ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆಲ್ಲೋದು ಭಾರತವೇ ಎನ್ನುತ್ತಿವೆ ಅಂಕಿ-ಅಂಶಗಳು!

ಅಹ್ಮದಾಬಾದ್: ಇಂಗ್ಲೆಂಡ್-ಭಾರತ ನಡುವಿನ ಐದು ಪಂದ್ಯಗಳ ಟಿ20ಐ ಸರಣಿ ಈಗ ರೋಚಕ ಹಂತಕ್ಕೆ ಬಂದು ನಿಂತಿದೆ. ನಾಲ್ಕು ಪಂದ್ಯಗಳು ಮುಗಿದಿದ್ದು, ಭಾರತ 2, ಇಂಗ್ಲೆಂಡ್ 2 ಪಂದ್ಯಗಳನ್ನು ಗೆದ್ದು ಸರಣಿಯನ್ನು 2-2ರಿಂದ ಸಮಬಲಗೊಳಿಸಿಕೊಂಡಿವೆ. ಕೊನೇ ಮತ್ತು ನಿರ್ಣಾಯಕ ಪಂದ್ಯ ಮಾರ್ಚ್ 20ಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 7 pmಗೆ ಆರಂಭಗೊಳ್ಳಲಿದೆ.
ಕೊನೇ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ. ಈ ವರ್ಷ ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿರುವುದರಿಂದ ಈ ಟಿ20 ಸರಣಿಯ ಜಯ ಪ್ರತಿಷ್ಠೆಯ ಸಂಗತಿಯೆನಿಸಿದೆ. ಅಲ್ಲದೆ ಬಲಿಷ್ಠ ತಂಡವನ್ನೂ ಈ ಸರಣಿಯ ಫಲಿತಾಂಶ ನಿರ್ಣಯಿಸಲಿದೆ.

ಭಾರತವೇ ಗೆಲ್ಲುವ ನೆಚ್ಚಿನ ತಂಡ
ವಿಶೇಷವೆಂದರೆ ಭಾರತ-ಇಂಗ್ಲೆಂಡ್ ಈ ಟಿ20ಐ ಕುತೂಹಲಕಾರಿ ಸರಣಿಯಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನ್ನುತ್ತಿವೆ ಅಂಕಿ-ಅಂಶಗಳು. ಟಿ20ಐ ಸರಣಿಯಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಭಾರತ ಗೆದ್ದಿರುವ ದಾಖಲೆಯಿದೆ. ಈಚೆಗಿನ ಟಿ20ಐ ಸರಣಿಗಳನ್ನು ಗಮನಿಸಿದರೆ ಭಾರತವೇ ಗೆದ್ದಿರುವುದು ಹೆಚ್ಚು. ಅದರಲ್ಲೂ ತವರಿನಲ್ಲಿ ನಡೆದ ಹೆಚ್ಚಿನ ಸರಣಿಗಳಲ್ಲಿ ಭಾರತ ಗೆದ್ದಿದೆ.

ಡಿಸೈಡಿಂಗ್ ಸರಣಿಯಲ್ಲಿ ಭಾರತದ್ದೇ ಮೇಲುಗೈ
2016ರ ವರ್ಲ್ಡ್ ಟಿ20 ಬಳಿಕ ಆಡಿದ ಒಟ್ಟು 9 ಡಿಸೈಡಿಂಗ್ ಟಿ20ಐ ಸರಣಿಗಳಲ್ಲಿ ಭಾರತ 8ರಲ್ಲಿ ಗೆದ್ದಿದೆ. ಡಿಸೈಡಿಂಗ್ ಟಿ20ಐ ಸರಣಿ ಅಂದರೆ ಸಮ ಸಂಖ್ಯೆಗೆ ಬದಲಾಗಿ 3 ಅಥವಾ ಹೆಚ್ಚು ಬೆಸ ಸಂಖ್ಯೆಗಳ ಪಂದ್ಯಗಳ ಸರಣಿಯಲ್ಲಿ ಹೆಚ್ಚಿನದರಲ್ಲಿ ಭಾರತವೇ ಗೆದ್ದಿದೆ. ಡಿಸೈಡಿಂಗ್ ಟಿ20ಐ ಸರಣಿಯಲ್ಲಿ ಭಾರತ ಸೋತಿದ್ದು 2018-19ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮಾತ್ರ. ಆವತ್ತು ನ್ಯೂಜಿಲೆಂಡ್ ಈ ಸರಣಿಯನ್ನು 2-1ರಿಂದ ಗೆದ್ದಿತ್ತು.

2018ರಿಂದಿಗೀಚಿನ ಟಿ20 ಸರಣಿಗಳ ಫಲಿತಾಂಶ
(ತೀರಾ ಹಿಂದಕ್ಕೆ ಹೋಗುವ ಬದಲು 2018ರಿಂದಿಗೀಚಿನ ಟಿ20 ಸರಣಿಗಳ ಫಲಿತಾಂಶಗಳತ್ತ ಕಣ್ಣಾಯಿಸೋಣ)
* ಭಾರತ vs ನ್ಯೂಜಿಲೆಂಡ್, ವಿದೇಶದಲ್ಲಿ ಸರಣಿ ನಡೆದಿದ್ದು, 3 ಪಂದ್ಯಗಳು, 1 ಗೆಲುವು, 2 ಸೋಲು, ನ್ಯೂಜಿಲೆಂಡ್‌ಗೆ ಸರಣಿ, 2018/19
* ಭಾರತ vs ಆಸ್ಟ್ರೇಲಿಯಾ, ತವರಿನಲ್ಲಿ ಸರಣಿ, 2 ಪಂದ್ಯಗಳು, ೦ ಗೆಲುವು, 2 ಸೋಲು, ಆಸ್ಟ್ರೇಲಿಯಾಕ್ಕೆ ಸರಣಿ, 2018/19
* ವೆಸ್ಟ್ ಇಂಡೀಸ್ vs ಭಾರತ, ತವರಿನಲ್ಲಿ ಸರಣಿ, 3 ಪಂದ್ಯಗಳು, 3 ಗೆಲುವು, 0 ಸೋಲು, ಭಾರತಕ್ಕೆ ಸರಣಿ, 2019
* ದಕ್ಷಿಣ ಆಫ್ರಿಕಾ vs ಭಾರತ, ತವರಿನಲ್ಲಿ ಸರಣಿ, 2 ಪಂದ್ಯ, 1 ಗೆಲುವು, 1 ಸೋಲು, ಸರಣಿ ಡ್ರಾ, 2019/20
* ಭಾರತ vs ಬಾಂಗ್ಲಾದೇಶ, ತವರಿನಲ್ಲಿ ಸರಣಿ, 3 ಪಂದ್ಯ, 2 ಗೆಲುವು, 1 ಸೋಲು, ಭಾರತಕ್ಕೆ ಸರಣಿ, 2019/20
* ಭಾರತ vs ವೆಸ್ಟ್ ಇಂಡೀಸ್, ತವರಿನಲ್ಲಿ ಸರಣಿ, 3 ಪಂದ್ಯ, 2 ಗೆಲುವು, 1 ಸೋಲು, ಭಾರತಕ್ಕೆ ಸರಣಿ, 2019/20
* ಭಾರತ vs ಶ್ರೀಲಂಕಾ, ತವರಿನಲ್ಲಿ ಸರಣಿ, 3 ಪಂದ್ಯ, 2 ಗೆಲುವು, 0 ಸೋಲು, ಭಾರತಕ್ಕೆ ಸರಣಿ, 2019/20
* ಭಾರತ vs ನ್ಯೂಜಿಲೆಂಡ್, ವಿದೇಶದಲ್ಲಿ ಸರಣಿ, 5 ಪಂದ್ಯಗಳು, 5 ಗೆಲುವು, 0 ಸೋಲು, ಭಾರತಕ್ಕೆ ಸರಣಿ, 2019/20
* ಆಸ್ಟ್ರೇಲಿಯಾ, ವಿದೇಶದಲ್ಲಿ ಸರಣಿ, 3 ಪಂದ್ಯಗಳು, 2 ಗೆಲುವು, 1 ಸೋಲು, ಭಾರತಕ್ಕೆ ಸರಣಿ, 2020/21
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications