Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಗೆ ಹೊಸ ತಂಡ ಆಯ್ಕೆ ರೇಸ್ ನಲ್ಲಿ ಯಾರಿದ್ದಾರೆ?

ನವದೆಹಲಿ, ಡಿ. 07: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಹೊಸ ತಂಡಗಳ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿದ್ದು, ಹೊಸ ತಂಡಗಳು ಡಿಸೆಂಬರ್ 08ರಂದು ಹೊರಬೀಳಲಿದೆ. ಹರಾಜು ಪ್ರಕ್ರಿಯೆಯಲ್ಲಿ ಸದ್ಯಕ್ಕೆ ಸ್ಟಾರ್ ಇಂಡಿಯಾ ಹಾಗೂ ಚೆಟ್ಟಿನಾಡ್ ಸಿಮೆಂಟ್ ಸಂಸ್ಥೆಗಳು ಮಾತ್ರ ಆಸಕ್ತಿವಹಿಸಿವೆ.

ಐಪಿಎಲ್ ಆಡಳಿತ ಮಂಡಳಿ ಸಭೆ ಮಂಗಳವಾರ (ಡಿ.8) ನಡೆಯಲಿದ್ದು, ಈ ಸಭೆಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಆಡಲಿರುವ ಎರಡು ಹೊಸ ತಂಡಗಳನ್ನು ಘೋಷಿಸಲಾಗುತ್ತದೆ ಎಂದು ಬಿಸಿಸಿಐ ಪ್ರಕಟಿಸಿದೆ.

Star India, Chettinad Cement in race to buy IPL teams


ಸ್ಟಾರ್ ಇಂಡಿಯಾ, ಚೆನ್ನೈ ಮೂಲದ ಚೆಟ್ಟಿನಾಡ್ ಸಿಮೆಂಟ್ ಅಲ್ಲದೆ, ಕರ್ನಾಟಕ ಮೂಲದ ಸೈಕಲ್ ಬ್ರಾಂಡ್ ಅಗರಬತ್ತಿ ಕೂಡಾ ತಂಡಗಳನ್ನು ಕೊಳ್ಳಲು ಆಸಕ್ತಿ ವಹಿಸಿವೆ. ಸರಿ ಸುಮಾರು 21ಕ್ಕೂ ಅಧಿಕ ಕಾರ್ಪೊರೇಟ್ಸ್, ಉದ್ಯಮಿಗಳು ಬಿಡ್ಡಿಂಗ್ ದಾಖಲೆ ಪಡೆದುಕೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಐಪಿಎಲ್ ಚೇರ್‌ಮನ್ ರಾಜೀವ್ ಶುಕ್ಲಾ ಹಾಗೂ 2016 ಹಾಗೂ 2017ರ ಆವೃತ್ತಿಯ ಎರಡು ಹೊಸ ತಂಡಗಳಿಗೆ ಬಿಡ್ ಮಾಡಿರುವ ಸಂಸ್ಥೆಯ ಪ್ರತಿನಿಧಿಗಳು ಭಗವಹಿಸಲಿದ್ದಾರೆ.

ಐಪಿಎಲ್ ಪಂದ್ಯಕ್ಕೆ ಸ್ಟಾರ್ ಸ್ಫೋರ್ಟ್ಸ್ ಅಧಿಕೃತ ಪ್ರಸಾರ ವಾಹಿನಿಯಾಗಿದೆ. ಭಾರತದಲ್ಲಿ ಹಾಗೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಐಸಿಸಿ ಟೂರ್ನಿಗಳ ಪ್ರಸಾರದ ಹಕ್ಕು ಸ್ಟಾರ್ ನೆಟ್ವರ್ಕ್ ಪಾಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+