For Quick Alerts
ALLOW NOTIFICATIONS  
For Daily Alerts
 

Steve Smith: ವಿದೇಶಿ ನೆಲದಲ್ಲಿ ಕೊಹ್ಲಿ ಮಾಡಿದ ದಾಖಲೆ ಮುರಿದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ದೊಡ್ಡ ದಾಖಲೆಯನ್ನು ಮುರಿದಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಿರುವ ನಾಯಕ ಸ್ಟೀವ್ ಸ್ಮಿತ್ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ತಮ್ಮ ವೃತ್ತಿಜೀವನದ 10000 ರನ್ ಪೂರೈಸಿದರು. ಅಲ್ಲದೆ, ಅಮೋಘ ಶತಕವನ್ನು ಬಾರಿಸುವ ಮೂಲಕ ಸಂಭ್ರಮಿಸಿದರು.

ಸ್ಟೀವ ಸ್ಮಿತ್ ಅವರ ಟೆಸ್ಟ್ ವೃತ್ತಿಜೀವನದ 35ನೇ ಶತಕವಾಗಿದೆ. ಸ್ಮಿತ್ 179 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಶತಕವನ್ನು ಪೂರೈಸಿದರು. ಅವರು 205 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 10000 ರನ್ ಪೂರೈಸಿದ್ದು, ಈ ಸಾಧನೆ ಮಾಡಿದ ವಿಶ್ವದ 15ನೇ ಆಟಗಾರ ಎನಿಸಿಕೊಂಡರು.

Steve Smith broke Virat Kohli record for most centuries in foreign soil

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಗಳಿಸಿದ ಶತಕ ವಿದೇಶ ಪ್ರವಾಸದಲ್ಲಿ ಬಂದ 17ನೇ ಶತಕವಾಗಿದೆ. ಇದರೊಂದಿಗೆ ಸ್ಟೀವ್ ಸ್ಮಿತ್ ಇತರ ದೇಶಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರು. ವಿರಾಟ್ ಕೊಹ್ಲಿ ಭಾರತದ ಹೊರಗೆ ಗರಿಷ್ಠ 16 ಟೆಸ್ಟ್ ಶತಕಗಳನ್ನು ಸಿಡಿಸಿದ್ದಾರೆ. ಸ್ಮಿತ್ ಈಗ 10000 ರನ್ ಗಳಿಸಿದವರ ಪಟ್ಟಿಯಲ್ಲಿ ತನ್ನ ದೇಶದ ರಿಕಿ ಪಾಂಟಿಂಗ್, ಅಲನ್ ಬಾರ್ಡರ್ ಮತ್ತು ಸ್ಟೀವ್ ವಾ ಅವರ ಕ್ಲಬ್ ಸೇರಿದ್ದಾರೆ. ಸಚಿನ್ ತೆಂಡೂಲ್ಕರ್ 15921 ರನ್ ಗಳಿಸಿ ಟೆಸ್ಟ್ ಮಾದರಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಸಚಿನ್ ತೆಂಡೂಲ್ಕರ್ (51 ಶತಕ), ಜಾಕ್ವೆಸ್ ಕಾಲಿಸ್ (45 ಶತಕ), ಕುಮಾರ ಸಂಗಕ್ಕಾರ (41 ಶತಕ), ಕುಮಾರ ಸಂಗಕ್ಕಾರ (38 ಶತಕ) ನಂತರ ಮಾತ್ರ. ಜೋ ರೂಟ್ (36 ಶತಕ) ಮತ್ತು ರಾಹುಲ್ ದ್ರಾವಿಡ್ (36 ಶತಕ) ಹಿಂದೆ ಇದ್ದಾರೆ. ಇದಲ್ಲದೇ, ಸ್ಮಿತ್ ವೇಗದ 35 ಟೆಸ್ಟ್ ಶತಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದ್ದಾರೆ. ಅವರು ತಮ್ಮ 205ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಈಗ ರಿಕಿ ಪಾಂಟಿಂಗ್ (195 ಇನ್ನಿಂಗ್ಸ್‌) ಮತ್ತು ಸಚಿನ್ ತೆಂಡೂಲ್ಕರ್ (200 ಇನ್ನಿಂಗ್ಸ್‌) ನಂತರ ಸ್ಮಿತ್ ಇದ್ದಾರೆ.

ಮೊದಲ ಟೆಸ್ಟ್ ಪಂದ್ಯ

ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಎರಡನೇ ದಿನ ಆಸ್ಟ್ರೇಲಿಯಾ 6 ವಿಕೆಟ್‌ಗೆ 654 ರನ್ ಗಳಿಸುವ ಮೂಲಕ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. ಆಸೀಸ್ ಪರ ಖವಾಜಾ 232 ರನ್, ಹೆಡ್ 57 ರನ್, ಸ್ಮಿತ್ 141 ರನ್ ಮತ್ತು ಜೋಶ್ ಇಂಗ್ಲಿಷ್ 102 ರನ್ ಕಲೆ ಹಾಕಿದ್ದಾರೆ. ಶ್ರೀಲಂಕಾ ಪರ ಪ್ರಭಾತ್ ಜಯಸೂರ್ಯ ಮತ್ತು ವಂಡರ್ಸೆ ತಲಾ 3 ವಿಕೆಟ್ ಪಡೆದರು. ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿತು. ಇಂದು ಮೂರನೇ ದಿನದಾಟದ ಲಾಂಚ್ ಬ್ರೇಕ್ ವೇಳೆಗೆ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ.

Story first published: Friday, January 31, 2025, 12:11 [IST]
Other articles published on Jan 31, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+