Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸುರಕ್ಷಿತವಾಗಿರಿ, ನಿಮ್ಮ ಸುತ್ತಮುತ್ತಲಿನವರಿಗೆ ನೆರವಾಗಿ: ಜಡೇಜಾ

Stay safe and help those around you: Ravindra Jadeja

ನವದೆಹಲಿ: ಕೋವಿಡ್-19 ದ್ವಿತೀಯ ಅಲೆ ಭಾರತದಲ್ಲಿ ಗಂಭೀರ ಪರಿಣಾಮ ಬೀರಿದೆ. ಕೊರೊನಾವೈರಸ್‌ನಿಂದಾಗಿ ಭಾರತದಲ್ಲಿ ಜನಜೀವನ ಸಂಕಷ್ಟಕ್ಕೀಡಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ರವೀಂದ್ರ ಜಡೇಜಾ ಪಿಡುಗಿನ ಸಂದರ್ಭದಲ್ಲಿ ಜನರಿಗೆ ಸಂದೇಶ ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿತ್ತು. ಇದರಲ್ಲಿ ಕಾಣಿಸಿಕೊಂಡಿದ್ದ ಜಡೇಜಾ, 'ಮನೆಯಲ್ಲಿರಿ, ಸುರಕ್ಷಿತವಾಗಿರಿ. ಜೊತೆಗೆ ನಿಮ್ಮ ಕುಟುಂಬಸ್ಥರು ಮತ್ತು ಸುತ್ತಮುತ್ತಲಿನವರನ್ನೂ ಸುರಕ್ಷಿತವಾಗಿಡಿ. ಯಾಕೆಂದರೆ ಈ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡಬೇಕು,' ಎಂದಿದ್ದಾರೆ.

'ದಯವಿಟ್ಟು ನಿಮ್ಮ ಮಾಸ್ಕ್ ಧರಿಸಿ, ಆಗಾಗ ಕೈಗೆ ಸ್ಯಾನಿಟೈಸರ್ ಬಳಸುತ್ತಿರಿ. ಹಾಗೆ ನಿಮ್ಮ ಸುತ್ತಮುತ್ತಲಿನವರಿಗೆ ಸಹಾಯ ಬೇಕಿದ್ದರೆ ಸಹಾಯ ಮಾಡಿ. ಯಾಕೆಂದರೆ ಕೆಲವೊಮ್ಮೆ ಕೆಲವರು ಸಹಾಯ ಕೇಳಲು ಅಂಜಿಕೊಳ್ಳುತ್ತಾರೆ. ಹೀಗಾಗಿ ಮುಜುಗರವಿಲ್ಲದೆ ಮುಂದೆ ಬಂದು ಸಹಾಯ ಬೇಕಿದ್ದರೆ ಕೇಳಲು ಹೇಳಿ,' ಎಂದು ಜಡೇಜಾ ಜನರಲ್ಲಿ ಕೋರಿಕೊಂಡಿದ್ದಾರೆ.

ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಿದ್ದಷ್ಟೇ ಅಲ್ಲ, ಇಂಡಿಯನ್ ಪ್ರೀಮಿಯರ್ ಲೀಗ್‌ ಬಯೋಬಬಲ್ ಒಳಗೂ ಸೋಂಕು ಪ್ರವೇಶಿಸಿ ಭೀತಿ ಹುಟ್ಟಿಸಿತ್ತು. ಹೀಗಾಗಿ ಉದ್ದೇಶಿತ ಟೂರ್ನಿಯನ್ನು ಅಮಾನತುಗೊಳಿಸಲಾಗಿದೆ.

Story first published: Friday, May 7, 2021, 17:42 [IST]
Other articles published on May 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+