Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರಾಂಚೈಸಿ ಕ್ರಿಕೆಟ್ ಆಡಲು ಕೇಂದ್ರ ಒಪ್ಪಂದಗಳಿಂದ ಹೊರಗುಳಿದ ಸ್ಟಾರ್ ಕ್ರಿಕೆಟಿಗರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯಶಸ್ಸಿನ ನಂತರ, ಅನೇಕ ದೇಶಗಳು ತಮ್ಮದೇ ಆದ ಲೀಗ್‌ಗಳನ್ನು ಪ್ರಾರಂಭಿಸಿದ್ದು, ಹಣದ ಹೊಳೆಯನ್ನು ಹರಿಸುತ್ತಿವೆ. ಆನೇಕ ಕ್ರಿಕೆಟಿಗರು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡುವುದಕ್ಕಿಂತ ವಿವಿಧ ಲೀಗ್‌ಗಳಲ್ಲಿ ಆಡುವ ಮೂಲಕ ಹೆಚ್ಚಿನ ಹಣವನ್ನು ಗಳಿಸುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಅನೇಕ ಕ್ರಿಕೆಟಿಗರು ಕೇಂದ್ರ ಒಪ್ಪಂದಗಳನ್ನು ನಿರಾಕರಿಸಿದ್ದು, ಕೇವಲ ಫ್ರಾಂಚೈಸಿ ಕ್ರಿಕೆಟ್‌ ಲೀಗ್‌ಗಳನ್ನು ಆಡಲು ನಿರ್ಧಾರಿಸಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಕೇಂದ್ರ ಒಪ್ಪಂದಗಳನ್ನು ನಿರಾಕರಿಸಿದ ಆಟಗಾರರು ಬಗ್ಗೆ ಮಾಹಿತಿ ಇಲ್ಲಿದೆ.

Star cricketers left out of central contracts Full details

ಮೊಹಮ್ಮದ್ ಹಫೀಜ್

ಪಾಕಿಸ್ತಾನದ ಅನುಭವಿ ಬ್ಯಾಟರ್ ಮೊಹಮ್ಮದ್ ಹಫೀಜ್ ಅವರು ಫ್ರಾಂಚೈಸಿ ಲೀಗ್ ಕ್ರಿಕೆಟ್‌ನಲ್ಲಿ ಆಡಲು 2020-2021ರಲ್ಲಿ ಸಿ ವರ್ಗದಲ್ಲಿ ಒಪ್ಪಂದದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಅವರಿಗೆ ನೀಡಿದ ಕಡಿಮೆ ದರ್ಜೆಯ ಒಪ್ಪಂದದ ಬಗ್ಗೆ ಅತೃಪ್ತಿಗೊಂಡಿದ್ದರು ಎಂದು ವರದಿಗಳು ಹೇಳುತ್ತವೆ. ಹೀಗಾಗಿ ಕೇಂದ್ರ ಒಪ್ಪಂದದಿಂದ ಹೊರ ಬಂದ ಹಫೀಜ್ ಪ್ರಪಂಚದಾದ್ಯಂತದ ಟಿ 20 ಲೀಗ್‌ಗಳಲ್ಲಿ ಆಡುತ್ತಿದ್ದಾರೆ.

ಟ್ರೆಂಟ್ ಬೌಲ್ಟ್

ನ್ಯೂಜಿಲೆಂಡ್‌ನ ಸ್ಟಾರ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ 2022 ರಲ್ಲಿ ಕೇಂದ್ರೀಯ ಒಪ್ಪಂದಗಳಿಂದ ಹೊರಗುಳಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್‌, ಅವರು ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಮತ್ತು ಲೀಗ್ ಕ್ರಿಕೆಟ್‌ಗೆ ಆಡಲು ಬಯಸಿದ್ದರಿಂದ ಬೌಲ್ಟ್‌ ಮನವಿಗೆ ಸ್ಪಂದಿಸಿತ್ತು.

ಕೇನ್ ವಿಲಿಯಮ್ಸನ್ ಮತ್ತು ಲಾಕಿ ಫರ್ಗುಸನ್ ಮೊದಲು ತಮ್ಮ ಹೆಸರನ್ನು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡಲು ಕೇಂದ್ರ ಒಪ್ಪಂದಗಳಿಂದ ಹಿಂತೆಗೆದುಕೊಂಡಿದ್ದಾರೆ. ಆಡಮ್ ಮಿಲ್ನೆ, ಡೆವೊನ್ ಕಾನ್ವೇ ಮತ್ತು ಫಿನ್ ಅಲೆನ್ ಸಹ ಇದೇ ಮಾರ್ಗವನ್ನು ಅನುಸರಿಸಿದ್ದಾರೆ.

ಜೇಸನ್ ರಾಯ್

ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (ಎಂಎಲ್‌ಸಿ) ಲಾಭ ಪಡೆಯಲು 2023ರಲ್ಲಿ ಭಾಗವಹಿಸುವ ಮೊದಲು ರಾಯ್ ತನ್ನ ಒಪ್ಪಂದವನ್ನು ತಿರಸ್ಕರಿಸಿದ್ದರು. ಇದಾದ ಬಳಿಕ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅವರ ನಿರ್ಧಾರಕ್ಕೆ ಸಮ್ಮತಿಸಿದ್ದು, ಅಂತರರಾಷ್ಟ್ರೀಯ ತಂಡದಲ್ಲಿ ಅವರ ಆಯ್ಕೆಯು ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿತ್ತು.

ವೆಸ್ಟ್‌ ಇಂಡೀಸ್‌ ಸ್ಟಾರ್ ಆಟಗಾರರು ಕೂಡ ತಮ್ಮ ಕೇಂದ್ರ ಒಪ್ಪಂದದಿಂದ ದೂರ ಉಳಿದಿದ್ದಾರೆ. 2023ರಲ್ಲಿ ಕೇಂದ್ರ ಒಪ್ಪಂದವನ್ನು ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್ ಮತ್ತು ನಿಕೋಲಸ್ ಪೂರನ್ ನಿರಾಕರಿಸಿದ್ದಾರೆ. ಇದಲ್ಲದೆ, 2023ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಕೂಡ ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ಅವರು ಕೇಂದ್ರೀಯ ಒಪ್ಪಂದದಿಂದ ಹೊರಗುಳಿದಿರುವ ಬಗ್ಗೆ ಮಾಹಿತಿ ನೀಡಿತ್ತು.

Story first published: Friday, September 6, 2024, 14:14 [IST]
Other articles published on Sep 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+