ಏಷ್ಯಾ ಕಪ್ 2018 ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ!

ಕೊಲಂಬೊ, ಸೆಪ್ಟೆಂಬರ್ 11 : ಏಷ್ಯಾ ಕಪ್ 2018 ಟೂರ್ನಮೆಂಟ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ಶ್ರೀಲಂಕಾ ತಂಡಕ್ಕೆ ಭಾರಿ ಹಿನ್ನಡೆಯಾಗಿದ್ದು, ತಂಡದ ಪ್ರಮುಖ ಆಟಗಾರರೊಬ್ಬರು ಗಾಯಾಳುವಾಗಿ, ಟೂರ್ನಮೆಂಟ್ ನಿಂದ ಹೊರಗುಳಿಯಬೇಕಾಗಿದೆ.
ಶ್ರೀಲಂಕಾದ ಟೆಸ್ಟ್ ತಂಡ ನಾಯಕ ದಿನೇಶ್ ಚಾಂಡಿಮಾಲ್ ಅವರು ಶ್ರೀಲಂಕಾದ 16 ಮಂದಿ ಸದಸ್ಯರ ತಂಡದಿಂದ ಹೊರ ನಡೆದಿದ್ದಾರೆ. ಇತ್ತೀಚೆಗೆ ಶ್ರೀಲಂಕಾದ ದೇಶಿ ಪಂದ್ಯಾವಳಿಯೊಂದರಲ್ಲಿ ಆಡುವಾಗ ಗಾಯಗೊಂಡಿದ್ದರು, ಗಾಯದಿಂದ ಗುಣಮುಖರಾಗಿಲ್ಲ ಎಂದು ಶ್ರೀಲಂಕಾದ ಕ್ರಿಕೆಟ್ ಸಮಿತಿ ಪ್ರಕಟಿಸಿದೆ.
28ವರ್ಷ ವಯಸ್ಸಿನ ಚಾಂಡಿಮಾಲ್ ಅವರು, ದೇಶಿ ಟ್ವೆಂಟಿ20 ಪಂದ್ಯದಲ್ಲಿ ಆಡುವಾಗ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆದರೆ, ಗಾಯ ಉಲ್ಬಣವಾಗಿದ್ದು, ಗುಣಮುಖರಾಗಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ ಎಂದು ತಂಡದ ವೈದ್ಯರು ಹೇಳಿದ್ದಾರೆ.
ಚಾಂಡಿಮಾಲ್ ಅವರ ಬದಲಿಗೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಿರೋಶನ್ ಡಿಕ್ ವೆಲ್ಲಾ ಅವರಿಗೆ ಆಡುವ ಅವಕಾಶ ಸಿಕ್ಕಿದೆ. ಆರು ರಾಷ್ಟ್ರಗಳ ಈ ಏಷ್ಯಾಕಪ್ ಟೂರ್ನಮೆಂಟ್ ಸೆಪ್ಟೆಂಬರ್ 15ರಿಂದ ಯುಎಇಯಲ್ಲಿ ನಡೆಯಲಿದೆ.
ಶ್ರೀಲಂಕಾ ತಂಡ : ಏಂಜೆಲೋ ಮ್ಯಾಥ್ಯೂಸ್ (ನಾಯಕ), ಕುಸಲ್ ಪೆರೆರಾ, ಕುಸಲ್ ಮೆಂಡಿಸ್, ಉಪುಲ್ ತರಂಗಾ, ನಿರೋಶನ್ ಡಿಕ್ ವೆಲ್ಲಾ, ದನುಷ್ಕ ಗುಣತಿಲಕ, ಥಿಸರಾ ಪೆರೆರಾ, ದಸುನ್ ಶನಕ, ಧನಂಜಯ ಡಿ ಸಿಲ್ವಾ, ಅಕಿಲ ಧನಂಜಯ, ದುಲ್ರುವಾನ್ ಪೆರೆರಾ, ಅಮಿಲಾ ಅಪೊನ್ಸೊ, ಕಸುನ್ ರಂಜಿತಾ, ಸುರಂಗಾ ಲಕ್ಮಲ್, ದುಷ್ಮಂತಾ ಚಮೀರಾ, ಲಸಿತ್ ಮಾಲಿಂಗಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications