SA vs NZ Super Over: ಮೊದಲನೇ ಟಿ20 ಪಂದ್ಯ ರೋಚಕ ಟೈ: ಸೂಪರ್ ಓವರ್‌ನಲ್ಲಿ ಗೆದ್ದ ಶ್ರೀಲಂಕಾ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ರೋಚಕ ಪಂದ್ಯ ಭಾನುವಾರ ನಡೆದಿದೆ. ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ಮೊದಲನೇ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದ್ದು, ಸೂಪರ್ ಓವರ್ ನಲ್ಲಿ ಶ್ರೀಲಂಕಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪ್ರವಾಸದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಸೋತಿರುವ ಶ್ರೀಲಂಕಾ ಮೊದಲನೇ ಟಿ 20 ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ಆಕ್‌ಲ್ಯಾಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭದಲ್ಲೇ ಆಘಾತ ಅನುಭವಿಸಿತು. ಪತುಮ್ ನಿಸಂಕಾ ಮೊದಲನೇ ಎಸೆತದಲ್ಲೇ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಕುಶಾಲ್ ಮೆಂಡಿಸ್ 9 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 25 ರನ್ ಗಳಿಸಿದರು.

ಕುಶಾಲ್ ಪೆರೆರಾ 45 ಎಸೆತಗಳಲ್ಲಿ 4 ಬೌಂಡರಿ ಒಂದು ಸಿಕ್ಸರ್ ಸಹಿತ ಅಜೇಯ 53 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಧನಂಜಯ ಡಿ ಸಿಲ್ವ 10 ಎಸೆತಗಳಲ್ಲಿ 15 ರನ್ ಗಳಿಸಿದರು. ಚರಿತ್ ಅಸಲಂಕ 41 ಎಸೆತಗಳಲ್ಲಿ 2 ಬೌಂಡರಿ 6 ಸಿಕ್ಸರ್ ಸಹಿತ 67 ರನ್ ಗಳಿಸಿದರು. ದಸುನ್ ಶನಕ 1 ರನ್ ಗಳಿಸಿ ಔಟಾದರೆ, ವನಿಂದು ಹಸರಂಗ 11 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 21 ರನ್ ಗಳಿಸಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿದರು.

ನ್ಯೂಜಿಲೆಂಡ್‌ಗೆ ಡೇರಿಲ್ ಮಿಚೆಲ್ ಆಸರೆ
ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಚದ್ ಬೊವಸ್ 2 ರನ್ ಗಳಿಸಿ ಔಟಾದರೆ, ಟಿಮ್ ಸೀಫರ್ಟ್ ಶೂನ್ಯಕ್ಕೆ ಔಟಾದರು. ನಾಯಕ ಟಾಮ್ ಲಾಥಮ್ 27 ರನ್ ಗಳಿಸಿದರೆ, ಡೇರಿಲ್ ಮಿಚೆಲ್ 44 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 66 ರನ್ ಗಳಿಸಿದರು. ಮಾರ್ಕ್ ಚಾಪ್‌ಮನ್ 33 ರನ್ ಗಳಿಸಿದರು. ಜೇಮ್ಸ್ ನೀಶಮ್ 19 ರನ್ ಗಳಿಸಿದರು. ರಚಿನ್ ರವೀಂದ್ರ 13 ಎಸೆತಗಳಲ್ಲಿ 26 ರನ್ ಗಳಿಸಿದರು. ಆಡಮ್ ಮಿಲ್ನೆ 3 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ 13 ರನ್ ಬೇಕಿತ್ತು.
ನಾಯಕ ದಸುನ್ ಶನಕ ಕೊನೆಯ ಓವರ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲ ಎಸೆತದಲ್ಲೇ ರಚಿನ್ ರವೀಂದ್ರ ಔಟಾದರು. ಎರಡು ಮತ್ತು ಮೂರನೇ ಎಸೆತದಲ್ಲಿ ಇಶ್ ಸೋಧಿ ತಲಾ ಎರಡು ರನ್ ಗಳಿಸಿದರು. ನಾಲ್ಕನೇ ಎಸೆತದಲ್ಲಿ ಒಂದು ರನ್ ಗಳಿಸಿದರೆ, ಐದನೇ ಎಸೆತದಲ್ಲಿ ಕೂಡ 1 ರನ್ ಗಳಿಸಿದರು. ಅಂತಿಮ ಎಸೆತದಲ್ಲಿ ನ್ಯೂಜಿಲೆಂಡ್ ಗೆಲುವಿಗೆ 7 ರನ್ ಬೇಕಾಗಿತ್ತು, ಕೊನೆಯ ಎಸೆತದಲ್ಲಿ ಇಶ್ ಸೋಧಿ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯ ರೋಚಕವಾಗಿ ಡ್ರಾನಲ್ಲಿ ಅಂತ್ಯವಾಯಿತು.

ಮಹೀಶ್ ತೀಕ್ಷಣಾ ಅತ್ಯುತ್ತಮ ಬೌಲಿಂಗ್
ಸೂಪರ್ ಓವರ್ ಬೌಲಿಂಗ್ ಮಾಡಿದ ಮಹೀಶ್ ತೀಕ್ಷಣ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಕೇವಲ 8 ರನ್ ನೀಡಿ ಎರಡು ವಿಕೆಟ್ ಪಡೆದರು. ಶ್ರೀಲಂಕಾ ಗೆಲುವಿಗೆ 6 ಎಸೆತಗಳಲ್ಲಿ 9 ರನ್ ಅವಶ್ಯಕತೆ ಇತ್ತು. ಸೂಪರ್ ಓವರ್ ನ ಎರಡನೇ ಎಸೆತವನ್ನೇ ಸಿಕ್ಸರ್ ಸಿಡಿಸಿದ ಅಸಲಂಕಾ ಮೂರನೇ ಎಸೆತದಲ್ಲೇ ಬೌಂಡರಿ ಗಳಿಸುವ ಮೂಲಕ ಶ್ರೀಲಂಕಾ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. 41 ಎಸೆತಗಳಲ್ಲಿ 67 ರನ್ ಗಳಿಸಿದ ಚರಿತ್ ಅಸಲಂಕ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications