ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್‌ಗೆ ಭರದ ಸಿದ್ಧತೆ ನಡೆಸಿವೆ. ಎಲ್ಲ ತಂಡಗಳು ಈಗಾಗಲೇ ಟ್ರೆನಿಂಗ್ ಕ್ಯಾಂಪ್ ಆರಂಭಿಸಿವೆ. ರಾಷ್ಟ್ರೀಯ ಹಾಗೂ ದೇಶೀಯ ತಂಡಗಳಲ್ಲಿ ಆಡದ ಆಟಗಾರರು ಶಿಭಿರದಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದಂತೆ ಸ್ಟಾರ್ ಆಟಗಾರರು ಸಹ ಮೈದಾನದಲ್ಲಿ ಕಸರತ್ತು ನಡೆಸಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಶಿಖರ್ ಧವನ್ ಅಭ್ಯಾಸ ಆರಂಭಿಸಿದ್ದಾರೆ. ಧೋನಿ ತನ್ನ ಐಪಿಎಲ್ ಟ್ರೋಫಿ ಗೆಲುವಿನ ಸಂಖ್ಯೆಯನ್ನು ಏರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೆ, ಉಳಿದ ತಂಡಗಳು ಸಹ ಈ ಪ್ರಕ್ರಿಯೆಯಲ್ಲಿಯೇ ತೊಡಗಿವೆ. ಆರ್‌ಸಿಬಿ ಮಾತ್ರ ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿದೆ. ಈ ಬಗ್ಗೆ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ದೊಡ್ಡ ಹೇಳಿಕೆ ನೀಡಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ತಮಗು ಇರುವು ಬಾಂಧವ್ಯವನ್ನು ತೋರಿಸಿದರು. ಮತ್ತು ಈ ಟಿ 20 ಪಂದ್ಯಾವಳಿಯಲ್ಲಿ ಅವರ ಯಶಸ್ಸನ್ನು ತಮ್ಮ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನೀಡಿದ್ದಾರೆ.
ಸುದೀರ್ಘ ಕಾಲ ಆರ್‌ಸಿಬಿ ನಾಯಕರಾಗಿದ್ದ ವಿರಾಟ್ ಮೊದಲ ಸೀಸನ್‌ನಿಂದ ಈ ಫ್ರಾಂಚೈಸಿಯೊಂದಿಗೆ ಆಡುತ್ತಿದ್ದಾರೆ. ಆದರೆ, ಈಗ ಅವರು ತಂಡದ ನಾಯಕತ್ವವನ್ನು ತೊರೆದಿದ್ದಾರೆ. ವಿರಾಟ್ ಕೊಹ್ಲಿ ಇತ್ತೀಚೆಗೆ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕಾರಣಕ್ಕಾಗಿ ಅವರು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿರಲಿಲ್ಲ. ಅವರು ಐಪಿಎಲ್ 2024 ರಿಂದ ಆಕ್ಷನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾಜಿ ಆರ್‌ಸಿಬಿ ನಾಯಕ ಸ್ಟಾರ್ ಸ್ಪೋರ್ಟ್ಸ್‌ಗೆ ಸಂದರ್ಶನವನ್ನು ನೀಡಿದ್ದಾರೆ. "ನನಗೆ ಐಪಿಎಲ್ ಮೇಲೆ ತುಂಬ ಪ್ರೀತಿ ಇದೆ. ಇದರಲ್ಲಿ ನೀವು ಅನೇಕ ಹೊಸ ಆಟಗಾರರೊಂದಿಗೆ ಆಡುತ್ತೀರಿ. ನೀವು ದೀರ್ಘಕಾಲದಿಂದ ತಿಳಿದಿರುವ ಮತ್ತು ನಿಮ್ಮ ದೇಶದಲ್ಲದ ಅನೇಕ ಆಟಗಾರರೊಂದಿಗೆ ಆಡುತ್ತೀರಿ. ಈ ಆಟಗಾರರನ್ನು ನೀವು ಆಗಾಗ ಭೇಟಿಯಾಗುವುದಿಲ್ಲ.ಆದುದರಿಂದಲೇ ಎಲ್ಲರೂ ಐಪಿಎಲ್ ಅನ್ನು ಇಷ್ಟಪಡುತ್ತಾರೆ. ಏಕೆಂದರೆ ಆಟಗಾರರು ಮತ್ತು ಅಭಿಮಾನಿಗಳ ನಡುವೆ ಸಂಪರ್ಕ ಬೆಳೆಸುವ ಕೊಂಡಿಯಾಗಿದೆ.
ಐಸಿಸಿ ಟೂರ್ನಮೆಂಟ್‌ಗಳಿಗಿಂತ ಐಪಿಎಲ್ ಭಿನ್ನವಾಗಿರುವುದರ ಬಗ್ಗೆ ಕೊಹ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರತಿ ಪಂದ್ಯದ ನಂತರ ಎದುರಾಳಿ ಆಟಗಾರರೊಂದಿಗೆ ಸಂವಹನ ನಡೆಸುವುದು ಐಪಿಎಲ್ ಅನ್ನು ಐಸಿಸಿ ಪಂದ್ಯಾವಳಿಗಳಿಗಿಂತ ಭಿನ್ನಗೊಳಿಸುತ್ತದೆ ಎಂದು ವಿರಾಟ್ ಹೇಳಿದರು.
ICC ಪಂದ್ಯಾವಳಿಗಳು ಕಾಲಕಾಲಕ್ಕೆ ಬರುತ್ತವೆ. ಆದರೆ ICC ಪಂದ್ಯಾವಳಿಗಳಲ್ಲಿ ನೀವು ಇತರ ಆಟಗಾರರೊಂದಿಗೆ ಸಂವಹನ ನಡೆಸುವುದಿಲ್ಲ. ಅಥವಾ ಇತರ ತಂಡದ ಆಟವನ್ನು ವೀಕ್ಷಿಸುವುದಿಲ್ಲ. ಆದರೆ ಐಪಿಎಲ್‌ನಲ್ಲಿ, ನೀವು ಬಹುಶಃ ಪ್ರತಿ ಎರಡನೇ ಅಥವಾ ಮೂರನೇ ದಿನಕ್ಕೆ ಪ್ರತಿ ತಂಡವನ್ನು ಭೇಟಿ ಮಾಡುತ್ತೀರಿ. ಮತ್ತು ಅದು ಐಪಿಎಲ್‌ನ ಜನಪ್ರೀಯತೆನ್ನು ಹೆಚ್ಚಿಸಿದೆ. ನೀವು ಬೇರೆ ಬೇರೆ ನಗರದಲ್ಲಿ, ಬೇರೆ ತಂಡದೊಂದಿಗೆ, ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುತ್ತಿದ್ದೀರಿ. ಪಂದ್ಯಾವಳಿಯ ವಿವಿಧ ಹಂತಗಳಲ್ಲಿ ಪ್ರತಿಯೊಬ್ಬರೂ ವಿಭಿನ್ನ ಗುರಿಗಳನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.
ಐಪಿಎಲ್ 2024 ಮಾರ್ಚ್ 22 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಪಂದ್ಯಾವಳಿಯ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದೀಗ ಮೊದಲ ಹಂತದ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿದೆ. ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದ ದಿನಾಂಕದ ನಂತರವೇ ಟೂರ್ನಿಯ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.