ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾಗೆ ಸೋಲುಣಿಸಿ ಏಕದಿನ ಸರಣಿ ಗೆದ್ದ ಶ್ರೀಲಂಕಾ

Sri Lanka win ODI series against South Africa after won 3rd ODI by 78 runs

ಶ್ರೀಲಂಕಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಏಕದಿನ ಸರಣಿಯನ್ನು ಲಂಕಾ ತಂಡ ವಶಕ್ಕೆ ಪಡೆದಿದೆ. ಈ ಸರಣಿ ಗೆಲುವಿನ ಮೂಲಕ ಕಳೆದ 18 ತಿಂಗಳಿನಿಂದ ಏಕದಿನ ಸರಣಿ ಗೆಲ್ಲಲು ಸಾಧ್ಯವಾಗದಿದ್ದ ಲಂಕಾ ಪಡೆ ಕಡೆಗೂ ಸರಣಿ ವಶಕ್ಕೆ ಪಡೆದಿದೆ.

ಈ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗವಾಗುವ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆ ಮೀರಿ ಬ್ಯಾಟ್ಸ್‌ಮನ್‌ಗಳ ಬದಲಿಗೆ ಈ ಪಂದ್ಯದಲ್ಲಿ ಬೌಲರ್‌ಗಳು ಅಬ್ಬರಿಸಿ ಮಿಂಚಿದರು. ಒಟ್ಟು 80 ಓವರ್‌ಗಳಲ್ಲಿ 19 ವಿಕೆಟ್ ಉರುಳಿದ್ದವು. ಇದರಲ್ಲಿ 16 ವಿಕೆಟ್‌ಗಳು ಖೇವಲ ಸ್ಪಿನ್ನರ್‌ಗಳ ಪಾಲಾಗಿದೆ. ಇದು ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಸ್ಪಿನ್ನರ್‌ಗಳು ಅತಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಆತಿಥೇಯ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡಿದ್ದು ಕೇವಲ 203 ರನ್ ಮಾತ್ರ. ಹಾಗಿದ್ದರೂ ಶ್ರೀಲಂಕಾ ತಂಡ 78 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಲು ಯಶಸ್ವಿಯಾಗಿತ್ತು. ಈ ಪಂದ್ಯದ ಮೂಲಕ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಆಫ್ ಸ್ಪಿನ್ನರ್ ಮಹೀಶ್ ತೀಕ್ಷಣ ತಮ್ಮ ಪ್ರಥಮ ಎಸೆತದಲ್ಲಿಯೇ ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಅಂತಿಮವಾಗಿ ಮಹೀಶ್ 37 ರನ್‌ಗಳಿಗೆ 4 ವಿಕೆಟ್ ಪಡೆದರು, ಜೊತೆಗೆ ಬ್ಯಾಟಿಂಗ್‌ನಲ್ಲಿ 10 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಚೊಚ್ಚಲ ಪಂದ್ಯವನ್ನು ಅತ್ಯಂತ ಸ್ಮರಣೀಯವಾಗಿಸಿದರು.

ಲೆಗ್‌ ಸ್ಪಿನ್ನರ್ ವನಿಂದು ಹಸರಂಗ 38 ರನ್‌ಗಳನ್ನು ನೀಡಿ 2 ವಿಕೆಟ್ ಕಬಳಿಸಿದರೆ ವೇಗಿ ದುಷ್ಮಂತ ಚಮೀರಾ 16 ರನ್‌ಗಳಿಗೆ 2 ವಿಕೆಟ್ ಪಡೆದರು. ಬ್ಯಾಟಿಂಗ್‌ನಲ್ಲಿಯೂ ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಕಾಡಿದ ಚಮೀರಾ 29 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಈ ಪ್ರದರ್ಶನದಿಂದಾಗಿ ಚಮೀರಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಚರಿತ ಅಸಲಂಕಾ ಕೂಡ ಈ ಪಮದ್ಯದಲ್ಲಿಯೂ ಮಿಂಚಿವಲ್ಲಿ ಯಶಸ್ವಿಯಾದರು. 47 ರನ್‌ಗಳಿಸಿದ ಅಸಲಂಕಾ ತಮ್ಮ ಸತತ ಮೂರನೇ ಅರ್ಧ ಶತಕವನ್ನು 3 ರನ್‌ಗಳಿಂದ ತಪ್ಪಿಸಿಕೊಂಡರು. ಈ ಪಂದ್ಯದಲ್ಲಿ ಅಸಲಂಕಾ 47 ರನ್‌ಗಳನ್ನು ಗಳಿಸಿದ್ದಾರೆ.

ಅಸಲಂಕಾ 37 ರನ್‌ಗಳನ್ನು ಗಳಿಸಿದ್ದಾಗ ವಿಕೆಟ್ ಕಳೆದುಕೊಳ್ಳಬೇಕಾಗಿತ್ತು. ಆಫ್ರಿಕಾ ಫಿಲ್ಡರ್‌ಗಳು ಕ್ಯಾಚ್ ಪಡೆಯಲು ಸಫಲವಾಗಿದ್ದರು. ಈ ಸಂದರ್ಭದಲ್ಲಿ ಶ್ರೀಲಂಕಾ 145 ರನ್‌ಗಳಿಗೆ 7ನೇ ವಿಕೆಟ್ ಕಲೆದುಕೋಳ್ಳಬೇಕಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಈ ಸಂದರ್ಭದಲ್ಲಿ ನಿಗದಿಗಿಂತ ಹೆಚ್ಚಿನ ಫೀಲ್ಡರ್‌ಗಳನ್ನು ವೃತ್ತದ ಹೊರಭಾಗದಲ್ಲಿ ನಿಲ್ಲಿಸಿದ್ದನ್ನು ಅಸಲಂಕಾ ಗಮನಿಸಿದ್ದರು. ಹೀಗಾಗಿ ಈ ಎಸೆತವನ್ನು ನೋ ಬಾಲ್ ಎಂದು ಪರಿಗಣಿಸಲಾಗಿತ್ತು. ಈ ಮೂಲಕ ಜೀವದಾನ ಪಡೆದುಕೊಂಡಿದ್ದರು. ಅದಾದ ಬಳಿಕ ಅಸಲಂಕಾ 8ನೇ ಬ್ಯಾಟ್ಸ್‌ಮನ್ ಆಗಿ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿಕೊಂಡರು. ಈ ಸಂದರ್ಭದಲ್ಲಿ ಶ್ರೀಲಂಕಾ 41 ಓವರ್‌ಗಳಲ್ಲಿ 166 ರನ್‌ಗಳನ್ನು ಗಳಿಸಿತ್ತು.

ಈ ಹಂತದಲ್ಲಿ ದಕ್ಷಿಣ ಆಫ್ರಿಕಾ 180 ರನ್‌ಗಳಿಗಿಂತ ಮುನ್ನ ಲಂಕಾ ತಂಡವನ್ನು ಆಲೌಟ್ ಮಾಡಿ ರನ್ ಬೆನ್ನಟ್ಟಬಹುದು ಎಂಬ ಲೆಕ್ಕಾಚಾರವನ್ನು ಮಾಡಿಕೊಂಡಿತ್ತು. ಆದರೆ ಚಮೀರಾ ಅಂತಿಮ ಹಂತದಲಲ್ಇ ನೀಡಿದ 29 ರನ್‌ಗಳ ಕೊಡುಗೆ ಶ್ರೀಲಂಕಾ ತಂಡವನ್ನು 200ರ ಗಡಿ ತಲುಪಿಸಿತ್ತು. ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಒಟ್ಟು 40 ಓವರ್‌ಗಳನ್ನು ಸ್ಪಿನ್ನರ್‌ಗಳ ಮೂಲಕವೇ ಹಾಕಿತ್ತು. ಇದು ದಕ್ಷಿಣ ಆಫ್ರಿಕಾದ ಹೊಸ ದಾಖಲೆಯಾಗಿದೆ. ಈ ಹಿಂದೆ ಅತಿ ಹೆಚ್ಚು 33 ಓವರ್‌ಗಳನ್ನು ಸ್ಪಿನ್ನರ್‌ಗಳ ಮೂಲಕ ಹಾಕಿತ್ತು.

ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ ಮೊದಲ ಪಂದ್ಯವನ್ನು 14 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 67 ರನ್‌ಗಳ ಅಂತರದಿಂದ ಗೆದ್ದು ಸರಣಿಯನ್ನು ಸಮಬಲಗೊಳಿಸಿತ್ತು. ಈಗ ಮೂರನೇ ಪಂದ್ಯ ಲಂಕಾ ಪಾಲಾಗಿದೆ.

ಶ್ರೀಲಂಕಾ ತಂಡದ ಪ್ಲೇಯಿಂಗ್ XI ಅವಿಷ್ಕಾ ಫೆರ್ನಾಂಡೊ, ಮಿನೋದ್ ಭಾನುಕ (ವಿಕೆಟಗ್ ಕೀಪರ್), ಭಾನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕ, ದಾಸುನ್ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣರತ್ನೆ, ದುಷ್ಮಂತ ಚಮೀರಾ, ಅಕಿಲ ದನಂಜಯ, ಪ್ರವೀಣ್ ಜಯವಿಕ್ರಮ

ರೋಹಿತ್ ಶರ್ಮಾ ಮ್ಯಾನ್ ಆಫ್ ದಿ ಮ್ಯಾಚ್ ನಿರಾಕರಿಸಲು ಕಾರಣ ಈ ಆಟಗಾರ | Oneindia Kannada

ದಕ್ಷಿಣ ಆಫ್ರಿಕಾ ತಂಡದ ಪ್ಲೇಯಿಂಗ್ XI: ಜನ್ನೆಮನ್ ಮಲನ್, ಐಡೆನ್ ಮಾರ್ಕ್ರಮ್, ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸೆನ್, ವಿಯಾನ್ ಮುಲ್ಡರ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್ (ನಾಯಕ), ಜಾರ್ಜ್ ಲಿಂಡೆ, ಕಾಗಿಸೊ ರಬಾಡಾ, ತಬ್ರೇಜ್ ಶಮ್ಸಿ

Story first published: Wednesday, September 8, 2021, 0:29 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X