For Quick Alerts
ALLOW NOTIFICATIONS  
For Daily Alerts
 

ಒಂದೇ ಪಂದ್ಯದಲ್ಲಿ 2 ದ್ವಿಶತಕ ದಾಖಲೆ ಬರೆದ ಲಂಕಾದ ಏಂಜೆಲೋ ಪೆರೆರಾ!

Sri Lankan batsman Angelo Perera hits 2 double hundreds in a single match

ಕೊಲಂಬೋ, ಫೆಬ್ರವರಿ 5: ಪ್ರಥಮದರ್ಜೆ ಕ್ರಿಕೆಟ್‌ನ ಒಂದೇ ಪಂದ್ಯದಲ್ಲಿ ಎರಡೆರಡು ದ್ವಿಶತಕ ಬಾರಿಸಿದ ಅಪರೂಪದ ದಾಖಲೆಯನ್ನು ಶ್ರೀಲಂಕಾ ಆಟಗಾರ ಏಂಜೆಲೋ ಪೆರೆರಾ ಅವರು ಮಾಡಿದ್ದಾರೆ. ನಂದಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ (ಎಸ್‌ಸಿಸಿ) ತಂಡದ ನಾಯಕರಾಗಿರುವ ಏಂಜೆಲೋ, ವಿಶಿಷ್ಟ ದಾಖಲೆಗೆ ಕಾರಣರಾಗಿದ್ದಾರೆ.

ಏಂಜೆಲೋ ಪೆರೆರಾ ಅವರು ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (ಎಸ್‌ಎಸ್‌ಸಿ) ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 201, ದ್ವಿತೀಯ ಇನ್ನಿಂಗ್ಸ್‌ನಲ್ಲಿ 231 ರನ್ ಬಾರಿಸಿದರು. ಇದರೊಂದಿಗೆ ಈ ಅಪರೂಪದ ಸಾಧನೆ ಮೆರೆದ ಶ್ರೀಲಂಕಾದ ಮೊದಲನೇ ಬ್ಯಾಟ್ಸ್ಮನ್ ಮತ್ತು ವಿಶ್ವದ ಎರಡನೇ ಆಟಗಾರ ಹಿರಿಮೆಗೆ ಪೆರೆರಾ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ 1938ರಲ್ಲಿ ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ಪ್ರತಿನಿಧಿಸಿದ್ದ ಇಂಗ್ಲೆಂಡ್‌ನ ಆರ್ಥರ್ ಫ್ಯಾಗ್ ಅವರು ಎಸೆಕ್ಸ್ ತಂಡದ ವಿರುದ್ಧ ಎರಡು ದ್ವಿಶತಕಗಳನ್ನು ಬಾರಿಸಿದ್ದರು. ಆರ್ಥರ್ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 244 ರನ್ ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 202 ರನ್ ಬಾರಿಸಿದ್ದರು.

ಜನವರಿ 31ರಿಂದ ಫೆಬ್ರವರಿ 3ರ ವರೆಗೆ ನಡೆದ ಎನ್‌ಸಿಸಿ vs ಎಸ್‌ಎಸ್‌ಸಿ ಪ್ರಥಮದರ್ಜೆ ಪಂದ್ಯದಲ್ಲಿ ಏಂಜೆಲೋ ಈ ದಾಖಲೆ ಮಾಡಿದ್ದಾರೆ. ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿತಾದರೂ 28ರ ಹರೆಯದ ಏಂಜೆಲೋ ಪೆರೆರಾ ಇತಿಹಾಸ ಪುಸ್ತಕದಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ.

Story first published: Tuesday, February 5, 2019, 13:26 [IST]
Other articles published on Feb 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+