Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೆಳತಿಗೆ 1.7 ಕೋಟಿ ದುಬಾರಿ ಕಾರ್‌ ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ

ಭಾರತದ ಸ್ಟಾರ್ ಆಲ್‌ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈಗ ಭಾರೀ ಸುದ್ದಿಯಲ್ಲಿದ್ದಾರೆ. ಹಾರ್ದಿಕ್ ಗೆಳತಿ ಮಹಿಕಾ ಶರ್ಮಾ ಅವರೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದಾಗ ಹಾರ್ದಿಕ್ ಪಾಂಡ್ಯ, ಮಹಿಕಾ ಜೋಡಿ ಕಾಣಿಸಿಕೊಂಡಿದ್ದರು. ಐಪಿಎಲ್‌ ಆವೃತ್ತಿಯ ವೇಳೆ ಹಾರ್ದಿಕ್, ತಮ್ಮ ಗೆಳತಿಗೆ ದುಬಾರಿಯ ಬೆಲೆಯ ಕಾರ್‌ ಗಿಫ್ಟ್‌ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಗೆಳತಿ ಮಹಿಕಾ ಅವರಿಗೆ 1.7 ಕೋಟಿ ರೂಪಾಯಿ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇವರಿಬ್ಬರೂ ಕಾರಿನ ಮುಂದೆ ತೆಗೆಸಿಕೊಂಡಿರುವ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ.

Star All rounder Hardik Pandya

ಇತ್ತೀಚಿಗೆ ಹಾರ್ದಿಕ್ ಪಾಂಡ್ಯ 12 ಕೋಟಿ ರೂಪಾಯಿ ದುಬಾರಿ ಬೆಲೆಯ ಐಷಾರಾಮಿ ಕಾರ್ ಫೆರಾರಿಯನ್ನು ಖರೀದಿಸಿದ್ದರು. ಅಲ್ಲದೆ ಇದನ್ನು ತೆಗೆದುಕೊಂಡು ಮುಂಬೈನ ರಸ್ತೆಗಳಿಗೆ ಇಳಿದಿದ್ದರು. ಈ ವೇಳೆ ಹೈಸ್ಪೀಡ್ ಬ್ರೇಕ್‌ ದಾಟಿಸಲು ಕಷ್ಟ ಪಟ್ಟಿದ್ದು ಕಂಡು ಬಂದಿತು. ಈಗ ಹಾರ್ದಿಕ್ ಪಾಂಡ್ಯ ದುಬಾರಿ ಬೆಲೆಯ ಮರ್ಸಿಡಿಸ್-ಬೆನ್ಜ್ ಕಾರ್‌ನ್ನು ಮಹಿಕಾ ಉಡುಗೊರೆ ನೀಡಿದ್ದಾರೆ.

ಮುಂಬೈ ಗೆಲುವಿನ ಆರಂಭ

19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಮೂಲಕ 13 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್‌ ಮೊದಲ ಗೆಲುವಿನ ನಗೆ ಬೀರಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಸೊಗಸಾದ ಪ್ರದರ್ಶನ ನೀಡಿ ಅಬ್ಬರಿಸಿತು. ಮುಂಬೈ ತಂಡದ ಪರ ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್‌ ಪಡೆದು ಬೀಗಿದರು.

221 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ರಯಾನ್ ರಿಕಲ್ಟನ್‌ ಹಾಗೂ ರೋಹಿತ್ ಶರ್ಮಾ ಭರ್ಜರಿ ಜೊತೆಯಾಟವನ್ನು ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 148 ರನ್‌ಗಳ ಕಾಣಿಕೆ ನೀಡಿತು. ರೋಹಿತ್ ಶರ್ಮಾ 78 ರನ್ ಬಾರಿಸಿದರೆ, ರಿಕಲ್ಟನ್‌ 81 ರನ್ ಬಾರಿಸಿ ಮಿಂಚಿದರು. ಮುಂಬೈ ಇಂಡಿಯನ್ಸ್‌ 19.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿಯನ್ನು ಮುಟ್ಟಿತು.

ಮುಂಬೈ ಇಂಡಿಯನ್ಸ್‌ ಇದಕ್ಕೂ ಮೊದಲು 2012ರಲ್ಲಿ ತಾವಾಡಿದ ಮೊದಲ ಪಂದ್ಯವನ್ನು ಗೆದ್ದಿತ್ತು. ಅಲ್ಲಿಂದ ಈ ವರೆಗೆ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರಲಿಲ್ಲ.

Story first published: Tuesday, March 31, 2026, 12:03 [IST]
Other articles published on Mar 31, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+