Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಮ್ಮ ಕೆಪಿಎಲ್ ಪಂದ್ಯಗಳು ಸ್ಟಾರ್ ನೆಟ್ವರ್ಕ್ ನಲ್ಲಿ ಪ್ರಸಾರ

ಬೆಂಗಳೂರು, ಆಗಸ್ಟ್ 25:ನಮ್ಮ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2017ರ ಪಂದ್ಯಾವಳಿಗಳು ಈ ಬಾರಿ ಸ್ಟಾರ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರವಾಗಲಿದೆ.

ಕೆಪಿಎಲ್ 6ː ಹರಾಜಿನ ನಂತರ ಯಾರು ಯಾವ ತಂಡದಲ್ಲಿದ್ದಾರೆ?

ಈ ಕುರಿತಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ ಎಸ್ ಸಿಎ) ಹಾಗೂ ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸೆಪ್ಟೆಂಬರ್ 1 ರಿಂದ 23 ರ ತನಕ ಕೆಪಿಎಲ್ ಪಂದ್ಯಗಳು ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆಯಲಿವೆ. ಈ ಪಂದ್ಯಗಳನ್ನು ಸ್ಟಾರ್ ಸ್ಫೋರ್ಟ್ಸ್ 1, ಸ್ಟಾರ್ ಸ್ಫೋರ್ಟ್ಸ್ ಎಚ್ ಡಿ ಹಾಗೂ ಹಾಟ್ ಸ್ಟಾರ್ ನಲ್ಲಿ ನೋಡಬಹುದು.

Star Sports to telecast Karnataka Premier League

ಕಳೆದ ವರ್ಷದವರೆಗೆ ಕೆಪಿಎಲ್ ನಲ್ಲಿ ಆಡಿದ್ದ ಉದ್ಯಮಿ ಅಶೋಕ್ ಖೇಣಿ ಒಡೆತನದ ರಾಕ್ ಸ್ಟಾರ್ ತಂಡವು ಈ ಬಾರಿಯ ಕೆಪಿಎಲ್ ನಿಂದ ಹೊರಗುಳಿಯಲಿದೆ. ಈ ಬಾರಿ ಕೆಪಿಎಲ್ ಗೆ ಹೊಸ ತಂಡ 'ಕಲ್ಯಾಣಿ ಬ್ಲಾಸ್ಟರ್ಸ್ ಬೆಂಗಳೂರು' ಹೆಸರಿನ ಹೊಸ ಫ್ರಾಂಚೈಸಿಯು ಕಾಲಿಡಲಿದೆ.

ಕಾಮೆಂಟ್ರಿ ತಂಡ: ಅಂತಾರಾಷ್ಟ್ರೀಯ ಮಟ್ಟದ ತಾರೆಗಳಾದ ಬ್ರೆಟ್ ಲೀ, ಮೈಕಲ್ ಹಸ್ಸಿ, ಡೇನಿಯಲ್ ವೆಟ್ಟೋರಿ ಹಾಗೂ ಡೀನ್ ಜೋನ್ಸ್ ಅವರು ವೀಕ್ಷಕ ವಿವರಣೆ ನೀಡಲಿದ್ದಾರೆ.

ಮಿಕ್ಕಂತೆ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಕರ್ನಾಟಕದ ಮಾಜಿ ಆಟಗಾರ ಫಜಲ್ ಖಲೀಲ್, ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಿಬಿ ಚಂದ್ರಶೇಖರ್ ಹಾಗೂ ಕ್ರೀಡಾ ವಿಶ್ಲೇಷಕ ಚಾರು ಶರ್ಮ ಅವರಿದ್ದಾರೆ.

ಕಾರ್ಯಕ್ರಮದ ನಿರೂಪಣೆಯಲ್ಲಿ ಮಾಯಾಂತಿ ಲ್ಯಾಂಗರ್ ಹಾಗೂ ಸಂಜನಾ ಗಣೇಶನ್ ನಡೆಸಿಕೊಡಲಿದ್ದಾರೆ ಎಂದು ಕೆಪಿಎಲ್ ನಿರ್ವಹಣಾ ಸಮಿತಿಯ ವಿನಯ್ ಮೃತ್ಯುಂಜಯ ಅವರು ತಿಳಿಸಿದರು.

Story first published: Wednesday, January 3, 2018, 10:05 [IST]
Other articles published on Jan 3, 2018
Read in English: Star Sports to telecast KPL
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+