CT 2025: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಗಾಯಗೊಂಡ ಅನುಭವಿ ಬೌಲರ್‌ಗಳು
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಹೆಚ್ಚು ದಿನಗಳು ಉಳಿದಿಲ್ಲ. ಈ ಮೆಗಾ ಟೂರ್ನಿ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿದ್ದು, ಫೆಬ್ರವರಿ 19 ರಿಂದ ಆರಂಭವಾಗಲಿದೆ, ಈ ಬಾರಿಯ ಚಾಂಪಿಯಯನ್ಸ್ ಟ್ರೋಫಿಯಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ,, ಅಘ್ಫಾನಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಸೇರಿವೆ. ಈ ಎಲ್ಲಾ ತಂಡಗಳು ಟೂರ್ನಿಗೆ ತಮ್ಮ ತಂಡಗಳನ್ನು ಘೋಷಿಸಿವೆ. ತಂಡಗಳ ಬದಲಾವಣೆಗಳಿಗೆ ಕೊನೆಯ ದಿನಾಂಕವನ್ನು ಫೆಬ್ರವರಿ 12 ಎಂದು ಐಸಿಸಿ ಗಡುವು ನೀಡಿದೆ.
ಚಾಂಪಿಯನ್ಸ್ ಟ್ರೋಫಿಯ ಹಲವು ತಂಡಗಳು ತಮ್ಮ ಕೆಲವು ಪ್ರಮುಖ ಆಟಗಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ. ಈ ಸ್ಟಾರ್ ಆಟಗಾರರು ಗಾಯಗೊಂಡಿರುವುದರಿಂದ ತಂಡಗಳಿಗೆ ಆತಂಕ ಎದುರಾಗಿದೆ. ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಈ ಬೌಲರ್‌ಗಳು ಹೊರಗುಳಿಬಹುದು.

ಜೋಶ್ ಹ್ಯಾಜಲ್‌ವುಡ್
ಭಾರತ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಸ್ಟಾರ್ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅಂದಿನಿಂದ ಅವರು ಆಸ್ಟ್ರೇಲಿಯಾ ಪರ ಕಣಕ್ಕಿಳಿದಿಲ್ಲ. ಗಾಯದ ಕಾರಣದಿಂದಾಗಿ ಅವರು ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾದ ಹೆಡ್‌ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು ಹ್ಯಾಜಲ್‌ವುಡ್ ಗಾಯದ ಬಗ್ಗೆ ಅಪ್ಡೇಟ್ ನೀಡಿದ್ದರು. ಹ್ಯಾಜಲ್‌ವುಡ್ ಅವರು ಸೊಂಟ್ ಗಾಯದಿಂದ ಬಳಲುತ್ತಿದ್ದಾರೆ. ಅವರು ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಹ್ಯಾಜಲ್‌ವುಡ್ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಿದ್ದರು.
ಪ್ಯಾಟ್ ಕಮ್ಮಿನ್ಸ್
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಗಾಯಗೊಂಡ ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ. ಕಮ್ಮಿನ್ಸ್ ಪಾದದ ನೋವಿನಿಂದ ಬಳಲತ್ತಿದ್ದಾರೆ. ಹೀಗಾಗು ಪ್ಯಾಟ್ ಚಾಂಪಿಯನ್ಸ್ ಟ್ರೋಫಿ ಆಡುವುದು ಬಹುತೇಕ ಅನುಮಾನವಾಗಿದೆ. ಕಮ್ಮಿನ್ಸ್ ಬಗ್ಗೆ ಕೂಡ ಆಂಡ್ರ್ಯೂ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮಾತನಾಡಿದ್ದಾರೆ. ಕಮ್ಮಿನ್ಸ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಸಾಧ್ಯತೆಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ಯಾಟ್ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜಸ್ಪ್ರೀತ್ ಬುಮ್ರಾ
ಭಾರತ ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ 2025ರ ಚಾಮಪಿಯನ್ಸ್ ಟ್ರೋಫಿಯಿಂದ ಹೊರಗುಳಿಯುವ ಅಂಚಿನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ವೇಳೆ ಬುಮ್ರ ಬೆನ್ನು ನೋವಿನ ಗಾಯಕ್ಕೆ ಒಳಗಾಗಿದ್ದರು. ಇನ್ನೂ ಗಾಯದಿಂದ ಅವರು ಚೇತರಿಸಿಕೊಂಡಿಲ್ಲ. ಅವರ ಫಿಟ್ನೆಸ್ ಬಗ್ಗೆ ಕೆಲವು ದಿನಗಳಲ್ಲಿ ಅಧಿಕೃತ ಮಾಹಿತಿ ಸಿಗಲಿದೆ. ಇದಾದ ನಂತರ ಬುಮ್ರಾ ಆಡುತ್ತಾರೋ? ಅಥವಾ ಇಲ್ಲವೋ? ಎಂಬುದು ನಿರ್ಧಾರವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications