'ಸ್ಮಿತ್, ವಾರ್ನರ್ ಉಪಸ್ಥಿತಿ ಸವಾಲೆನಿಸಬಹುದು, ಜಯ ಸುಲಭವಿಲ್ಲ'

ಸಿಡ್ನಿ: ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಉಪಸ್ಥಿತಿ ಆಸ್ಟ್ರೇಲಿಯಾ ತಂಡಕ್ಕೆ ಬಲ ತುಂಬಿದೆ. ಹಾಗಾಗಿ ಭಾರತ ಗೆಲ್ಲೋದು ಸುಲಭವಿಲ್ಲ ಎಂದು ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಹೇಳಿದ್ದಾರೆ. ಭಾರತೀಯ ಬೌಲರ್‌ಗಳು ಕೂಡ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಬಲ್ಲರು ಎಂದೂ ಪೂಜಾರ ಹೇಳಿದ್ದಾರೆ.
2018-19ನೇ ಇಸವಿಯಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಟೀಮ್ ಇಂಡಿಯಾ ಅಲ್ಲಿ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಆವತ್ತು ಪೂಜಾರ ಮೂರು ಶತಕಗಳಲ್ಲದೆ ಒಟ್ಟು 500+ ರನ್ ಗಳಿಸಿದ್ದರು. 71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ಟೆಸ್ಟ್ ಸರಣಿ ಗೆದ್ದಿದ್ದು ಅದೇ ಮೊದಲು.
'ಸ್ಮಿತ್, ವಾರ್ನರ್ ಸೇರ್ಪಡೆ 2018-19ಕ್ಕಿಂತ ಆಸ್ಟ್ರೇಲಿಯಾ ತಂಡವನ್ನು ಬಲಗೊಳಿಸಿರಬಹುದು. ಹಾಗಾಗಿ ನಾವು ಗೆಲ್ಲೋದು ಸುಲಭವಿಲ್ಲ. ತವರಿನಿಂದ ಹೊರಗೆ ನೀವು ಗೆಲ್ಲಬೇಕಾದರೆ ನೀವು ಪರಿಶ್ರಮ ಪಟ್ಟಿರಬೇಕು ಎಂದು ಪಿಟಿಐ ಜೊತೆ ಮಾತನಾಡಿದ ಪೂಜಾರ ಹೇಳಿದ್ದಾರೆ. 2018-19ರಲ್ಲಿ ನಿಷೇಧಕ್ಕೀಡಾಗಿದ್ದರಿಂದ ಸ್ಮಿತ್-ವಾರ್ನರ್ ಆಸೀಸ್‌ನಲ್ಲಿ ಆಡಿರಲಿಲ್ಲ.
ಭಾರತ ಟೆಸ್ಟ್ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಪೂಜಾರ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಲಿರುವ ಭಾರತ ತಂಡ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ, ಮೂರು ಪಂದ್ಯಗಳ ಟಿ20ಐ ಸರಣಿ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿ ನವೆಂಬರ್ 27ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications