ಮೊದಲ ಬಾರಿಗೆ ಭಾರತದ ವಿರುದ್ಧ ಶೂನ್ಯ ಸುತ್ತಿದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಭಾರತದ ವಿರುದ್ಧದ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದಾರೆ. ಭಾರತದ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ದಾಖಲೆಯನ್ನು ಹೊಂದಿರುವ ಸ್ಟೀವ್ ಸ್ಮಿತ್ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ವಿರುದ್ಧ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ಸೆಶನ್‌ನಲ್ಲಿ ಭಾರತ ಉತ್ತಮ ಬೌಲಿಂಗ್ ದಾಳಿಯನ್ನು ಸಂಘಟಿಸಿತು. ಈ ವೇಳೆ ಆತಿಥೇಯರ ಮೂರು ವಿಕೆಟ್ ಪಡೆಯುವಲ್ಲಿ ಭಾರತ ಯಶಸ್ವಿಯಾಯಿತು. ಅದರಲ್ಲೂ ಸ್ಟೀವ್ ಸ್ಮಿತ್ ವಿಕೆಟ್‌ಅನ್ನು ಶೀಘ್ರವಾಗಿ ಪಡೆಯುವ ಮೂಲಕ ಆರ್ ಅಶ್ವಿನ್ ತಂಡಕ್ಕೆ ಮೇಲುಗೈ ಒದಗಿಸಿದರು.
ಸ್ಟೀವ್ ಸ್ಮಿತ್ ಮೆಲ್ಬರ್ನ್ ಅಂಗಳದಲ್ಲಿ ಅತ್ಯಂತ ವಿರಳ ಹಿನ್ನೆಡೆಯನ್ನು ಅನುಭವಿಸಿದ್ದಾರೆ. ಎಂಸಿಜಿಯಲ್ಲಿ ಸ್ಮಿತ್ ಶ್ರೇಷ್ಠ ಬ್ಯಾಟಿಂಗ್ ದಾಖಲೆಹೊಂದಿದ್ದು 113.5 ಸರಾಸರಿಯನ್ನು ಹೊಂದಿದ್ದಾರೆ. ಇಲ್ಲಿ ಸ್ಮಿತ್ ನಾಲ್ಕು ಶತಕ ಹಾಗೂ ನೂರು ಅರ್ಧ ಶತಕವನ್ನು ಬಾರಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂರೆ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಮಿತ್ ಶೂನ್ಯಕ್ಕೆ ಔಟಾಗುತ್ತಿರುವುದು ಇದೇ ಮೊದಲು.
ಇದಕ್ಕೂ ಮೊದಲು ಜಸ್ಪ್ರಿತ್ ಬೂಮ್ರಾ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಜೋ ಬರ್ನ್ಸ್ ಅವರನ್ನು ಕೂಡ ಶೂನ್ಯಕ್ಕೆ ಔಟ್ ಮಾಡಿದ್ದರು. ಅದಾದ ಬಳಿಕ ಆರ್ ಅಶ್ವಿನ್ ಮ್ಯಾಥ್ಯೂ ವೇಡ್ ಅವರನ್ನು 30 ರನ್‌ಗಳಿಗೆ ಬಲಿ ಪಡೆದರು.
ರಹಾನೆ ನಾಯಕತ್ವದಲ್ಲಿ ಎರಡನೇ ಪಂದ್ಯದಲ್ಲಿ ಭಾರತ ನಾಲ್ಕು ಬದಲಾವನೆ ಮಾಡಿಕೊಂಡಿದೆ. ಶುಭ್ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಎಕಟ್‌ಗೆ ಪದಾರ್ಪಣೆಯನ್ನು ಮಾಡಿದ್ದಾರೆ. ರವೀಂದ್ರ ಜಡೇಜಾ ಹಾಗೂ ರಿಷಫ್ ಪಂತ್ ಎರಡನೇ ಪಂದ್ಯದಲ್ಲಿ ಆಡುವ ಬಳಗಕ್ಕೆ ಸೇರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications