Steve Smith: ಸ್ಟೀವನ್ ಸ್ಮಿತ್ ನಿವೃತ್ತಿ ಯಾವಾಗ? ಕ್ರಿಕೆಟಿಗ ಹೇಳಿದ್ದೇನು?
ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ದಿನಗಳೇ ಕಳೆದಿವೆ. ಸ್ಟೀವನ್ ಸ್ಮಿತ್ ತಮ್ಮ ಅನುಭವವನ್ನು ತಂಡಕ್ಕೆ ಧಾರೆ ಎರೆಯುತ್ತಿದ್ದಾರೆ. ಹಾಗಿದ್ದರೆ, ಸ್ಮಿತ್ ಕ್ರಿಕೆಟ್ ಮೈದಾನದಿಂದ ದೂರ ಸರಿಯುವುದು ಯಾವಾಗ ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.
ಡೇವಿಡ್ ವಾರ್ನರ್ ನಿವೃತ್ತಿ ಘೋಷಣೆ ಮಾಡಿ ದಿನಗಳೆ ಕಳೆದಿವೆ. ಈ ಬೆನ್ನಲ್ಲೆ ಈಗ ಸ್ಟೀವನ್ ಸ್ಮಿತ್ ಅವರ ವಿದಾಯದ ಬಗ್ಗೆ ಊಹಾಪೋಹಗಳು ಎದ್ದಿವೆ. ಸ್ಮಿತ್ ಸದ್ಯಕ್ಕೆ ಚುಟುಕು ಕ್ರಿಕೆಟ್ ಬಿಡುವ ಯಾವುದೇ ಉದ್ದೇಶವಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಸ್ಮಿತ್ ಮತ್ತೆ ಮೂರು ವರ್ಷಗಳ ಒಪ್ಪಂದವನ್ನು ಸಿಡ್ನಿ ಸಿಕ್ಸರ್ ತಂಡದ ಜೊತೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ನಾನು ಈ ಸ್ವರಪವನ್ನು ತೊರೆಯುವ ಮನಸ್ಸು ಇಲ್ಲ ಎಂದು ಸ್ಮಿತ್ ಸ್ಪಷ್ಟ ಪಡಿಸಿದ್ದಾರೆ.

ನಿವೃತ್ತಿ ಯಾವಾಗ?
ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ಟೀವನ್ ಸ್ಮಿತ್ ಚುಟುಕು ಕ್ರಿಕೆಟ್‌ನಲ್ಲಿ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಅಮೆರಿಕ- ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲೂ ಇವರು ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇಷ್ಟಾಗ್ಯೂ ಆಸೀಸ್ ಮಾಜಿ ನಾಯಕ ಇನ್ನು ಮೂರು ಫಾರ್ಮೆಟ್‌ಗಳನ್ನು ಆಡಬಲ್ಲೇ ಎಂದು ತಿಳಿಸಿದ್ದಾರೆ.
ನಿವೃತ್ತಿಯ ಬಗ್ಗೆ ಯೋಚನೆಯನ್ನು ಸಹ ಮಾಡಿಲ್ಲ ಎಂದು ಸ್ಟೀವನ್ ಸ್ಮಿತ್ ಹೇಳಿದ್ದಾರೆ. ಇದೇ ಸಮಯದಲ್ಲಿ ಕ್ರಿಕೆಟ್ ಆಟವನ್ನು ಎಂಜಾಯ್ ಮಾಡಲು ಬಯಸುತ್ತೇನೆ. ಮುಂಬರುವ ಬಿಬಿಎಲ್‌ನಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದು ಸ್ಮಿತ್ ತಿಳಿಸಿದ್ದಾರೆ.
ಸ್ಮಿತ್ ಟೆಸ್ಟ್ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ. ಯಾವುದೇ ಕ್ರಮಾಂಕದಲ್ಲಾದ್ರೂ ತಂಡಕ್ಕೆ ನೆರವಾಗುವ ಪ್ಲೇಯರ್. ಡೇವಿಡ್ ವಾರ್ನರ್ ಇತ್ತೀಚಿಗೆ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಿದ್ದಾರೆ. ಇವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಗಳು ಎದಿದ್ದವು. ಕೆಲವು ಸರಣಿಗಳಲ್ಲಿ ಸ್ಮಿತ್ ಆರಂಭಿಕರಾಗಿ ಪ್ಯಾಡ್ ಕಟ್ಟಿದರು. ಆದರೆ ಓಪನರ್ ಆಗಿ ತಮ್ಮ ಛಾಪು ಬಿಡುವಲ್ಲಿ ಸ್ಮಿತ್ ವಿಫಲರಾಗಿದ್ದಾರೆ.

ನಿರೀಕ್ಷಿತ ಸರಣಿಯ ಮೇಲೆ ಕಣ್ಣು
ಈಗ ಎಲ್ಲರ ಚಿತ್ತ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೇಲೆ ನೆಟ್ಟಿದೆ. ಈ ಸರಣಿಯಲ್ಲಿ ಸ್ಟೀವನ್ ಸ್ಮಿತ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ. ಈ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಐದು ಟೆಸ್ಟ್ ಪಂದ್ಯಗಳ ಸರಣಿ ನವೆಂಬರ್ 22 ರಿಂದ ಆರಂಭವಾಗಲಿದೆ. ಮಾಹಿತಿಯನ್ನು ನಂಬುವುದಾದರೆ, ಸ್ಮಿತ್ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಷ್ಟ ಪಡುತ್ತಾರೆ ಎಂದು ತಿಳಿದು ಬಂದಿದೆ.
ಭಾರತ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಲಿದೆ. ಈ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗುತ್ತಿದ್ದು, ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications