Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashes Test: ಪರ್ತ್‌ನಲ್ಲಿ ಮೊದಲ ದಿನವೇ 19 ವಿಕೆಟ್‌ ಪತನ: ಸ್ಟೋಕ್ಸ್‌ ಅಬ್ಬರ

ಆಶಸ್‌ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನ ಬೌಲರ್‌ಗಳ ಆರ್ಭಟ ಜೋರಾಗಿದೆ. ಆಸ್ಟ್ರೇಲಿಯಾದ ಪರ ಮಿಚೆಲ್‌ ಸ್ಟಾರ್ಕ್‌ 7 ವಿಕೆಟ್‌ ಪಡೆದು ಮಿಂಚಿದರೆ, ಇಂಗ್ಲೆಂಡ್ ಪರ ನಾಯಕ ಬೆನ್‌ ಸ್ಟೋಕ್ಸ್‌ ಬಿಗುವಿನ ದಾಳಿ ನಡೆಸಿ ಮಿಂಚಿದರು.

5 ಟೆಸ್ಟ್‌ ಪಂದ್ಯಗಳ ಮೊದಲ ಪಂದ್ಯದಲ್ಲಿ ಟಾಸ್‌ ಇಂಗ್ಲೆಂಡ್ ತಂಡದ ಪಾಲಾಯಿತು. ಪ್ರವಾಸಿ ತಂಡ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ಆರಂಭಿಕ ಆಟಗಾರ ಜ್ಯಾಕ್‌ ಕ್ರಾಲಿ, ಅನುಭವಿ ಜೋ ರೂಟ್‌ ಸೊನ್ನೆ ಸುತ್ತಿದರು. ತಂಡದ ಮೊತ್ತ 33 ಆಗಿದ್ದಾಗ ಬೆನ್‌ ಡಕೆಟ್‌ 21 ರನ್‌ ಬಾರಿಸಿ ಔಟ್ ಆದರು. ಪರಿಣಾಮ ಇಂಗ್ಲೆಂಡ್‌ 39 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟರ್‌ ಓಲಿ ಪೋಪ್ ಹಾಗೂ ಹ್ಯಾರಿ ಬ್ರೂಕ್‌ ಜೋಡಿ 4ನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು.

Starc s 7 58 trumps Stokes tight spell as bowlers dominate thrilling Ashes opener

ಪೋಪ್‌ ಹಾಗೂ ಬ್ರೂಕ್‌ ಜೋಡಿ 68 ಎಸೆತಗಳಲ್ಲಿ 55 ರನ್‌ ಸೇರಿಸಿತು. ಈ ವೇಳೆ ಓಲಿ ಪೋಪ್‌ 4 ಬೌಂಡರಿ ನೆರವಿನಿಂದ 46 ರನ್‌ ಬಾರಿಸಿ ಔಟ್ ಆದರು. ಬೆನ್‌ ಸ್ಟೋಕ್ಸ್‌ 6 ರನ್‌ ಬಾರಿಸಿ ಪೆವಿಲಿಯನ್ ಸೇರಿದರು. 6ನೇ ವಿಕೆಟ್‌ಗೆ ಹ್ಯಾರಿ ಬ್ರೂಕ್‌ ಹಾಗೂ ಜೇಮಿ ಸ್ಮಿತ್ (33) ಜೋಡಿ 31 ಎಸೆತಗಳಲ್ಲಿ 45 ರನ್‌ ಸಿಡಿಸಿತು. ಹ್ಯಾರಿ ಬ್ರೂಕ್‌ 5 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 52 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಕೆಳ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟರ್‌ ಸ್ಥಿರ ಬ್ಯಾಟಿಂಗ್ ನಡೆಸಲಿಲ್ಲ. ಅಂತಿಮವಾಗಿ ಇಂಗ್ಲೆಂಡ್‌ 32.5 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್‌ ಆಯಿತು.

ಸ್ಟಾರ್ಕ್‌ ಇತಿಹಾಸ

ಮಿಚೆಲ್‌ ಸ್ಟಾರ್ಕ್ ಆರ್ಭಟ ನಡೆಸಿದರು. ಇವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಏಳು ವಿಕೆಟ್‌ ಪಡೆದು ಬೀಗಿದರು. ಅಲ್ಲದೆ ಆಶಸ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ನೂರುಕ್ಕೂ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದರು. ಮಿಚೆಲ್ ಸ್ಟಾರ್ಕ್ ಕೇವಲ 58 ರನ್‌ಗಳಿಗೆ ಇಂಗ್ಲೆಂಡ್‌ನ ಏಳು ವಿಕೆಟ್‌ಗಳನ್ನು ಕಬಳಿಸಿದರು. ಆಶಸ್‌ನಲ್ಲಿ 100 ವಿಕೆಟ್‌ಗಳನ್ನು ಪಡೆದ ಮೊದಲ ಎಡಗೈ ವೇಗದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆಶಸ್‌ನಲ್ಲಿ 23 ಟೆಸ್ಟ್‌ಗಳಲ್ಲಿ ಆಡಿರುವ ಸ್ಟಾರ್ಕ್, 26.72 ಸರಾಸರಿಯಲ್ಲಿ 100 ವಿಕೆಟ್‌ಗಳನ್ನು ತಲುಪಿದ್ದಾರೆ.

ಮೊದಲ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಆರಂಭ ಸಹ ಕಳಪೆಯಾಗಿತ್ತು. ತಂಡ 31 ರನ್‌ ಆಗುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತು. ಜೇಕ್ ವೆದರಾಲ್ಡ್, ಸ್ಟೀವನ್‌ ಸ್ಮಿತ್‌ (17), ಉಸ್ಮಾನ್‌ ಖವಾಜ, ಮಾರ್ನಸ್‌ ಲಂಬುಶೇನ್‌ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಟ್ರಾವಿಸ್‌ ಹೆಡ್‌ (21), ಕ್ಯಾಮರೂನ್‌ ಗ್ರೀನ್ (24), ಅಲೆಕ್ಸ್‌ ಕ್ಯಾರಿ (26) ಸಹ ರನ್‌ ಸೇರಿಸಲು ಎಡವಿದರು. ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ಆಸೀಸ್‌ 9 ವಿಕೆಟ್‌ ನಷ್ಟಕ್ಕೆ 123 ರನ್ ಸೇರಿಸಿತು.

Story first published: Friday, November 21, 2025, 18:46 [IST]
Other articles published on Nov 21, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+