ಜೂನ್ 1ರಿಂದ ಮೈದಾನಕ್ಕಿಳಿಯಲು ಶ್ರೀಲಂಕಾ ಕ್ರಿಕೆಟಿಗರು ಸಜ್ಜು

ಕೊಲಂಬೋ, ಮೇ 31: ಬೌಲರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ 13 ಮಂದಿ ಶ್ರೀಲಂಕಾ ಕ್ರಿಕೆಟಿಗರ ತಂಡ ಸೋಮವಾರದಿಂದ (ಜೂನ್ 1) ಮೈದಾನಕ್ಕಿಳಿಯಲಿದೆ, ಅಭ್ಯಾಸ ಆರಂಭಿಸಲಿದೆ. ಕೊರೊನಾ ವೈರಸ್‌ನಿಂದ ಕ್ರೀಡಾಚಟುವಟಿಕೆಗಳು ನಿಲುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಲಂಕಾ ಆಟಗಾರರು ಅಭ್ಯಾಸಕ್ಕಾಗಿ ಮೈದಾನಕ್ಕಿಳಿಲಿದ್ದಾರೆ.
'ಆಯ್ದ 13 ಮಂದಿಯ ತಂಡ ಕೊಲಂಬೋ ಕ್ರಿಕೆಟ್ ಕ್ಲಬ್‌ನಲ್ಲಿ 12 ದಿನಗಳ ವಸತಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ,' ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಹೇಳಿಕೆ ಮೂಲಕ ತಿಳಿಸಿದೆ. ಕೊರೊನಾವೈರಸ್ ಕಾರಣ ಎಲ್ಲಾ ಆಟಗಾರರು ತಪ್ಪದೆ ಸರ್ಕಾರ ನೀಡಿರುವ ಆರೋಗ್ಯ ಸಂಬಂಧಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.
'ಶಿಬಿರದಲ್ಲಿ ಭಾಗವಹಿಸುವ ಆಟಗಾರರು ಎಲ್ಲಾ ಮಾದರಿಗಳಿಂದ ಆಯ್ಕೆಯಾದ ಸಾಮಾನ್ಯ ತಂಡವನ್ನು ಪ್ರತಿನಿಧಿಸುತ್ತಾರೆ. ಇಲ್ಲಿರುವವರಲ್ಲಿ ಬೌಲರ್‌ಗಳು ಹೆಚ್ಚಿದ್ದಾರೆ. ಯಾಕೆಂದರೆ ಅವರು ಸ್ಪರ್ಧೆಗೆ ಹೋಗುವ ಮುನ್ನ ಅವರಿಗೆ ಕಂಡೀಶನಿಂಗ್‌ಗೆ ಹೆಚ್ಚು ಸಮಯ ಬೇಕಾಗುತ್ತದೆ,' ಎಂದು ಎಸ್‌ಎಲ್‌ಸಿ ಹೇಳಿದೆ.
ಕ್ರೀಡಾ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದ ಸಮಾಲೋಚನೆಯಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ಅಭ್ಯಾಸದ ವೇಳೆ ಪ್ರತೀ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲಿದ್ದೇವೆ,' ಎಂದು ಲಂಕಾ ಕ್ರಿಕೆಟ್ ಮಾಹಿತಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications