Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ನಲ್ಲಿ ತಮ್ಮ ಯಶಸ್ಸಿನ ಗುಟ್ಟೇನೆಂಬುದನ್ನು ಬಿಚ್ಚಿಟ್ಟ ಆರ್ಚರ್‌

ICC World Cup 2019 : ಇಂಗ್ಲೆಂಡ್ ಫೈನಲ್ ತಲುಪಲು ಆರ್ಚರ್ ಯಶಸ್ಸೇ ಕಾರಣ..? | Joffra Archer
Staying calm is the mantra for success, feels Jofra Archer

ಲಂಡನ್‌, ಜುಲೈ 12: ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ 27 ವರ್ಷಗಳ ಬಳಿಕ ವಿಶ್ವಕಪ್‌ ಟೂರ್ನಿಯ ಫೈನಲ್‌ ತಲುಪುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿರುವ ಯುವ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ತಮ್ಮ ಯಶಸ್ಸಿನ ಹಿಂದಿರುವ ಗುಟ್ಟೇನು ಎಂಬುದರ ಕುರಿತಾಗಿ ಮಾತನಾಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್‌ ಫಿಂಚ್‌ ಅವರನ್ನು ಶೂನ್ಯಕ್ಕೆ ಎಲ್‌ಬಿಡಬ್ಲ್ಯೂ ಬಲಗೆ ಬೀಳಿಸಿದ ಆರ್ಚರ್‌, ತಂಡದ ಎಂಟು ವಿಕೆಟ್‌ಗಳ ಭರ್ಜರಿ ಗೆಲುವಿಗೆ ಮುನ್ನುಡಿ ಬರೆದಿದ್ದರು. ಇದೀಗ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಅಪಾಯಕಾರಿ ನ್ಯೂಜಿಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ.

ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಕುರಿತಾಗಿ ಮಾತನಾಡಿದ ಇಂಗ್ಲೆಂಡ್‌ ನಾಯಕ!

ಇನ್ನು ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದು ಇದೇ 24 ವರ್ಷದ ಯುವ ವೇಗಿ ಆರ್ಚರ್‌. ತಮ್ಮ ಅದ್ಭುತ ವೇಗದ ಮೂಲಕ ಮೊದಲಿಗೆ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಕೇರಿ ಅವರ ಹೆಲ್ಮೆಟ್‌ ಎಗರಿಸಿದ್ದರು. ಬಳಿಕ ಇನ್ನೇನು ಸ್ಫೋಟಕ ಬ್ಯಾಟಿಂಗ್‌ ನಡೆಸಲು ಸಜ್ಜಾಗುತ್ತಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ವಿಕೆಟ್‌ ಕೂಡ ಪಡೆದು ಆಸೀಸ್‌ಗೆ ಅಂಕುಶ ಹಾಕಿದರು.

"ನಾನು ಅತ್ಯಂತ ಶಾಂತ ಸ್ವಭಾವದವನು. ನಾನು ಸದಾ ಹೀಗೆಯೇ. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂಬುದರ ಕಡೆಗೆ ಗಮನ ನೀಡುತ್ತೇನೆ. ಏಕೆಂದರೆ ಶಾಂತಿಯುತವಾಗಿ ಇದ್ದಷ್ಟು ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಬರುತ್ತದೆ," ಎಂದು ತಮ್ಮ ಯಶಸ್ಸಿನ ಹಿಂದಿರುವ ಗುಟ್ಟನ್ನು ಆರ್ಚರ್‌ ಬಿಚ್ಚಿಟ್ಟಿದ್ದಾರೆ.

ಬಾರ್ಬೇಡೊಸ್‌ ಮೂಲದ ಇಂಗ್ಲೆಂಡ್‌ ಆಟಗಾರ ಜೋಫ್ರಾ ಆರ್ಚರ್‌ ಆಸ್ಟ್ರೇಲಿಯಾ ಎದುರು 10 ಓವರ್‌ಗಳಲ್ಲಿ 32ಕ್ಕೆ 2 ವಿಕೆಟ್‌ ಪಡೆದಿದ್ದರು. "ಇಷ್ಟಕ್ಕೆ ಮುಗಿದಿಲ್ಲ. ಪಂದ್ಯಗಳನ್ನು ಆಡಿ ತಂಡಕ್ಕೆ ಜಯ ತಂದುಕೊಡುವುದನ್ನು ಆನಂದಿಸುತ್ತಿದ್ದೇನೆ. ಸೆಮಿಫೈನಲ್‌ನಲ್ಲಿ ನಮ್ಮ ತಂಡ ಮೊದಲು ಬ್ಯಾಟ್‌ ಮಾಡಬೇಕೆಂದಿತ್ತು. ಆದರೆ, ನನಗೆ ಮೊದಲು ಬೌಲಿಂಗ್‌ ಮಾಡಿ ನನ್ನ ಕೆಲಸ ಮುಗಿಸುವುದೆಂದರೆ ಇಷ್ಟ. ಮೊದಲ ವಿಕೆಟ್‌ ಪತನದ ಬಳಿಕ ಎಲ್ಲರಲ್ಲೂ ಭಾವನೆಗಳು ಹರಿದಾಡುತ್ತಿದ್ದವು. ಎಲ್ಲರೂ ಹೆಚ್ಚು ಏಕಾಗ್ರತೆಯಿಂದ ಆಡಲಾರಂಭಿಸಿದರು. ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವುದಕ್ಕೆ ಸಂತಸವಿದೆ. ತಂಡ ಗೆಲ್ಲುತ್ತಿದ್ದರೆ ನಾನು ಮಾಡುವ ತಪ್ಪುಗಳು ಕೂಡ ಮರೆಯಾಗುತ್ತವೆ. ಏಕೆಂದರೆ ಲಾರ್ಡ್ಸ್‌ನಲ್ಲಿ ನಾನು ಕೆಲ ಬಾರಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೂ ಕೆಲ ಬಾರಿ ನಿರಾಸೆ ಅನುಭವಿಸಿದ್ದೇನೆ. ಹೀಗಾಗಿ ಭಾನುವಾರ ನನ್ನ ಪಾಲಿಗಷ್ಟೇ ಅಲ್ಲ ಇಂಗ್ಲೆಂಡ್‌ ಪಾಲಿಗೂ ಉತ್ತಮವಾಗಿರಲಿ ಎಂದು ಆಶಿಸುತ್ತೇನೆ," ಎಂದು ಜೋಫ್ರ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

{headtohead_cricket_2_4}

Story first published: Friday, July 12, 2019, 20:33 [IST]
Other articles published on Jul 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+