ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಎ ತಂಡದಲ್ಲಿದ್ದಾರೆ ಸ್ಟಾರ್ ಆಟಗಾರರು

ಮೆಲ್ಬರ್ನ್, ಮೇ 30: ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಎ ತಂಡವನ್ನು ಆಲ್ ರೌಂಡರ್ ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ. ಪ್ರವಾಸ ಪಂದ್ಯಕ್ಕಾಗಿ ಹೆಸರಿಸಲಾಗಿರುವ ಆಸ್ಟ್ರೇಲಿಯಾ ತಂಡದಲ್ಲಿ ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದು, ಬುಧವಾರ ಮಾರ್ಷ್ ಅವರನ್ನು ತಂಡದ ನಾಯಕನಾಗಿ ಹೆಸರಿಸಲಾಯಿತು.
ಭಾರತಕ್ಕೆ ಬರಲಿರುವ ಆಸ್ಟ್ರೇಲಿಯಾ ಒಟ್ಟು ನಾಲ್ಕು ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಆಸ್ಟ್ರೇಲಿಯಾದ ಏಕದಿನ ತಂಡ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಭಾರತ ಎ ತಂಡ ಮತ್ತು ದಕ್ಷಿಣ ಆಫ್ರಿಕಾ ಎ ತಂಡದೊಂದಿಗೆ ವಿಜಯವಾಡದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಪರ್ಧಿಸಲಿದೆ. ಈ ಪ್ರವಾಸ ಸರಣಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ.
ಭಾರತದ ಪ್ರವಾಸ ಸರಣಿ ನಿಮಿತ್ತ ನೂತನ ಆಸ್ಟ್ರೇಲಿಯಾ ತಂಡದಲ್ಲಿ ಅಂತಾರಾಷ್ಟ್ರೀಯ ಅನುಭವಿ ಆಟಗಾರರಾದ ಅಲೆಕ್ಸ್ ಕ್ಯಾರಿ, ಆಷ್ಟನ್ ಅಗರ್, ಟ್ರಾವಿಸ್ ಹೆಡ್, ಜಾನ್ ಹಾಲೆಂಡ್, ಉಸ್ಮಾನ್ ಖವಾಜ, ಜೋಯಲ್ ಪ್ಯಾರೀಸ್, ಮ್ಯಾಥ್ಯೂ ರೆನ್ಶಾ ಮತ್ತು ಕ್ರಿಸ್ ಟ್ರೆಮೇನ್ ಸೇರಿದಂತೆ ಒಟ್ಟು 14 ಜನರ ತಂಡವನ್ನು ಮಾರ್ಷ್ ಮುನ್ನಡೆಸಲಿದ್ದಾರೆ.
ಆಯ್ಕೆ ಸಮಿತಿಯ ಟ್ರೆವರ್ ಹೋನ್ಸ್ ಈ ಬಗ್ಗೆ ಪ್ರತಿಕ್ರಿಯಿಸಿ, 'ಭವಿಷ್ಯದ ಆಸ್ಟ್ರೇಲಿಯಾ ತಂಡದ ನಾಯಕರಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಟ್ರಾವಿಸ್, ಮಿಚ್ ಪ್ರಭಾವಶಾಲಿ ಯುವ ಆಟಗಾರರಾಗಿದ್ದಾರೆ' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications