Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈರಲ್ ವಿಡಿಯೋ: ಧೋನಿಯ ಹೆಲಿಕಾಪ್ಟರ್ ಶಾಟ್ ಕದ್ದ ಆಸೀಸ್‌ನ ಸ್ಮಿತ್!

Steve Smith does a Dhoni, plays the helicopter shot to perfection

ನವದೆಹಲಿ, ನವೆಂಬರ್ 4: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಚೆಂಡು ವಿರೂಪದಲ್ಲಿ ಪಾಲ್ಗೊಂಡು ನಿಷೇಧಕ್ಕೀಡಾಗಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ, ಧೋನಿಯ ಫೇಮಸ್ ಹೆಲಿಕಾಪ್ಟರ್ ಶಾಟ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಭಾನುವಾರ (ನವೆಂಬರ್ 4) ಆಸ್ಟ್ರೇಲಿಯಾದಲ್ಲಿ ಸದರ್ಲ್ಯಾಂಡ್ ಮತ್ತು ಮ್ಯಾನ್ಲಿ-ವಾರಿಂಗ ತಂಡಗಳ ನಡುವಿನ ಎನ್‌ಎಸ್‌ಡಬ್ಲ್ಯೂ ಟಿ20 ಪ್ರೀಮಿಯರ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡಿದ್ದ ಸ್ಟೀವ್ ಸ್ಮಿತ್ ಬ್ಯಾಟಿಂಗ್ ವೇಳೆ ಹೆಲಿಕಾಪ್ಟರ್ ಶಾಟ್ ಬಾರಿಸಿ ಸಿಕ್ಸ್ ಬಾರಿಸಿದ್ದು ಸುತ್ತ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯಿತು.

ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಒಂದು ವರ್ಷ, ಕೆಮರಾನ್ ಬ್ಯಾನ್ಕ್ರಾಫ್ಟ್ 9 ತಿಂಗಳ ನಿಷೇಧಕ್ಕೆ ಗುರಿಯಾಗಿದ್ದಾರೆ. ಈ ಮೂವರೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಂತಿಲ್ಲ. ಆದರೆ ಕ್ಲಬ್ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಕಳೆದ ಮಾರ್ಚ್ ನಲ್ಲಿ ಕೇಪ್ ಟೌನ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸೀಸ್‌ನ ಈ ಮೂವರು ಆಟಗಾರರು ಚೆಂಡು ವಿರೂಪ ಪ್ರಕರಣದಲ್ಲಿ ಭಾಗವಹಿಸಿ ನಿಷೇಧಕ್ಕೆ ಒಳಪಟ್ಟಿದ್ದರು. ಆದರೆ ಈಗಲೂ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಡೇವಿಡ್ 5ನೇ ಸ್ಥಾನದಲ್ಲಿ, ಸ್ಟೀವ್ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ. ತಪ್ಪು ಮಾಡಿದ್ದು ನಿಜ. ಆದರೆ ಇವರಿಬ್ಬರೂ ಪ್ರತಿಭಾವಂತರು ಅನ್ನೋದಕ್ಕೆ ಇದೊಂದು ಕಾರಣ ಸಾಕು!

Story first published: Sunday, November 4, 2018, 21:44 [IST]
Other articles published on Nov 4, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+