ಭಾರತ ವಿರುದ್ಧ ಸರಣಿಗೂ ಮುನ್ನ ಪ್ರಮುಖ ಆಟಗಾರರಿಗೆ ಕೊಕ್

ಮೆಲ್ಬೋರ್ನ್, ನವೆಂಬರ್ 08: ಸತತ ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಿಗೆ ಆಘಾತವಾಗಿದೆ. ವೇಗಿ ಮಿಚೆಲ್ ಸ್ಟಾರ್ಕ್ ಅವರು ಮುಂಬರುವ ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಿನ ಟಿ20ಐ ಸರಣಿಗೆ ಅಲಭ್ಯರಾಗಿದ್ದಾರೆ.
ಸ್ಟಾರ್ಕ್ ಬದಲಿಗೆ ಮಾರ್ಕಸ್ ಸ್ಟೋಯಿನಿಸ್ ಹಾಗೂ ಜಾಸನ್ ಬೆಹ್ರೆಡ್ರೊಫ್ ಅವರನ್ನು 13 ಸದಸ್ಯರ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.ಮಿಚೆಲ್ ಸ್ಟಾರ್ಕ್ ಅಲ್ಲದೆ, ನಾಥನ್ ಲಯಾನ್, ಪೀಟರ್ ಸಿಡ್ಲ್ ಹಾಗೂ ಮಿಚೆಲ್ ಮಾರ್ಷ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಭಾರತದ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗೆ ಸಿದ್ಧತೆ ನಡೆಸಲು ಹಾಗೂ ವಿಶ್ವಕಪ್ ಗೆ ತಯಾರಿ ನಡೆಸಲು ಸಮತೋಲನ ಕಾಯ್ದುಕೊಳ್ಳಬೇಕಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಏಕೈಕ ಟಿ20 ಹಾಗೂ ಭಾರತ ವಿರುದ್ಧದ 3 ಪಂದ್ಯಗಳ ಸರಣಿಗೆ ಸೂಕ್ತ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಕೋಚ್ ಜಸ್ಟೀನ್ ಲ್ಯಾಂಗರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ: ಅರೋನ್ ಫಿಂಚ್ (ನಾಯಕ), ಅಲೆಕ್ಸ್ ಕ್ಯಾರಿ (ಉಪ ನಾಯಕ), ಅಸ್ಟಾನ್ ಅಗರ್, ಜಾಸನ್ ಬೆಹ್ರೊರೊರ್ಫ್, ನಾಥನ್ ಕೌಲ್ಟರ್ ನೈಲ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್ ವೆಲ್, ಬೆನ್ ಮೆಕ್ ಡರ್ಮಟ್, ಡಾರ್ಸಿ ಶಾರ್ಟ್, ಬಿಲ್ಲಿ ಸ್ಟಾನ್ಲೇಕ್, ಮಾರ್ಕಸ್ ಸ್ಟೋಯಿನಿಸ್, ಆಂಡ್ರ್ಯೂ ಟೈ, ಆಡಂ ಝಂಪಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications