ಸಿಪಿಎಲ್ 3ನೇ ದಿನದ ಹೈಲೈಟ್ಸ್: ಮಳೆ ಬೇಧಿಸಿದ 'ಝೌಕ್ಸ್', ಚಳಿಬಿಡಿಸಿದ ನರೈನ್

ಸಿಪಿಎಲ್‌ನ ಮೂರನೇ ದಿನವೂ ಎರಡು ಪಂದ್ಯಗಳು ನಡೆದಿತ್ತು. ಆದರೆ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿತ್ತು. ಹೀಗಾಗಿ ಮೊದಲ ಪಂದ್ಯದಲ್ಲಿ ಓವರ್‌ಗಳ ಕಡಿತ ಮಾಡಿ ಗುರಿಯನ್ನು ನಿಗದಿ ಮಾಡಲಾಗಿತ್ತು. ಸೇಂಟ್ ಲೂಸಿಯಾ ಝೌಕ್ಸ್ ಹಾಗೂ ಬಾರ್ಬಡೋಸ್ ಟ್ರಿಡೆಂಟ್ಸ್ ಮಧ್ಯೆ ನಡೆದ ಮೊದಲ ಪಂದ್ಯದಲ್ಲಿ ಆರಂಭದಲ್ಲಿ ಬಾರ್ಬಡೊಸ್ ತಂಡ ಬ್ಯಾಟಿಂಗ್‌ಗೆ ಇಳಿಯಿತು.
ಬಾರ್ಬೋಡೋಸ್ ಟ್ರಿಡೆಂಟ್ಸ್ ತಂಡ 18.1 ಓವರ್‌ಗಳ ಬ್ಯಾಟಿಂಗ್ ಮಾಡುವ ವೇಳೆಗೆ ಮಳೆ ಸುರಿದು ಅಡ್ಡಿಯುಂಟು ಮಾಡಿದ ಕಾರಣ ಪಂದ್ಯ ಸ್ಥಗಿತವಾಯಿತು. ಈ ವೇಳೆಗೆ ಬಾರ್ಬಡೋಸ್ 131 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಪಂದ್ಯ ತಂಡವಾಗಿ ಆರಂಭವಾದ ಕಾರಣ ಡಿಎಲ್‌ಎಸ್ ನಿಯಮದ ಪ್ರಕಾರ 5 ಓವರ್‌ಗಳಲ್ಲಿ 47 ರನ್‌ಗಳ ಗುರಿಯನ್ನು ನಿಗದಿ ಪಡಿಸಲಾಗಿತ್ತು. ಈ ಗುರಿಯನ್ನು ಸೇಂಟ್ ಲೂಸಿಯಾ ಝೌಕ್ಸ್ ತಂಡ 3 ವಿಕೆಟ್ ಕಳೆದುಕೊಂಡು ಗೆಲುವನ್ನಾಚರಿಸಿತು.
ಟೂರ್ನಿಯ 6ನೇ ಪಂದ್ಯ ಜಮೈಕಾ ತಲ್ಲವಾಸ್ ಹಾಗೂ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡಗಳ ಮಧ್ಯೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಜಮೈಕಾ ತಲ್ಲವಾಸ್ ತಂಡಕ್ಕೆ ಗ್ಲೆನ್ ಫಿಲಿಪ್ಸ್(58 ರನ್) ಹೊರತು ಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್‌ನಿಂದ ಕೂಡ ಉಪಯುಕ್ತ ನೆರವು ದೊರೆಯಲಿಲ್ಲ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 135 ರನ್‌ಗೆ 8 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತ್ತು.
ಜಮೈಕಾ ತಲ್ಲವಾಸ್ ತಂಡ ನೀಡಿದ ಸುಲಭ ಸವಾಲನ್ನು ಬೆನ್ನಟ್ಟಿದ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಯಾವುದೇ ಆತಂಕಕ್ಕೊಳಗಾಗದೆ ತಲುಪಿತು. ಈ ಪಂದ್ಯದಲ್ಲೂ ಸುನಿಲ್ ನರೈನ್ ಅಬ್ಬರಿಸಿದರು. ಕಾಲಿನ್ ಮುನ್ರೋ ಜೊತೆ ನರೈನ್ 75 ರನ್‌ಗಳ ಜೊತೆಯಾಟವನ್ನು ನೀಡಿದರು.
ಸುನಿಲ್ ನರೈನ್ ಸತತ ಎರಡನೇ ಪಂದ್ಯದಲ್ಲೂ ವೇಗದ ಅರ್ಧ ಶತಕವನ್ನು ಬಾರಿಸಿ ಮಿಂಚಿದರು. 38 ಎಸೆತಗಳಲ್ಲಿ 53 ರನ್ ಬಾರಿಸಿದರೆ ಮುನ್ರೋ 46 ಎಸೆತಗಳಲ್ಲಿ 49 ರನ್ ಬಾರಿಸಿದರು. ಈ ಮೂಲಕ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಸುಲಭ ಗೆಲುವನ್ನು ಆಚರಿಸಿತು. ಸುನಿಲ್ ಬೌಲಿಂಗ್‌ನಲ್ಲೂ ಮಿಂಚಿ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications