನ್ನು ಸಹ ಕೂಗಲಿಲ್ಲ. ಈಗ ಈ ಪ್ಲೇಯರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಬಲವನ್ನು ಹೆಚ್ಚಿಸಿದ್ದಾರೆ.
ಗುರುವಾರ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ವನಿಂದು ಹಸರಂಗ ಅದ್ಭುತ ಬೌಲಿಂಗ್ ಮಾಡಿದರು. ಜಿಂಬಾಬ್ವೆಯ ಬ್ಯಾಟ್ಸ್‌ಮನ್‌ಗಳಿಗೆ ತಮ್ಮ ಅಪಾಯಕಾರಿ ಎಸೆತಗಳ ಮೂಲಕ ಖೆಡ್ಡಾ ತೋಡಿದರು. ಪರಿಣಾಮ ಜಿಂಬಾಬ್ವೆ ತಂಡ 23 ಓವರ್‌ಗಳಲ್ಲಿ 96 ರನ್‌ಗಳಿಗೆ ಆಲೌಟ್ ಆಯಿತು.
ತಂಡದ ಆರು ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಜಿಂಬಾಬ್ವೆ ವಿರುದ್ಧ 19 ರನ್‌ಗಳಿಗೆ 8 ವಿಕೆಟ್ ಕಬಳಿಸಿದ ಶ್ರೀಲಂಕಾದ ಚಮಿಂದಾ ವಾಸ್ ಅವರ ಹೆಸರಿನಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ದಾಖಲೆ ಇದೆ. ಹಸರಂಗ ಅವರು 19 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ವಿಷಯದಲ್ಲಿ 5 ನೇ ಸ್ಥಾನವನ್ನು ಸ್ಥಾಪಿಸಿದರು.

ಮಳೆ ಅಡ್ಡಿಪಡಿಸಿದ ಈ ಪಂದ್ಯದಲ್ಲಿ ಜಿಂಬಾಬ್ವೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡವು ಉತ್ತಮ ಆರಂಭವನ್ನು ಹೊಂದಿತ್ತು ಮತ್ತು ಇಬ್ಬರೂ ಆರಂಭಿಕರು ಮೊದಲ ವಿಕೆಟ್‌ಗೆ 43 ರನ್ ಸೇರಿಸಿದರು. ಇದಾದ ಬಳಿಕ ಇಡೀ ತಂಡ 100 ರನ್‌ಗಳ ಅಂತರದಲ್ಲಿ ವಿಕೆಟ್‌ಗಳ ಪತನ ಆರಂಭವಾಯಿತು. 48 ರನ್ ಗಳಿಸಿದ್ದಾಗ ವನಿಂದು ಮೊದಲ 4 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಗಾಯದ ನಂತರ ವಾಪಸಾದ ಹಸರಂಗ ಅವರು ಅದ್ಬುತವಾಗಿ ಬೌಲಿಂಗ್ ಮಾಡಿ ಗಮನ ಸೆಳೆದರು. ತಮ್ಮ ಲೆಗ್ ಸ್ಪಿನ್ ಹಾಗೂ ಗೂಗ್ಲಿ ಬೌಲಿಂಗ್ ಮೋಡಿಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕೆಡವಿದರು. ಕೇವಲ 5.5 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 7 ವಿಕೆಟ್ ಪಡೆದರು. ಹಸರಂಗಾ ಮಾಜಿ ಸ್ಪಿನ್ನರ್ ಅಜಂತಾ ಮೆಂಡಿಸ್ (6/29) ಅವರನ್ನು ಬಿಟ್ಟಿದ್ದಾರೆ.
2017ರಲ್ಲಿ ಏಕದಿನ ಕ್ರಿಕೆಟ್ ವೃತ್ತಿಜೀವನ ಆರಂಭಿಸಿರುವ ಹಸರಂಗ ಇದುವರೆಗೆ 49 ಪಂದ್ಯಗಳಲ್ಲಿ 26.31ರ ಸರಾಸರಿಯಲ್ಲಿ 74 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ ನಲ್ಲಿ 23.77ರ ಸರಾಸರಿಯಲ್ಲಿ 832 ರನ್ ಗಳಿಸಿದ್ದಾರೆ.
ಚಾಮಿಂದಾ ವಾಸ್ (ಶ್ರೀಲಂಕಾ)- 19/8 ವಿರುದ್ಧ ಜಿಂಬಾಬ್ವೆ, 2001
ಶಾಹಿದ್ ಅಫ್ರಿದಿ (ಪಾಕಿಸ್ತಾನ)- 12/7 ವಿರುದ್ಧ ವೆಸ್ಟ್ ಇಂಡೀಸ್, 2013
ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 15/7 ನಮೀಬಿಯಾ, 2003
ರಶೀದ್ ಖಾನ್ (ಅಫ್ಘಾನಿಸ್ತಾನ)- 18/7 ವೆಸ್ಟ್ ಇಂಡೀಸ್, 2017
ವನಿಂದು ಹಸರಂಗಾ (ಶ್ರೀಲಂಕಾ)- 19/7 ಜಿಂಬಾಬ್ವೆ, 2024