Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA vs SL Test: ದಕ್ಷಿಣ ಆಫ್ರಿಕಾ ಎದುರು 42 ರನ್‌ಗಳಿಗೆ ಶ್ರೀಲಂಕಾ ಸರ್ವಪತನ

ಪ್ರಸ್ತುತ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದೆ. ಕಿಂಗ್ಸ್‌ಮೀಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ 42 ರನ್‌ಗಳಿಗೆ ಸರ್ವಪತನವಾಗಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟಾದ ಎರಡನೇ ತಂಡ ಎನಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ಪರ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ ವೇಗಿ ಮಾರ್ಕೊ ಯಾನ್ಸನ್ 7 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ತಂಡವನ್ನು ಕಟ್ಟಿ ಹಾಕಿದ್ದಾರೆ. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ ಕೇವಲ 191 ರನ್‌ಗಳಿಗೆ ಆಲೌಟಾಗಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡವು ಕೇವಲ 83 ಎಸೆತಗಳಲ್ಲಿ ಆಲೌಟ್ ಆಗಿರುವುದು ಮತ್ತೊಂದು ದಾಖಲೆ ಆಗಿದೆ. ಇದಕ್ಕೂ ಮುನ್ನ 1924ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 75 ಎಸೆತಗಳಲ್ಲಿ 30 ರನ್‌ಗಳಿಗೆ ಆಲೌಟ್ ಆಗಿತ್ತು.

Sri Lanka were bowled out for 42 runs in the first Test against South Africa

ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಇಬ್ಬರು ಬ್ಯಾಟರ್‌ಗಳು ಮಾತ್ರ ಎರಡಂಕಿ ತಲುಪುವಲ್ಲಿ ಯಶಸ್ವಿಯಾದರು. ಕಮಿಂದು ಮೆಂಡಿಸ್ 20 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 13 ರನ್ ಗಳಿಸಿ ತಂಡದ ಪರ ಗರಿಷ್ಠ ರನ್ ಗಳಿಸಿದರು. 10ನೇ ಕ್ರಮಾಂಕದ ಬ್ಯಾಟರ್‌ ಲಹಿರು ಕುಮಾರ 10 ರನ್ ಗಳಿಸುವ ಮೂಲಕ ಇನ್ನಿಂಗ್ಸ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.

ದಕ್ಷಿಣ ಆಫ್ರಿಕಾದ ಎಡಗೈ ವೇಗದ ಬೌಲರ್ ಮಾರ್ಕೊ ಯಾನ್ಸನ್ ಪ್ರವಾಸಿ ಶ್ರೀಲಂಕಾ ತಂಡವನ್ನು ಕಾಡಿದರು. ಮಾರ್ಕೊ ಯಾನ್ಸನ್ 6.5 ಓವರ್‌ಗಳಲ್ಲಿ 13 ರನ್ ನೀಡಿ 7 ವಿಕೆಟ್ ಪಡೆದು ಮಿಂಚಿದರು. ಇದು ತವರು ನೆಲದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ನ ಮೂರನೇ ಅತ್ಯುತ್ತಮ ಪ್ರದರ್ಶನವಾಗಿದೆ. ಬಲಗೈ ವೇಗಿ ಕಗಿಸೊ ರಬಾಡ ಒಂದು ವಿಕೆಟ್ ಮತ್ತು ಜೆರಾಲ್ಡ್ ಕೊಯೆಟ್ಜಿ ಎರಡು ವಿಕೆಟ್ ಪಡೆದರು.

ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 1924 ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ 75 ಎಸೆತಗಳಲ್ಲಿ 30 ರನ್‌ಗಳಿಗೆ ಆಲೌಟಾಗಿತ್ತು. ಇದೀಗ ಶ್ರೀಲಂಕಾ ತಂಡ ಕೇವಲ 83 ಎಸೆತಗಳಲ್ಲಿ ಆಲೌಟ್ ಆಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 100 ವರ್ಷಗಳ ನಂತರ ತಂಡವೊಂದು ಅತಿ ಕಡಿಮೆ ಎಸೆತಗಳಲ್ಲಿ ಆಲೌಟ್ ಭೀತಿ ಎದುರಿಸಿರುವುದು ಇದೇ ಮೊದಲು. ಇದು ಶ್ರೀಲಂಕಾದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.

Story first published: Thursday, November 28, 2024, 19:49 [IST]
Other articles published on Nov 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+