ನ್ಯೂಜಿಲೆಂಡ್ ವೇಗಿಯ ಬೌಲಿಂಗ್ ದಾಳಿಗೆ ಶ್ರೀಲಂಕಾ ದಾಂಡಿಗನ ಬ್ಯಾಟ್ ಛಿದ್ರ!: ವಿಡಿಯೋ
ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದು ಎರಡನೇ ಪಂದ್ಯ ಇಂದು ನಡೆಯಿತು. ಈ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ನ್ಯೂಜಿಲೆಂಡ್ ತಂಡ 9 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿ ಈಗ 1-1 ಅಂತರದಿಂದ ಸಮಬಲಗೊಂಡಿದೆ.
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವೇಗಿ ಆಡಂ ಮಿಲ್ನೆ ಐದು ವಿಕೆಟ್ ಪಡೆದು ಲಂಕಾ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಆಘಾತವನ್ನು ನೀಡಿದ್ದು ಈ ಮೂಲಕ ಲಂಕಾ ಪಡೆ ಕನಿಷ್ಠ ಮೊತ್ತಕ್ಕೆ ಆಲವಟ್ ಆಗುವಂತೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಮಿಲ್ನೆ ದಾಳಿ ಎಷ್ಟು ಆಘಾತಕಾರಿ ಹಾಗೂ ಪರಿಣಾಮಕಾರಿಯಾಗಿ ಇತ್ತು ಎನ್ನುವದಕ್ಕೆ ಫಾತುಮ್ ನಿಸ್ಸಾಂಕಾಗೆ ಎಸೆದ ಒಂದು ಎಸೆತ ಸಾಕ್ಷಿ ಹೇಳುವಂತಿದೆ.

ಆಡಂ ಮಿಲ್ನೆ ಎಸೆದ ಒಂದು ಎಸೆತ ಫಾತುಮ್ ನಿಸ್ಸಂಕ ಅವರ ಬ್ಯಾಟನ್ನು ಎರಡು ಭಾಗಮಾಡಿದೆ. ಮಿಲ್ನೆ ಎಸೆತವನ್ನು ನಿಸ್ಸಂಕ ತಡೆಯುವ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾದರು. ಆದರೆ ಬ್ಯಾಟ್‌ನ ಹ್ಯಾಂಡಲ್‌ನ ಭಾಗಕ್ಕೆ ಬಿದ್ದ ಚೆಂಡು ಬ್ಯಾಟನ್ನು ಇಭ್ಭಾಗವನ್ನಾಗಿಸಿತು. ಹೀಗಾಗಿ ಬ್ಯಾಟ್ ಬದಲಾಯಿಸಿಕೊಂಡು ಫಾತುಮ್ ನಿಸ್ಸಂಕ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಆತಿಥೆಯ ನ್ಯೂಜಿಲೆಂಡ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಶ್ರೀಲಂಕಾದ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸಿದ ಕಿವೀಸ್ ಬೌಲರ್‌ಗಳು ಲಂಕಾ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಕುಸಲ ಪೆರೆರ ಹಾಗೂ ಧನಂಜಯ ಡಿಸಿಲ್ವ ಹೊರತುಪಡಿಸಿ ಉಳಿದ ಯಾವ ಆಟಗಾರನಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ. ಹೀಗಾಗಿ 19 ಓವರ್‌ಗಳಲ್ಲಿ ಶ್ರೀಲಂಕಾ ಕೇವಲ 141 ರನ್‌ಗಳನ್ನು ಪೇರಿಸಿ ಆಲೌಟ್ ಆಗಿದೆ.
ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕ ಉತ್ತಮ ಆರಂಭ ದೊರೆಯಿತು. ಆರಂಭಿಕ ಆಟಗಾರ ಚಾದ್ ಬೌಸ್ 31 ರನ್‌ಗಳಿಸಿ ಔಟಾದ ಬಳಿಕ ಟಿಮ್ ಸೈಫರ್ಟ್ ಹಾಗೂ ನಾಯಕ ಟಾಮ್ ಲ್ಯಾಥಮ್ ವಿಕೆಟ್ ಕಳೆದುಕೊಳ್ಳದೆಯೇ ಲಂಕಾ ನೀಡಿದ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಸೈಫರ್ಟ್ ಕೇವಲ 43 ಎಸೆತಗಳಲ್ಲಿ 79 ರನ್ ಬಾರಿಸಿ ಸುಲಭ ಗೆಲುವಿಗೆ ಕಾರಣವಾದರು. ಇನ್ನೂ 32 ಎಸೆತಗಳು ಬಾಕಿಯಿರುವಂತೆಯೇ ನ್ಯೂಜಿಲೆಂಡ್ ತಂಡ 9 ವಿಕೆಟ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ ಆಡುವ ಬಳಗ: ಚಾಡ್ ಬೋವ್ಸ್, ಟಿಮ್ ಸೀಫರ್ಟ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ, ಆಡಮ್ ಮಿಲ್ನೆ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬೆನ್ ಲಿಸ್ಟರ್
ಬೆಂಚ್: ಮ್ಯಾಟ್ ಹೆನ್ರಿ, ವಿಲ್ ಯಂಗ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆ್ ಕೀಪರ್), ಕುಸಲ್ ಪೆರೆರಾ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಮಹೇಶ್ ತೀಕ್ಷಣ, ಪ್ರಮೋದ್ ಮದುಶನ್, ದಿಲ್ಶನ್ ಮಧುಶಂಕ, ಕಸುನ್ ರಜಿತ
ಬೆಂಚ್: ಚಾಮಿಕ ಕರುಣಾರತ್ನ, ಲಹಿರು ಕುಮಾರ, ಸದೀರ ಸಮರವಿಕ್ರಮ, ನುವಾನಿದು ಫೆರ್ನಾಂಡೋ, ದುನಿತ್ ವೆಲ್ಲಲಗೆ, ಮತೀಶ ಪತಿರಣ, ಲಸಿತ್ ಕ್ರೂಸ್ಪುಲ್ಲೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications