Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೆಚ್ಚು ಕಾಲ ಬಯೋ ಬಬಲ್ಸ್‌ನಲ್ಲಿ ಉಳಿದುಕೊಳ್ಳೋದು ಕಷ್ಟ: ಕೊಹ್ಲಿ

Staying in bio-bubbles does get difficult at times, says Virat Kohli

ದುಬೈ: ಬೆನ್ನು ಬೆನ್ನಿಗೆ ಸರಣಿಗಳಲ್ಲಿ ಪಾಲ್ಗೊಂಡು ಬಯೋ ಬಬಲ್‌ನಲ್ಲಿ ಉಳಿದುಕೊಳ್ಳುವ ಬಗ್ಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂಥ ಸಮಯದಲ್ಲಿ ಹೆಚ್ಚು ಕಾಲ ಬಯೋ ಬಬಲ್ ಒಳಗೆ ಉಳಿದುಕೊಳ್ಳೋದು ಕೆಲವೊಮ್ಮೆ ಕಷ್ಟವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕರಾಗಿರುವ ವಿರಾಟ್ ಕೊಹ್ಲಿ, ಸದ್ಯ ಬಯೋ ಬಬಲ್ ಒಳಗಿದ್ದಾರೆ. ಐಪಿಎಲ್‌ ಬಳಿಕ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಹೋಗಲಿದೆ. ಅಲ್ಲೂ ಬಹು ಕಾಲ ಕೊಹ್ಲಿ ಬಯೋ ಬಬಲ್ ಒಳಗಿರಬೇಕಾದ ಅನಿವಾರ್ಯತೆ ಇದೆ.

ಆರ್‌ಸಿಬಿ ಟಿವಿ ಜೊತೆ ಮಾತನಾಡಿದ ವಿರಾಟ್ ಕೊಹ್ಲಿ, 'ಅದ್ಭುತ ವ್ಯಕ್ತಿಗಳು ಜೊತೆಗಿದ್ದಾಗ ಬಯೋ ಬಬಲ್ ಒಳಗಿರೋದು ಕಷ್ಟವಲ್ಲ. ಬಯೋ ಬಬಲ್‌ನ ಪ್ರತೀ ಭಾಗವೂ ನಿಜಕ್ಕೂ ತುಂಬಾ ಚೆನ್ನಾಗಿದೆ. ಇದೇ ಕಾರಣಕ್ಕೆ ನಾವೆಲ್ಲರೂ ಇಲ್ಲಿ ಎಂಜಾಯ್ ಮಾಡುತ್ತಿದ್ದೇವೆ. ಆದರೆ ಹೆಚ್ಚು ಕಾಲ ಬಯೋ ಬಬಲ್ ಒಳಗೆ ಉಳಿಯೋದು ಕೊಂಚ ಕಷ್ಟವಾಗುತ್ತದೆ,' ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ ಈಗಾಗಲೇ ಮುಕ್ತಾಯ ಹಂತಕ್ಕೆ ಬರುತ್ತಿದೆ. ಇನ್ನು ಅಂತಿಮ ಕೆಲವೇ ಪಂದ್ಯಗಳು ಬಾಕಿಯಿದ್ದು, ನವೆಂಬರ್ 6ರ ಶುಕ್ರವಾರ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಡಲಿವೆ. ನವೆಂಬರ್ 10ಕ್ಕೆ ಫೈನಲ್ ನಡೆಯಲಿದೆ.

Story first published: Friday, November 6, 2020, 11:49 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+