ವಿಶ್ವಕಪ್: ಅದ್ದೂರಿ ಕ್ರಿಕೆಟ್ ಹಬ್ಬಕ್ಕೆ ಐಸಿಸಿಯಿಂದ ಅಧಿಕೃತ ಗೀತೆ ಬಿಡುಗಡೆ

ಲಂಡನ್, ಮೇ 18: ಮೇ 30ರಿಂದ ಜುಲೈ 14ರ ವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ಗಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧಿಕೃತ ಗೀತೆಯನ್ನು ಬಿಡುಗಡೆಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ.
ಲಾರಿನ್ ಮತ್ತು ಯುನೈಟೆಡ್ ಕಿಂಗ್ಡಮ್‌ನ ಯಶಸ್ವಿ ಬ್ಯಾಂಡ್ ರೂಡಿಮೆಂಟಲ್ ಸಹಯೋಗದಲ್ಲಿ 'ಸ್ಟ್ಯಾಂಡ್ ಬೈ' ಹೆಸರಿನ ಅಧಿಕೃತ ಗೀತೆಯನ್ನು 'ಕ್ರಿಕೆಟ್ ವರ್ಲ್ಡ್ ಕಪ್' ಮೇ 17ರಂದು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಟೂರ್ನಿಯುದ್ದಕ್ಕೂ ಕೇಳಿಬರಲಿರುವ ಈ ಗೀತೆ, ಮಂದಿಯನ್ನು ಕ್ರಿಕೆಟ್ ಗುಂಗಿನತ್ತ ಎಳೆಯಲಿದೆ.
ಮೇ 30ರಂದು ಆರಂಭಗೊಳ್ಳುವ ವಿಶ್ವಕಪ್ ಟೂರ್ನಿ, ಜುಲೈ 14ರಂದು ಫೈನಲ್‌ನೊಂದಿಗೆ ಅಂತ್ಯ ಹಾಡಲಿದೆ. ಸೆಮಿಫೈನಲ್ ಪಂದ್ಯಗಳು ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರ್ಯಾಫೋರ್ಡ್ ಮತ್ತು ಬರ್ಮಿಂಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಜುಲೈ 9 ಮತ್ತು 11ರಂದು ನಡೆಯಲಿದೆ. ಪ್ರಶಸ್ತಿ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ.
ವಿಶ್ವದ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಸೆಣಸಾಡಲಿದ್ದು,. ಪ್ರತಿಯೊಂದು ತಂಡವೂ ಲೀಗ್‌ನಲ್ಲಿ ಪರಸ್ಪರ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 45 ಪಂದ್ಯಗಳ ಬಳಿಕ ಅಗ್ರ ನಾಲ್ಕು ಸ್ಥಾನಗಳಲ್ಲಿ ಉಳಿಯುವ ತಂಡಗಳು ಎರಡು ಸೆಮಿಫೈನಲ್ ಸವಾಲು ಸ್ವೀಕರಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications