ಕಡಿಮೆ ವೇತನ ಒಪ್ಪಂದಕ್ಕೆ ಸಹಿ ಹಾಕಲು ಶ್ರೀಲಂಕಾ ಕ್ರಿಕೆಟರ್ಸ್ ನಕಾರ

ಕೊಲಂಬೋ: ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರು ಶನಿವಾರ (ಜೂನ್ 5) ಕಡಿಮೆ ವೇತನ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಶನಿವಾರ ಅವರಿಗೆ ಸಹಿ ಹಾಕಲು ಗಡುವು ನೀಡಲಾಗಿತ್ತಾದರೂ ಸಹಿ ಹಾಕಿಲ್ಲ. ಆದರೆ ಮುಂಬರಲಿರುವ ಇಂಗ್ಲೆಂಡ್ ಪ್ರವಾಸದಲ್ಲಿ ಪಾಲ್ಗೊಳ್ಳುವುದಾಗಿ ಆಟಗಾರರು ಹೇಳಿದ್ದಾರೆ.
ಕ್ರಿಕೆಟ್ ಬೋರ್ಡ್ ನೂತನವಾಗಿ ತಂದಿರುವ ಪ್ರದರ್ಶನಕ್ಕನುಸಾರ ವೇತನ ಒಪ್ಪಂದಕ್ಕೆ ಕ್ರಿಕೆಟರ್‌ಗಳು ಸಹಿ ಹಾಕಲು ಒಪ್ಪಿಲ್ಲ. ಹೊಸ ಒಪ್ಪಂದ ರೂಪಿಸಿರುವ ಕ್ರಿಕೆಟ್ ಬೋರ್ಡ್ ಪ್ಯಾನೆಲ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಟಾಮ್ ಮೂಡಿ ಕೂಡ ಇದ್ದರು ಎಂದು ಕ್ರಿಕೆಟರ್‌ಗಳ ಪ್ರತಿನಿಧಿ ಲಾಯರ್ ಹೇಳಿದ್ದಾರೆ.
'ವೇತನಕ್ಕೆ ಸಂಬಂಧಿಸಿದ ಘರ್ಷಣೆ ಬಗೆಹರಿಸುವವರೆಗೂ ವಾರ್ಷಿಕ ಮತ್ತು ಪ್ರವಾಸ ಒಪ್ಪಂದಗಳಿಗೆ ಸಹಿ ಹಾಕಲು ಕ್ರಿಕೆಟರ್‌ಗಳು ನಿರಾಕರಿಸಿದ್ದಾರೆ,' ಎಂದು ಲಾಯರ್ ಪ್ರೇಮತಿರತ್ನೆ ಹೇಳಿದ್ದಾರೆ. ಹೊಸ ಒಪ್ಪಂಕ್ಕೆ ಸಹಿ ಹಾಕಲು ಲಂಕಾ ಕ್ರಿಕೆಟರ್‌ಗಳಿಗೆ ಜೂನ್ 3ರಂದು ಕಡೆಯ ದಿನಾಂಕವೆಂದು ಹೇಳಲಾಗಿತ್ತು. ಆದರೆ ಮತ್ತೆ ದಿನಾಂಕವನ್ನು ಜೂನ್ 5ರ ಶನಿವಾರದ ವರೆಗೆ ವಿಸ್ತರಿಸಲಾಗಿತ್ತು.
ಇದೇ ತಿಂಗಳ ಕೊನೆಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಪ್ರವಾಸವನ್ನು ಒಪ್ಪಂದವಿಲ್ಲದೆ ಆಡಲು ಲಂಕಾ ಕ್ರಿಕೆಟರ್ಸ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್ ಪ್ರವಾಸ ಸರಣಿಯು 3 ಟಿ20ಐ ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications