Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಹೊಸ ನಾಯಕನ ಆಯ್ಕೆ

ಮೆಲ್ಬೋರ್ನ್, ಆಗಸ್ಟ್ 14: ಮೈಕಲ್ ಕ್ಲಾರ್ಕ್ ಅವರಿಂದ ತೆರವಾಗಿರುವ ಆಸ್ಟ್ರೇಲಿಯಾ ತಂಡದ ಟೆಸ್ಟ್ ಸ್ಥಾನಕ್ಕೆ ಸ್ಟೀವನ್ ಸ್ಮಿತ್ ಅವರನ್ನು ನಾಯಕರನ್ನಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದೆ. ಡೇವಿಡ್ ವಾರ್ನರ್ ಅವರನ್ನು ಉಪ ನಾಯಕ ಎಂದು ಶುಕ್ರವಾರ ಘೋಷಿಸಲಾಗಿದೆ.

ಕಳೆದ ವಾರ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ ಆಷ್ಯಸ್ ಸರಣಿಯಲ್ಲಿ 3-1 ಅಂತರದಿಂದ ಸೋಲು ಅನುಭವಿಸಿದ ಮೇಲೆ ಆಸೀಸ್ ನಾಯಕ ಮೈಕಲ್ ಕ್ಲಾರ್ಕ್ ಅವರು ನಾಯಕತ್ವದಿಂದ ಕೆಳಗಿಳಿದು, ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆಷ್ಯಸ್ ಸರಣಿಯ ಐದನೇ ಹಾಗೂ ಕೊನೆ ಟೆಸ್ಟ್ ಪಂದ್ಯ ದಿ ಓವಲ್ ನಲ್ಲಿ ಆಗಸ್ಟ್ 20 ರಿಂದ 24ರ ತನಕ ನಡೆಯಲಿದ್ದು ಇದು ಅವರ ಕೊನೆ ಪಂದ್ಯವಾಗಲಿದೆ.

Steve Smith appointed Australia's Test captain, David Warner his deputy

26ವರ್ಷ ವಯಸ್ಸಿನ ಸ್ಮಿತ್ ಅವರು ಈಗಾಗಲೇ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅರೋನ್ ಫಿಂಚ್ ಅವರು ಟಿ20 ತಂಡದ ನಾಯಕರಾಗಿದ್ದಾರೆ. ಫಿಂಚ್ ಗಾಯಾಳುವಾಗಿರುವುದರಿಂದ ಟಿ20 ಪಂದ್ಯದಲ್ಲಿ ಸ್ಮಿತ್ ನಾಯಕತ್ವ ವಹಿಸಲಿದ್ದಾರೆ.

28 ವರ್ಷ ವಯಸ್ಸಿನ ವಾರ್ನರ್ ಅವರು ಐರ್ಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿ ಹಾಗೂ ಸೆಪ್ಟೆಂಬರ್ -ಅಕ್ಟೋಬರ್ ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಉಪ ನಾಯಕರಾಗಿರುತ್ತಾರ ಎಂದು ಆಯ್ಕೆಸಮಿತಿ ಸದಸ್ಯ ರಾಡ್ ಮಾರ್ಷ್ ಪ್ರಕಟಿಸಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+