IND vs ENG: ಟೀಮ್ ಇಂಡಿಯಾ ಸ್ಪಿನ್ ಕೋಟೆಯಲ್ಲಿ ನವಾಬ್ ನಂತೆ ಮೆರೆದ ಓಲಿ ಪೋಪ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಸಂಪೂರ್ಣ ಮೇಲುಗೈ ಸಾಧಿಸಿದೆ. ಟೀಮ್ ಇಂಡಿಯಾದ ಬಲಿಷ್ಠ ಸ್ಪಿನ್ ಅಟ್ಯಾಕ್ ಅನ್ನು ಎದುರಿಸಿದ ಇಂಗ್ಲೆಂಡ್ ಬ್ಯಾಟರ್ ಒಲಿ ಪೋಪ್ ಆರ್ಭಟಿದ್ದಾರೆ.
ಒಲಿ ಪೋಪ್ ಮತ್ತಿನಗರಿಯಲ್ಲಿ ಶನಿವಾರ ಮುತ್ತಿನಂತಹ ಇನ್ನಿಂಗ್ಸ್ ಆಡಿದ್ದಾರೆ. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ ಮೂರನೆ ದಿನದಾಟದಲ್ಲಿ ಮುನ್ನಡೆ ಸಾಧಿಸಿದೆ. ತಮ್ಮ ಕ್ಲಾಸಿಕ ಆಟದ ಪ್ರದರ್ಶನ ನೀಡಿದ ಒಲಿ ಪೋಪ್ ಅಬ್ಬರಕ್ಕೆ ಟೀಮ್ ಇಂಡಿಯಾ ಸ್ಪಿನ್ ಬೌಲರ್ ಗಳು ಮಂಕಾದರು. ಇವರನ್ನು ಔಟ್ ಮಾಡುವುದು ನಿಜಕ್ಕೂ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಗಳಿಗೆ ಸವಾಲಾಯಿತು. ವಿಶಿಷ್ಠ ಬೌಲಿಂಗ್ ಅಟ್ಯಾಕ್ ಹೊಂದಿರುವ ಟೀಮ್ ಇಂಡಿಯಾದ ತಂತ್ರವನ್ನು ಮೆಟ್ಟಿನಿಂತು ಪೋಪ್ ಬ್ಯಾಟ್ ಮಾಡಿದರು.

ಶತಕದ ಆಸರೆ
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಗಳ ಸವಾಲು ಮೀರಿ ನಿಂತ ಒಲಿ ಪೋಪ್ ಎಲ್ಲರಿಗೂ ಬೆನ್ನು ಹತ್ತಿ ಕಾಟ ನೀಡಿದರು. ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಸ್ಪಿನ್ನರ್ ಅವರನ್ನು ಸಹ ಒಲಿ ಪೋಪ್ ಕಾಡಿದರು. ಇವರ 42 ಎಸೆತಗಳಲ್ಲಿ 4 ಬೌಂಡರಿ ಸೇರಿದಂತೆ 41 ರನ್ ಸಿಡಿಸಿದರು.
ಇನ್ನು ಒಲಿ ಪೋಪ್ ಅಕ್ಷರ್ ಪಟೇಲ್ ವಿರುದ್ಧ ಎಚ್ವರಿಕೆಯಿಂದ ಬ್ಯಾಟಿಂಗ್ ನಡೆಸಿದರು. ಎಡಗೈ ಸ್ಪಿನ್ ಬೌಲರ್ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದ ಒಲಿ ಪೋಪ್ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದರು. ಅಲ್ಲದೆ ಇವರ 41 ಎಸೆತಗಳಲ್ಲಿ 4 ಬೌಂಡರಿ ಸೇರಿದಂತೆ 27 ರನ್ ಸಿಡಿಸಿದರು.
ಇನ್ನೋಬ್ಬ ಎಡಗೈ ಸ್ಪಿನ್ ಬೌಲರ್ ರವೀಂದ್ರ ಜಡೇಜಾರನ್ನು ಸಹ ಪೋಪ್ ಬಿಡಲಿಲ್ಲ. ಜಡೇಜಾ ಅವರ 94 ಎಸೆತಗಳಲ್ಲಿ ಪೋಪ್ 63 ರನ್ ಬಾರಿಸಿದರು. ಇದರಲ್ಲಿ 8 ಬೌಂಡರಿ ಸೇರಿವೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನ ಮೂರನೇ ದಿನವು ಭಾರತದ ಬ್ಯಾಟಿಂಗ್‌ನೊಂದಿಗೆ ಪ್ರಾರಂಭವಾಯಿತು. ರವೀಂದ್ರ ಜಡೇಜಾ 81 ಮತ್ತು ಅಕ್ಷರ್ ಪಟೇಲ್ 35 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತ 7 ವಿಕೆಟ್ ಕಳೆದುಕೊಂಡು 421 ರನ್‌ಗಳೊಂದಿಗೆ ದಿನದಾಟ ಆರಂಭಿಸಿತು. ಆದರೆ ಭಾರತದ ಬ್ಯಾಟ್ಸ್ ಮನ್ ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗದೆ ಆತಿಥೇಯ ತಂಡದ ಇನ್ನಿಂಗ್ಸ್ 436 ರನ್ ಗಳಿಗೆ ಅಂತ್ಯಗೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್, ಒಲಿ ಪೋಪ್ ಅವರ ಶತಕದ ನೆರವಿನಿಂದ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 316 ರನ್ ಸೇರಿಸಿದ್ದು, 126 ರನ್‌ಗಳ ಮುನ್ನಡೆ ಸಾಧಿಸಿದೆ.
ಪೋಪ್ 208 ಎಸೆತಗಳಲ್ಲಿ 17 ಬೌಂಡರಿಗಳ ಸಹಾಯದಿಂದ ಅಜೇಯ 148 ರನ್ ಗಳಿಸಿದರು. ಈ ಸಮಯದಲ್ಲಿ, ರೆಹಾನ್ ಅಹ್ಮದ್ ಅವರಿಗೆ ಬೆಂಬಲ ನೀಡಿದರು ಮತ್ತು 31 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ ಅಜೇಯ 16 ರನ್ ಗಳಿಸಿದರು. ಆಲಿ ಪೋಪ್ ಅವರ ಶತಕವು ಇಂಗ್ಲೆಂಡ್‌ಗೆ ಜೀವಸೆಲೆಯಂತೆ ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications