Unsold Players: ಮೊದಲ ದಿನ ಅನ್ ಸೋಲ್ಡ್ ಆದ ಆಟಗಾರರ ಪಟ್ಟಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸ್ಟಾರ್ ಆಟಗಾರರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಮಣೆ ಹಾಕಿಲ್ಲ. ಇವರ ತಮ್ಮ ಮೂಲ ಬೆಲೆ ಎಷ್ಟು ಹಣವನ್ನು ಪಡೆಯುವಲ್ಲಿ ವಿಫಲರಾಗಿದ್ದು, ಭಾನುವಾರದಿಂದ ಸೌದಿಯಲ್ಲಿ ನಡೆದ ಹರಾಜಿನಲ್ಲಿ ಅನ್ ಸೋಲ್ಡ್ ಆದರು. ಈ ಸ್ಟಾರ್ ಆಟಗಾರರ ಹೆಸರುಗಳು ಕ್ರಿಕೆಟ್ ಮೈದಾನದಲ್ಲಿ ತನ್ನದೇ ಆದ ಗುರುತು ಹೊಂದಿದೆ. ಆದರೆ ಮೊದಲ ದಿನ ಮಾಲೀಕರು ಇವರನ್ನು ಕೊಳ್ಳಲು ವಿಫಲರಾಗಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೈ ಬಿಟ್ಟಿತ್ತು. ಆದರೆ ಇವರನ್ನು ಕೊಳ್ಳಲು ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡವು ಮೊದಲ ದಿನ ಮನಸ್ಸು ಮಾಡಲಿಲ್ಲ. ಹೀಗಾಗಿ ಇವರು ಅನ್ ಸೋಲ್ಡ್ ಆದರು.

ಕನ್ನಡಿಗ ಅನ್‌ಸೋಲ್ಡ್
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಸಹ, ತಂಡ ಹುಡುಕಿಕೊಳ್ಳುವಲ್ಲಿ ವಿಫಲರಾದರು. ಇವರು ಕಳೆದ ಆವೃತ್ತಿಯಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರಿಂದ ಇವರನ್ನು ಎಲ್‌ಎಸ್‌ಜಿ ತಂಡ ಕೈ ಬಿಟ್ಟಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿರುವ ಇಂಗ್ಲೆಂಡ್ ತಂಡದ ಜಾನಿ ಬೇರ್ ಸ್ಟೋ ಸಹ ಮಾಲೀಕರನ್ನು ಹುಡುಕಿಕೊಳ್ಳುವಲ್ಲಿ ವಿಫಲರಾದರು. ಇವರ ಮೂಲ ಬೆಲೆ 2 ಕೋಟಿ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications