IPL Retirement: ಮುಂದಿನ ವರ್ಷದಿಂದ ಐಪಿಎಲ್‌ಗೆ ಈ ಸ್ಟಾರ್ ಕ್ರಿಕೆಟಿಗರು ಗುಡ್ ಬೈ!
ಮೇ 27 ಸೋಮವಾರ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಭಾನುವಾರ ತೆರೆಬಿದ್ದಿದೆ. ಈ ಬಾರಿಯ ಐಪಿಎಲ್ ಪರೋಕ್ಷವಾಗಿ ಅಭಿಮಾನಿಗಳಿಗೆ ಸಾಕಷ್ಟು ಜೀವನ ಪಾಠಗಳನ್ನು ಹೇಳಿಕೊಟ್ಟಿದೆ. ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಕಾಣದ ಅಪರೂಪದ ದಾಖಲೆಗಳು ಸೃಷ್ಟಿ ಆಗಿವೆ.
ಜೊತೆಗೆ ನೋವು-ನಲಿವಿನಿಂದ ಕೂಡಿದ ಆಟ ಅಭಿಮಾನಿಗಳಿಗೆ ಮನರಂಜನೆ ನೀಡಿದೆ. ಇದರ ಮಧ್ಯೆ ಮುಂದಿನ ಋತುವಿನ ಐಪಿಎಲ್‌ನಿಂದ ಕ್ರಿಕೆಟ್ ಲೋಕದ ದಿಗ್ಗಜ ಆಟಗಾರರು ದೂರ ಸರಿಯಲಿದ್ದಾರೆ. ಯುವ ಪ್ರತಿಭೆಗಳ ಅದ್ಭುತ ಪ್ರದರ್ಶನದಿಂದಾಗಿ ಹಲವು ದಿಗ್ಗಜ ಆಟಗಾರಿಗೆ ಐಪಿಎಲ್ 2024ರಲ್ಲಿ ಆಡಲು ಅವಕಾಶ ಸಿಕ್ಕಿಲ್ಲ.
ಈಗಾಗಲೇ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ಗುಡ್ ಬೈ ಹೇಳಿದ್ದಾರೆ, ಇವರೊಂದಿಗೆ ಎಂಎಸ್ ಧೋನಿ ಸೇರಿದಂತೆ 10 ಸ್ಟಾರ್ ಕ್ರಿಕೆಟಿಗರು ಮುಂದಿನ ಆವೃತ್ತಿ ಐಪಿಎಲ್‌ಗೂ ಮುನ್ನ ನಿವೃತ್ತಿ ಹೊಂದುವ ಸಾಧ್ಯತೆ ಇದೆ ಎಂಬ ವರದಿ ಹರಿದಾಡುತ್ತಿವೆ.

ಎಲ್ಲರಿಗೂ ತಿಳಿದಿರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬೆಸ್ಟ್ ಫಿನಿಶರ್ ದಿನೇಶ್ ಕಾರ್ತಿಕ್ ಅವರು ಈಗಾಗಲೇ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಈ ಋತುವಿನ ಆವೃತ್ತಿಗೂ ಮುನ್ನವೇ ಇದು ತನ್ನ ಕೊನೆಯ ಐಪಿಎಲ್ ಎಂದು ಡಿಕೆ ಹೇಳಿದ್ದರು. ಐಪಿಎಲ್ 2024ರಲ್ಲಿ ಡಿಕೆ ಆಡಿದ್ದ 15 ಪಂದ್ಯಗಳಿಂದ 326 ರನ್‌ಗಳಿದ್ದು, 2 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಮುಂದಿನ ಆವೃತ್ತಿಗೂ ಮುನ್ನ ನಿವೃತ್ತಿ ಹೊಂದುವ ಹೆಸರುಗಳ ಪೈಕಿ ಮುನ್ನೆಲೆಯಲ್ಲಿರುವ ಮೊದಲ ಹೆಸರು ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಅವರದ್ದು. ಈ ಬಾರಿ ಐಪಿಎಲ್ ಕೊನೆ ಸೀಸನ್ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಎಂಎಸ್ ಧೋನಿ 220.55 ಸ್ಟ್ರೈಕ್ ರೇಟ್‌ನಲ್ಲಿ 161 ರನ್ ಗಳಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ನ ಸ್ಪಿನ್ ದಿಗ್ಗಜ ಹಾಗು ಹಿರಿಯ ಅನುಭವಿ ಆಟಗಾರ ರವಿಚಂದ್ರನ್ ಆಶ್ವಿನ್ ಕೂಡ ಐಪಿಎಲ್ ಮೆಗಾ ಟೂರ್ನಿಗೆ ವಿದಾಯ ಹೇಳಬಹುದು. ಈ ಆವೃತ್ತಿಯಲ್ಲಿ ಆಶ್ವಿನ್ ಬ್ಯಾಟಿಂಗ್‌ನಲ್ಲಿ 86 ರನ್ ಗಳಿಸಿದ್ದು, 15 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದರು.

ಐಪಿಎಲ್ 2024ರಲ್ಲಿ ಆರಂಭಿಕ ಪಂದ್ಯಗಳನ್ನು ಆಡಿದ ಗಾಯಕ್ಕೆ ತುತ್ತಾದ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್‌ಗೆ ಪರ ಹೆಚ್ಚು ಆಡುವ ಅವಕಾಶ ಸಿಗಲಿಲ್ಲ. ಈ ಸೀಸನ್‌ನಲ್ಲಿ ಅವರು 5 ಪಂದ್ಯಗಳನ್ನು ಆಡಿದ್ದು, 30.40 ರ ಸರಾಸರಿಯಲ್ಲಿ 152 ರನ್‌ಗಳನ್ನು ಹೊಡೆದಿದ್ದರು. ಹೀಗಾಗಿ ಈ ಆವೃತ್ತಿ ಧವನ್ ಅವರ ಕೊನೆಯ ಐಪಿಎಲ್ ಆಗಿರಬಹುದು ಎಂದು ಮೂಲಗಳು ತಿಳಿಸಿವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಕೂಡ ಈ ವರ್ಷ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಐಪಿಎಲ್‌ನಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ ಎಂಬ ಊಹಾಪೋಹಗಳಿವೆ. ಐಪಿಎಲ್‌ನಲ್ಲಿ ಅತಿಹೆಚ್ಚು ಅರ್ಧಶತಕ ಗಳಿಸಿರುವ ದಾಖಲೆಯನ್ನು ವಾರ್ನರ್ ಹೊಂದಿದ್ದಾರೆ.

ಅನುಭವಿ ಬೌಲರ್ ಮೋಹಿತ್ ಶರ್ಮಾ ಕೂಡ ಮುಂದಿನ ಸೀಸನ್‌ನಲ್ಲಿ ಐಪಿಎಲ್‌ಗೆ ವಿದಾಯ ಹೇಳಬಹುದು. ಮೋಹಿತ್ ಈ ವರ್ಷ 12 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 13 ವಿಕೆಟ್ ಪಡೆದು ಮಿಂಚಿದ್ದಾರೆ. ಆದರೆ ಗುಜರಾತ್ ಟೈಟನ್ಸ್ ಪ್ಲೇ ಆಫ್‌ಗೆ ಬರಲು ಸಾಧ್ಯವಾಗಲಿಲ್ಲ.

ಮುಂಬೈ ಇಂಡಿಯನ್ಸ್ ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಈ ಸೀಸನ್‌ನಲ್ಲಿ 11 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ಮುಂದಿನ ಸೀಸನ್‌ನಗೆ ಮೊದಲು ಪಿಯೂಷ್ ನಿವೃತ್ತಿ ಪಡೆಯಬಹುದು ಎನ್ನಲಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಅವರಿಗೆ ಐಪಿಎಲ್ 2024 ರಲ್ಲಿ ಕೇವಲ 1 ಪಂದ್ಯವನ್ನು ಆಡುವ ಅವಕಾಶ ಸಿಕ್ಕಿತ್ತು. ಎರಡು ಓವರ್‌ಗಳಲ್ಲಿ 20 ರನ್‌ಗಳಿಗೆ 1 ವಿಕೆಟ್ ಪಡೆದಿದ್ದಾರೆ. ಅಮಿತ್ ಮಿಶ್ರಾ ಮುಂದಿನ ಋತುವಿನ ಮೊದಲು ನಿವೃತ್ತಿ ಘೋಷಣೆ ಮಾಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications