ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಶ್ರೀಲಂಕಾ: 30 ವರ್ಷದ ಬಳಿಕ ಐತಿಹಾಸಿಕ ಸಾಧನೆ ಮಾಡಿದ ಲಂಕಾ ಪಡೆ

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿಯೂ ಶ್ರೀಲಂಕಾ ಅಮೋಘ ಆಟ ಪ್ರದರ್ಶಿಸಿದ್ದು ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ 3-1 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಬರೊಬ್ಬರಿ 30 ವರ್ಷದ ಬಳಿಕ ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸರಣಿ ಗೆದ್ದಂತಾಗಿದೆ. ಶ್ರೀಲಂಕಾ ಪರವಾಗಿ ಚರಿತ್ ಅಸಲಂಕಾ ಭರ್ಜರಿ ಶತಕ ಸಿಡಿಸಿದರೆ ಆಸಿಸ್ ಪರವಾಗಿ ಡೇವಿಡ್ ವಾರ್ನರ್ 99 ರನ್‌ಗಳಿಗೆ ಔಟಾಗುವ ಮೂಲಕ ಒಂದು ರನ್‌ನಿಂದ ಶತಕ ವಂಚಿತವಾಗಿದ್ದಾರೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 258 ರನ್‌ಗಳನ್ನು ಗಳಿಸಿತು. ಆರಂಭದಲ್ಲಿ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಶ್ರೀಲಂಕಾ ತಂಡಕ್ಕೆ ಧನಂಜಯ ಡಿಸಿಲ್ವ ಹಾಗೂ ಚರಿತ್ ಅಸಲಂಕ ಜೋಡಿ ಶತಕದ ಜೊತೆಯಾಟ ನೀಡುವ ಮೂಲಕ ಚೇತರಿಕೆ ನೀಡಿದರು. ನಂತರ ಅಸಲಂಕಾ ಏಕಾಂಗಿ ಹೋರಾಟ ನಡೆದಿ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣವಾದರು. ಧನಂಜಯ 60 ರನ್‌ಗಳ ಕೊಡುಗೆ ನೀಡಿದರೆ ಅಸಲಂಕಾ 106 ಎಸೆತಗಳನ್ನು ಎದುರಿಸಿ 110 ರನ್‌ಗಳಿಸಿ ಪ್ಯಾಟ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಶ್ರೀಲಂಕಾ ತಂಡ 49 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 258 ರನ್‌ಗಳಿಸಲು ಯಶಸ್ವಿಯಾಯಿತು.
ಇನ್ನು ಶ್ರೀಲಂಕಾ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಆಸರೆಯಾದರು. ಆದರೆ ಇತರ ದಾಂಡಿಗರಿಂದ ವಾರ್ನರ್‌ಗೆ ಉತ್ತಮ ಬೆಂಬಲ ದೊರೆಯಲಿಲ್ಲ. 99 ರನ್‌ಗಳಿಸಿದ ಡೇವಿಡ್ ವಾರ್ನರ್ ಕೇವಲ ಒಂದು ರನ್‌ನಿಂದ ಶತಕ ವಂಚಿತವಾಗಿದ್ದಾರೆ. ವಾರ್ನರ್ ವಿಕೆಟ್ ಕಳೆದುಕೊಂಡ ನಂತರ ಪ್ಯಾಟ್ ಕಮ್ಮಿನ್ಸ್ ಆಸಿಸ್ ಪರವಾಗಿ ಹೋರಾಟವನ್ನು ನಡೆಸಿದರು.
ಪ್ಯಾಟ್ ಕಮ್ಮಿನ್ಸ್ 35 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಅಂತಿಮ ಓವರ್‌ನಲ್ಲಿ ಮ್ಯಾಥ್ಯೂ ಕನ್ನೇಮಾನ್ ಬೌಂಡರಿ ಮೇಲೆ ಬೌಂಡರಿ ಸಿಡಿಸಿ ಲಂಕಾ ಪಡೆಗೆ ಆಘಾತ ನೀಡಿದರು. ಆದರೆ ಅಂತಿಮ ಎಸೆತದಲ್ಲಿ ಕನ್ನೇಮನ್ ವಿಕೆಟ್ ಪಡೆಯುವ ಮೂಲಕ ನಾಯಕ ಶನಕ ತಂಡದ ಗೆಲುವನ್ನು ಘೋಷಿಸಿದರು.
ಶ್ರೀಲಂಕಾ ಸ್ಕ್ವಾಡ್: ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಜೆಫ್ರಿ ವಂಡರ್ಸೆ, ಮಹೀಶ್ ತೀಕ್ಷಣ
ಬೆಂಚ್: ದುಷ್ಮಂತ ಚಮೀರ, ದನುಷ್ಕ ಗುಣತಿಲಕ, ದಿನೇಶ್ ಚಂಡಿಮಲ್, ಭಾನುಕಾ ರಾಜಪಕ್ಸೆ, ಲಹಿರು ಮಧುಶಂಕ, ರಮೇಶ್ ಮೆಂಡಿಸ್, ಅಸಿತ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ, ಪ್ರಮೋದ್ ಮದುಶನ್, ನುವಾನ್ ತುಷಾರ
ಆಸ್ಟ್ರೇಲಿಯಾ; ಆರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಜ್ಯೆ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ವೆಪ್ಸನ್, ಜೋಶ್ ಇಂಗ್ಲಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications